For the best experience, open
https://m.kannadavani.news
on your mobile browser.
Advertisement

Bhatkal|ಮಗಳ ಅಶ್ಲೀಲ ವೀಡಿಯೋ ಹೊರಬಿಡುವ ಬೆದರಿಕೆ 20 ಲಕ್ಷ ಬೇಡಿಕೆಇಟ್ಟ ಮೂವರು ಯುವಕರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳನಗರದದ ತರಕಾರಿ ವ್ಯಾಪಾರಿಯನ್ನು ಹೆದರಿಸಿ 20 ಲಕ್ಷ ರೂ. ಸುಲಿಗೆ ಮಾಡಲು ಯತ್ನಿಸಿದ ಮೂವರು ಯುವಕರನ್ನು ಭಟ್ಕಳ ಶಹರ ಪೊಲೀಸರು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ.
02:28 PM Aug 24, 2025 IST | ಶುಭಸಾಗರ್
ಉತ್ತರ ಕನ್ನಡ ಜಿಲ್ಲೆಯ ಭಟ್ಕಳನಗರದದ ತರಕಾರಿ ವ್ಯಾಪಾರಿಯನ್ನು ಹೆದರಿಸಿ 20 ಲಕ್ಷ ರೂ. ಸುಲಿಗೆ ಮಾಡಲು ಯತ್ನಿಸಿದ ಮೂವರು ಯುವಕರನ್ನು ಭಟ್ಕಳ ಶಹರ ಪೊಲೀಸರು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ.
bhatkal ಮಗಳ ಅಶ್ಲೀಲ ವೀಡಿಯೋ ಹೊರಬಿಡುವ ಬೆದರಿಕೆ 20 ಲಕ್ಷ ಬೇಡಿಕೆಇಟ್ಟ ಮೂವರು ಯುವಕರ ಬಂಧನ

ಮಗಳ ಅಶ್ಲೀಲ ವೀಡಿಯೋ ಹೊರಬಿಡುವ ಬೆದರಿಕೆ 20 ಲಕ್ಷ ಬೇಡಿಕೆಇಟ್ಟ ಮೂವರು ಯುವಕರ ಬಂಧನ

Advertisement

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳನಗರದದ (bhatkal)  ತರಕಾರಿ ವ್ಯಾಪಾರಿಯನ್ನು ಹೆದರಿಸಿ 20 ಲಕ್ಷ ರೂ. ಸುಲಿಗೆ ಮಾಡಲು ಯತ್ನಿಸಿದ ಮೂವರು ಯುವಕರನ್ನು ಭಟ್ಕಳ ಶಹರ ಪೊಲೀಸರು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ.

ಭಟ್ಟಗಾಂವ್, ಕಿದ್ವಾಯಿ ರಸ್ತೆಯ ನಿವಾಸಿ ವಿದ್ಯಾಧಿ ಅನ್ವರಭಾಷ (57) ಅಂಗಡಿಯಲ್ಲಿ ಇದ್ದಾಗ, ಆಗಸ್ಟ್ 16ರ ರಾತ್ರಿ ಒಬ್ಬ ಅಪರಿಚಿತನಿಂದ ಕರೆ ಬಂದು, “ನಿನ್ನ ಮಗಳ ಖಾಸಗಿ ಫೋಟೋ, ವೀಡಿಯೋ ನನ್ನ ಬಳಿ ಇದೆ. ತಕ್ಷಣ 20 ಲಕ್ಷ ಕೊಡಬೇಕು, ಇಲ್ಲವಾದರೆ ಎಲ್ಲರಿಗೂ ಕಳುಹಿಸಿ ನಿನ್ನ ಮಾನ ಹಾಳು ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದ.

ಇದನ್ನೂ ಓದಿ:-Bhatkal:ಅಡಿಕೆ ಕಳ್ಳತನ -ಮಾಲು ಸಮೇತ ನಾಲ್ವರ ಬಂಧನ

ನಂತರ ಆಗಸ್ಟ್ 18 ಮತ್ತು 19ರಂದು ವ್ಯಾಪಾರಿಯ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ, “15 ಲಕ್ಷ ಆದರೂ ಕೊಡಬೇಕು” ಎಂದು ಒತ್ತಾಯಿಸಿದ್ದ. ಬೆದರಿಕೆಗಳಿಂದ ಕಂಗಾಲಾದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಮೇಲೆ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಮ್. ಹಾಗೂ ಪಿ.ಎಸ್.ಐ ನವೀನ್ ಎಸ್. ನಾಯ್ಕ ನೇತೃತ್ವದ ಪ್ರತ್ಯೇಕ ತಂಡ ರಚಿಸಿ ಆರೋಪ ಗಳಾದ ಮೊಹಮ್ಮದ ಫಾರಿಸ್ ತಂದೆ ಅಬ್ದುಲ್ ಮುತಲ್ಲಬ್ ಕೋಡಿ,ಭಟ್ಕಳ ಅಬ್ದುಹುರೇರಾ ಕಾಲೊನಿ‌ ಭಟ್ಕಳ,ಮೊಹಮ್ಮದ ಅರ್ಶದ ತಂದೆ ಮೊಹಮ್ಮದ ಜುಬೇರ್ ಬ್ಯಾರಿ ಮೂಸಾನಗರ,ಹಾಗೂ ಅಮನ್ ತಂದೆ ಮಸೂದ ಖಾನ್  ಇಂಜಿನಿಯರಿಂಗ್ ವಿದ್ಯಾರ್ಥಿ ಕುಂದಾಪುರ ಹಾಲಾಡಿ ನಿವಾಸಿ,ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿದೆ. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆ ಮಹೇಶ್ ಎಂ.ಕೆ.ಮಾರ್ಗದರ್ಶನದಲ್ಲಿ ನಡೆದಿದೆ.ಠಾಣೆಯ   ಸಿಬ್ಬಂದ್ದಿಯವರಾದ ದಿನೇಶ ನಾಯಕ,ವಿನಾಯಕ ಪಾಟೀಲ್, ನಾಗರಾಜ ಮೊಗೇರ,ಮಹಾಂತೇಶ ಹಿರೇಮಠ,ಕಾಶಿನಾಥ ಕೊಟಗುಣಸಿ,ಮತ್ತು ಲೊಕೇಶ ಕತ್ತಿ, ಮಹೇಶ ಅಮಗೋತ ರಾಘವೇಂದ್ರ ಗೌಡ, ಜಗದೀಶ ನಾಯ್ಕ

ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಬಬನ್ ಮತ್ತು ಉದಯ ಗುಣಗಾ ರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ