ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು (Mundgodu)ಭಾಗದ ಸಿಂಗನಹಳ್ಳಿ, ಹುಲಿಹೊಂಡ ಗ್ರಾಮದಲ್ಲಿ ಆನೆಗಳ ತಂಡ ಬೀಡುಬಿಟ್ಟಿದ್ದು ,ಸ್ಥಳೀಯ ರೈತರು ಬೆಳೆದ ಮೆಕ್ಕೆ ಜೋಳದ ಹೊಲಕ್ಕೆ ದಾಳಿ ಇಟ್ಟು ಕೊಯ್ಲಿಗೆ ಬಂದ ಮೆಕ್ಕೆ ಜೋಳಗಳನ್ನು ನಾಶ ಪಡಿಸಿದೆ.

ಕಳೆದ ಹತ್ತು ದಿನದಿಂದ ದಾಂಡೇಲಿ ಭಾಗದಿಂದ ಕಿರುವತ್ತಿ ಭಾಗಕ್ಕೆ ಬಂದು ಬೀಡು ಬಿಟ್ಟಿದ್ದ ಐದುಆನೆಗಳು ಸಿಂಗನಹಳ್ಳಿ, ಹುಲಿಹೊಂಡ ಭಾಗಕ್ಕೆ ಬಂದು ದಾಂದಲೆ ಎಬ್ಬಿಸುತ್ತಿದೆ.
Advertisement
Astrology advertisement
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಇನ್ನು ಆನೆಗಳು ಕಿರುವತ್ತಿ ಹಾಗೂ ಮುಂಡಗೋಡು ಭಾಗದಲ್ಲಿ ಹೆಚ್ಚು ಓಡಾಟ ಮಾಡುತಿದ್ದು ರಾತ್ರಿ ವೇಳೆ ಗೊಲಗಳಿವೆ ನುಗ್ಗುತ್ತಿವೆ .ಹೀಗಾಗಿ ರೈತರು ಎಚ್ಚರಿಕೆಯಿಂದ ಇರಲು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.