For the best experience, open
https://m.kannadavani.news
on your mobile browser.
Advertisement

Court news| ಸುಪ್ರೀಂ ಕೋರ್ಟ ಆದೇಶ ಬೆನ್ನಲ್ಲೇ ನಟ ದರ್ಶನ್ ನಾಪತ್ತೆ!

ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ನಟ ದರ್ಶನ್‌ಗೆ ಪೊಲೀಸರು ಹುಡಕಾಟ ನಡೆಸಿದ್ದಾರೆ. ಆದರೆ, ನಟ ಎಲ್ಲಿದ್ದಾರೆಂಬುದು ಇನ್ನೂ ಗೊತ್ತಾಗಿಲ್ಲ. ಎಲ್ಲಾ ಕಡೆ ದರ್ಶನ್‌ಗಾಗಿ ತೀವ್ರ ಶೋಧ ನಡೆಯುತ್ತಿದೆ.
01:02 PM Aug 14, 2025 IST | ಶುಭಸಾಗರ್
ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ನಟ ದರ್ಶನ್‌ಗೆ ಪೊಲೀಸರು ಹುಡಕಾಟ ನಡೆಸಿದ್ದಾರೆ. ಆದರೆ, ನಟ ಎಲ್ಲಿದ್ದಾರೆಂಬುದು ಇನ್ನೂ ಗೊತ್ತಾಗಿಲ್ಲ. ಎಲ್ಲಾ ಕಡೆ ದರ್ಶನ್‌ಗಾಗಿ ತೀವ್ರ ಶೋಧ ನಡೆಯುತ್ತಿದೆ.
court news  ಸುಪ್ರೀಂ ಕೋರ್ಟ ಆದೇಶ ಬೆನ್ನಲ್ಲೇ ನಟ ದರ್ಶನ್ ನಾಪತ್ತೆ

Advertisement

Court news| ಸುಪ್ರೀಂ ಆದೇಶ ಬೆನ್ನಲ್ಲೇ ನಟ ದರ್ಶನ್ ನಾಪತ್ತೆ!

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗುತ್ತಿದ್ದಂತೆ ಮೈಸೂರಿನಲ್ಲಿರುವ ದರ್ಶನ್‌ (Darshan) ಮನೆ, ಫಾರ್ಮ್‌ ಹೌಸ್‌ಗೆ ಪೊಲೀಸರು ಆಗಮಿಸಿ ಶೋಧ ನಡೆಸಿದ್ದಾರೆ.ಆದರೇ ದರ್ಶನ್ ಮಾತ್ರ ಪತ್ತೆಯಾಗಿಲ್ಲ.

ಮೈಸೂರಿನಲ್ಲಿನ ನಟ ದರ್ಶನ್ ಮನೆ ಮುಂದೆ ಪೊಲೀಸರ ಬೀಟ್ ಆರಂಭವಾಗಿದೆ. ಮನೆಯಲ್ಲಿ ಸದ್ಯ ದರ್ಶನ್ ತಾಯಿ ಮಾತ್ರ ಇದ್ದಾರೆ‌. ಮನೆಯ ಮುಖ್ಯ ಗೇಟ್‌ಗೆ ಬೀಗ ಹಾಕಲಾಗಿದೆ. ಗೇಟ್‌ನ ಬೀಗ ಹಾಕಿಕೊಂಡು ದರ್ಶನ್ ತಾಯಿ ಮನೆ ಒಳಗೆ ಇದ್ದಾರೆ. ಹೊರಗಡೆ ಪೊಲೀಸ್ ಬೀಟ್ ಶುರುವಾಗಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಗುರುವಾರ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಸುಪ್ರೀಂ ಕಟ್ಟಾಜ್ಞೆ ಹೊರಡಿಸಿದೆ. ಇದರ ಬೆನ್ನಲ್ಲೇ ದರ್ಶನ್‌ ಸೇರಿದಂತೆ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ನಟ ದರ್ಶನ್‌ಗೆ ಪೊಲೀಸರು ಹುಡಕಾಟ ನಡೆಸಿದ್ದಾರೆ. ಆದರೆ, ನಟ ಎಲ್ಲಿದ್ದಾರೆಂಬುದು ಇನ್ನೂ ಗೊತ್ತಾಗಿಲ್ಲ. ಎಲ್ಲಾ ಕಡೆ ದರ್ಶನ್‌ಗಾಗಿ ತೀವ್ರ ಶೋಧ ನಡೆಯುತ್ತಿದೆ.

ಸುಪ್ರಿಂ ಆದೇಶ .

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Darshan), ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ (Supreme Court) ರದ್ದುಗೊಳಿಸಿದೆ.

ಇದನ್ನೂ ಓದಿ:-Actor Darshan ಕೋಪ ಬಿಡಬೇಕು,ಒಳ್ಳೆದಾರಿಯಲ್ಲಿ ಇದ್ರೆ ಅದು ಚರಿತ್ರೆ ,ಕೆಟ್ಟ ದಾರಿ ಯಲ್ಲಿ ಇದ್ರೆ ರಕ್ತ ಚರಿತ್ರೆ- ಓಂ ಸಾಯಿಪ್ರಕಾಶ್

ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಈ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಎತ್ತಿ ಹಿಡಿದಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ