Mundgod : ಉದ್ಯಮಿ ಅಪಹರಣ ಪ್ರಕರಣ ,ಐದು ಜನರ ಬಂಧನ

Mundgod:- ಉತ್ತರ ಕನ್ನಡ (uttara kannda) ಜಿಲ್ಲೆಯ ಮುಂಡಗೋಡು(mundgod) ಪಟ್ಟಣದ ಉದ್ಯಮಿ ಜಮೀರ್ ಅಹ್ಮದ ದರ್ಗಾವಾಲೆ ಯನ್ನು ಅಪಹರಣ ಮಾಡಿದ ಐದು ಜನರನ್ನು ಮುಂಡಗೋಡು ಪೊಲೀಸರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ:-Mundgod : ಸಿನಿಮೀಯ ರೀತಿಯಲ್ಲಿ ಚಾಕು ತೋರಿಸಿ ಉದ್ಯಮಿ ಅಪಹರಣ
ನಿನ್ನೆ ದಿನ ಸ್ಕೂಟಿಯಲ್ಲಿ ಸ್ನೇಹಿತನೊಂದಿಗೆ ಬರುತಿದ್ದಾಗ ಹಿಂಬದಿಯಿಂದ ಬಿಳಿ ಕಾರೊಂದು(car) ಡಿಕ್ಕಿ ಹೊಡೆದು ಬೀಳಿಸಿ ಅಪಹರಣ ಮಾಡಿದ್ದರು.
ಈ ಕುರಿತು ಕಾರವಾರದಲ್ಲಿ (karwar) ಉತ್ತರ ಕನ್ನಡ ಎಸ್.ಪಿ ಎಂ.ನಾರಾಯಣ ರವರು ಪ್ರತಿಕ್ರಿಯೆ ನೀಡಿದ್ದು
ನಿನ್ನೆ ರಾತ್ರಿ ಜಮೀರ ಬೈಕ್ ನಲ್ಲಿ ಹೊಗುತ್ತಿರುವಾಗ ಹಿಂದಿನಿಂದ ಕಾರಿನಿಂದ ಗುದ್ದಿದ್ದಾರೆ, ಕಾರು ಗುದ್ದುತ್ತಿದ್ದಂತೆ ಬೈಕ್ ಸವಾರ ಜಮೀರ್ ದರ್ಗಾವಾಲೆ ಬೈಕಿನಿಂದ ಕೆಳಕ್ಕೆ ಬಿದಿದ್ದಾನೆ.ಕೂಡಲೆ ಜಮೀರ್ ಹಾಗೂ ಆತನ ಜೊತೆ ಇದ್ದವನ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿ ಜಮೀರ್ ದರ್ಗಾವಾಲೆ ಎಂಬಾತನನ್ನ ಕಾರಿನಲ್ಲಿ ಹಾಕಿ ಒಯ್ಯಲಾಗಿತ್ತು. ಪ್ರಕರಣ ದಾಖಲಿಸಿ ಮುಂಡಗೋಡ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿತ್ತು.

ಅಪಹರಣ ಮಾಡಿದವರು ಜಮೀರ್ ಕುಟುಂಬಸ್ಥರಿಗೆ ಕರೆ ಮಾಡಿ 35 ಲಕ್ಷ ರೂಪಾಯಿ ಡಿಮ್ಯಾಂಡ್ ಕೂಡ ಮಾಡಿದ್ದರು.ಹಣ ಕೊಡದೆ ಇದ್ರೆ ಜಮೀರ್ ನನ್ನು ಕೊಲೆ ಮಾಡಿ ಸಾಯಿಸುವುದಾಗಿ ಬೇದರಿಸಿದ್ದರು.
ನಿರಂತರ ಅವರನ್ನು ಟ್ರೇಸ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ
ಬೆಳಗಿನ ಜಾವ 4 ಗಂಟೆಗೆ ಹಾವೇರಿ ಬಳಿಯ ಟೋಲ್ ಗೇಟ್ ನಲ್ಲಿ ಜಮೀರ್ ನನ್ನು ಬಿಟ್ಟು ಹೋಗಿದ್ದಾರೆ.
ಆತನ ಕಾಲಿಗೆ ಚಾಕುವಿನಿಂದ ಚುಚ್ಚಿ ಅತಿಯಾಗಿ ಗಾಯ ಮಾಡಿದ್ದಾರೆ.ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು
ಇನ್ನು ಅಪಹರಣ ಮಾಡಿ ಬಿಟ್ಟುಹೋದ ಐದು ಜನ ಅಪಹರಣಕಾರರನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮುಂಡಗೋಡು ಪೊಲೀಸರು ಬಂಧಿಸಿದ್ದಾರೆ.