Kumta landslide: ಮುರೂರಿನಲ್ಲಿ ರಸ್ತೆಗುರುಳಿದ ಬಂಡೆ
ಕುಮಟಾ:- ಉತ್ತರಕನ್ನಡದಲ್ಲಿ ಮಳೆಯ(rain) ಅಬ್ಬರದಿಂದ ಕುಮಟಾ ತಾಲೂಕಿನ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಗುಡ್ಡಕುಸಿತವಾಗಿದೆ.
11:16 PM May 25, 2025 IST | ಶುಭಸಾಗರ್
ಕುಮಟಾ:- ಉತ್ತರಕನ್ನಡದಲ್ಲಿ ಮಳೆಯ(rain) ಅಬ್ಬರದಿಂದ ಕುಮಟಾ ತಾಲೂಕಿನ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಗುಡ್ಡಕುಸಿತವಾಗಿದೆ.
Advertisement
ಕುಮಟಾ ತಾಲೂಕಿನ ಮುಸುಗುಪ್ಪ ಬಳಿ ಗುಡ್ಡ ಕುಸಿತವಾಗಿ ರಸ್ತೆಗೆ ದೊಡ್ಡ ಬಂಡೆಗಳು ಉರುಳಿ ಬಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಕಳೆದ ಮೂರು ದಿನದಿಂದ ಈ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕಡೆ ಗುಡ್ಡ ಕುಸಿತವಾಗುತ್ತಿದೆ.
ಸದ್ಯ ಈ ಭಾಗದಲ್ಲಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.
ಸದ್ಯ ಯಾವುದೇ ಸಮಸ್ಯೆ ಗಳಿಲ್ಲ .ಸವಾರರು ಇತರೆ ಭಾಗದಿಂದ ಸಂಚರಿಸಲು ತಿಳಿಸಲಾಗಿದೆ.
ಗುಡ್ಡದಲ್ಲಿ ಮಣ್ಣು ತೆಗೆದಿದ್ದೇ ಗುಡ್ಡ ಕುಸಿತಕ್ಕೆ ಕಾರಣ.
ಈ ಭಾಗದಲ್ಲಿ ಬೇಸಿಗೆಯಲ್ಲಿ ನಿರಂತರ ಮಣ್ಣು ತೆಗೆಯುತಿದ್ದು ಈ ಕಾರಣದಿಂದ ಮಣ್ಣು ಕುಸಿದು ಬಂಡೆ ರಸ್ತೆಗೆ ಬಂದಿದೆ ಎಂದು ಹೇಳಲಾಗಿದೆ. ಈ ಭಾಗದಲ್ಲಿ ಯಾವುದೇ ಜನ ವಸತಿ ಇಲ್ಲದ ಕಾರಣ ಯಾವುದೇ ಅವಘಡವಾಗಿಲ್ಲ.
Advertisement