ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

30 ವರ್ಷ ಸಂಸದರಾದ ಅನಂತಕುಮಾರ್ ಹೆಗಡೆ ರಣಾಂಗಣ ಹೇಗಿತ್ತು? ಅಂದಿನಿಂದ ಇಂದಿನ ವರೆಗೆ ಗಳಿಸಿದ ಮತವೆಷ್ಟು ಗೊತ್ತಾ?

01:35 PM Mar 30, 2024 IST | ಶುಭಸಾಗರ್

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆಗೆ (mp ananthkumar hegde uttra Kannada) ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಮುಂದಿದ್ದರೂ ಟಿಕೆಟ್ ಗಳಿಸಿಕೊಳ್ಳಲು ಎಡವಿದ್ದ ಹೆಗಡೆ ಪ್ರಭಾವ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿದೆ. ಹಿಂದುತ್ವದ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಂಡು ಪ್ರತಿ ಬಾರಿಯೂ ತನ್ನ ಮತದ ಸಂಖ್ಯೆಯನ್ನು ಸಾವಿರದಿಂದ ಲಕ್ಷಕ್ಕೆ ಏರಿಸಿಕೊಂಡ ಕೀರ್ತಿ ಹೆಗಡೆಯದ್ದು.

Advertisement

ಒಂದುಬಾರಿ ಸೋತರೂ ನಂತರ ತಿರುಗಿ ನೋಡದ ಹೆಗಡೆ ಕಳೆದ ಚುನಾವಣೆಯಲ್ಲೇ ರಾಜಕೀಯ ನಿವೃತ್ತಿಗೆ ಮನಸ್ಸು ಮಾಡಿದ್ದರು. ಆದರೇ ಇವರ ಸಾಮರ್ಥ್ಯ ಕ್ಕೆ ಮತ್ತೆ ಅವಕಾಶ ಕೊಟ್ಟು ರಾಜ್ಯ ಸಚಿವರೂ ಆದರು.

ಇದನ್ನೂ ಓದಿ:-ವಿಶ್ವ ಪ್ರಸಿದ್ಧ ಯಾಣದಲ್ಲಿ ದೇಶದ ಮೊದಲ Wi-Fi -7 ಸೇವೆ -ಹೇಗೆ ಬಳಸೋದು? ವಿಶೇಷ ಏನು

ಏಳು ಬಾರಿ ಸ್ಪರ್ಧಿಸಿ ಆರು ಬಾರಿ ಸಂಸದರಾಗಿ 30 ವರ್ಷಗಳ ಕಾಲ ಮೇಲ್ಮನೆಯಲ್ಲಿ ಸೇವೆಗೈದ ಹಿಂದೂ ಫೈರ್ ಬ್ಯಾಂಡ್ ಕ್ಯಾತಿ ಪಡೆದ ಅನಂತಕುಮಾರ್ ಹೆಗಡೆ ರಾಜಕೀಯ ಜೀವನ ಹೇಗಿತ್ತು ? ಯಾವಾಗ ಮೊದಲು ಸ್ಪರ್ಧೆ ಮಾಡಿದ್ರು? ಯಾರನ್ನ ಎಷ್ಟು ಮತದಲ್ಲಿ ಸೋಲಿಸಿದ್ರು ,ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

Advertisement

ಅನಂತಕುಮಾರ್ ಹೆಗಡೆ 1996 ರಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆ ಆದ್ರು.
1996 ರಲ್ಲಿ 2,76,311 ಮತಗಳನ್ನು ಪಡೆದು ಗೆದ್ದರೇ ಜನತಾದಳದ ಪ್ರಮೋದ್ ಹೆಗಡೆ 2,20,415 ಮತ ಪಡೆದು 55,896 ಮತಗಳ ಅಂತರದಲ್ಲಿ ಸೋತರೇ ,ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಆರ್.ಎನ್ ನಾಯ್ಕ 88,609 ಮತ ಗಳಿಸಿ ಮೂರನೇ ಸ್ಥಾನಕ್ಕಿಳಿದಿದ್ದರು.

ಇದನ್ನೂ ಓದಿ:-ಎಲಕ್ಷನ್ ಪ್ರಚಾರ ಬಿಟ್ಟು ಮಾರಿ ಜಾತ್ರೆ ರೌಂಟ್ಸ್ ಹಾಕಿದ ಅಂಜಲಿ ನಿಂಬಾಳ್ಕರ್ !

1998ರಲ್ಲಿ 3,63,051 ಮತ ಪಡೆದು ಅನಂತಕುಮಾರ್ ಹೆಗಡೆ ಬಿಜೆಪಿಯಿಂದ ಗೆದ್ದರೇ 2,76,004 ಮತ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಮಾರ್ಗರೇಟ್ ಆಳ್ವ 87,047 ಮತದ ಅಂತರದಲ್ಲಿ ಸೋತರು. ಈ ಸಂದರ್ಭದಲ್ಲಿ 14,818 ಮತಗಳು ತಿರಸ್ಕೃತವಾಗಿದ್ದವು.

1999 ರಲ್ಲಿ ಕಾಂಗ್ರೆಸ್ ನ ಮಾರ್ಗರೇಟ್ ಆಳ್ವ ರವರು 3,56,246 ಮತ ಪಡೆದು ಗೆದ್ದರೇ ಬಿಜೆಪಿಯ ಅನಂತಕುಮಾರ್ ಹೆಗಡೆ 3,45,655 ಮತ ಪಡೆದು 10,591 ಮತಗಳ ಅಂತರದಲ್ಲಿ ಮೊದಲಬಾರಿ ಸೋತರು. ಈ ವೇಳೆ 29,008 ಮತಗಳು ತಿರಸ್ಕೃತಗೊಂಡಿದ್ದವು.

ಇದನ್ನೂ ಓದಿ:-Kumta|18 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತಿದ್ದ ಸೇತುವೆಕುಸಿತ.

2004 ರಲ್ಲಿ ಬಿಜೆಪಿಯ ಅನಂತಕುಮಾರ್ ಹೆಗಡೆ 4,33,174 ಮತ ಪಡೆದು ಗೆದ್ದರೇ ಕಾಂಗ್ರೆಸ್ ನ ಮಾರ್ಗರೇಟ್ ಆಳ್ವ 2,60,948 ಮತ ಗಳಿಸಿ 172226 ಮತದ ದೊಡ್ಡ ಅಂತರದಲ್ಲಿ ಸೋತರು.

2009 ರಲ್ಲಿ ಬಿಜೆಪಿಯ ಅನಂತಕುಮಾರ್ ಹೆಗಡೆ 3,39,300 ಮತ ಪಡೆದು ಆಯ್ಕೆಯಾದರೇ ಕಾಂಗ್ರೆಸ್ ನ ಮಾರ್ಗರೇಟ್ ಆಳ್ವ 3,16,531 ಮತ ಗಳಿಸಿ 22,769 ಮತಗಳ ಅಂತರದಲ್ಲಿ ಸೋತರು.

2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅನಂತಕುಮಾರ್ ಹೆಗಡೆ 5,46,476 ಮತ ಪಡೆದು ಗೆದ್ದರೇ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಆರ್.ವಿ ದೇಶಪಾಂಡೆ ಪುತ್ರ 4,06,116 ಮತಗಳನ್ನು ಪಡೆದು 1,40,360 ಮತದ ಅಂತರದಲ್ಲಿ ಸೋತರು.

ಇದನ್ನೂ ಓದಿ:-ಬಿಜೆಪಿಯಲ್ಲಿ ಫೌಂಡೇಶನ್ ಹಾಕಿದವರೇ ಹೊರಕ್ಕೆ -ಡಿಕೆ ಶಿವಕುಮಾರ್

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ
ಅನಂತಕುಮಾರ ಹೆಗಡೆ 7,86,042 ಮತಗಳನ್ನು ಪಡೆದು ಗೆಲವು ಕಂಡರೇ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ 3,06,393 ಮತಗಳನ್ನು ಪಡೆದು 4,79,649 ಮತಗಳ ಅಂತರದಲ್ಲಿ ಸೋಲು ಕಂಡರು.

ಬಿಜೆಪಿಯ ಸಂಸದ ಅನಂತಕುಮಾರ ಹೆಗಡೆ ಪ್ರತಿ ಚುನಾವಣೆಯಲ್ಲೂ( election) ತನ್ನ ಮತಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿದ್ದು ಹಿಂದಿನ ಚುನಾವಣೆಯಲ್ಲಿ ದೇಶದಲ್ಲೇ ಅತೀ ಹೆಚ್ಚು ಮತ ಪಡೆದ ಸಂಸದರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

ಆದ್ರೆ ಇದೀಗ ಅನಂತಕುಮಾರ್ ಹೆಗಡೆ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅಭ್ಯರ್ಥಿ ಆಗಿದ್ದಾರೆ. ಈ ಬಾರಿ ಕಾಂಗ್ರೆಸ್ ನಿಂದ ಅಂಜಲಿ ನಿಂಬಾಳ್ಕರ್ ಕಣಕ್ಕಿಳಿದಿದ್ದಾರೆ. ಎರಡು ಪಕ್ಷಕ್ಕೂ ಲೋಕಸಭೆ ಗೆ ಹೊಸ ಅಭ್ಯರ್ಥಿಗಳೇ ಆಗಿದ್ದು ಯಾರಿಗೆ ಜಿಲ್ಲೆಯ ಮತದಾರ ಒಲೆಯುತ್ತಾನೆ ? ಯಾರು ಎಷ್ಟು ಮತ ಗಳಿಸಿ ಗೆಲುವಿನ ಮಾಲೆ ಧರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ಸುದ್ದಿಗಳನ್ನು ತಿಳಿಲು ನಮ್ಮ WhatsApp ಗ್ರೂಪ್ ಗೆ ಸೇರಿ:-https://chat.whatsapp.com/Byute88zi3vIIALVjnIeWA

Advertisement
Tags :
Ananthkumar HegadecontestedKannada newsKarnatakaLoksabha electionSirsiUttarakannadavotesಅನಂತಕುಮಾರ್ ಹೆಗಡೆಉತ್ತರ ಕನ್ನಡ ಲೋಕಸಭಾ ಕ್ಷೇತ್ರಶಿರಸಿ
Advertisement
Next Article
Advertisement