ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi: ಉಗ್ರ ಮೌಸೀನ್ ಗೆ 14 ದಿ‌ನ ನ್ಯಾಯಾಂಗ ಬಂಧನ

ಕಾರವಾರ : ಕೆಜೆ ಹಳ್ಳಿ -ಡಿಜೆಹಳ್ಳಿ ಸೇರಿದಂತೆ ಹಲವು ಪ್ರಕರಣದಲ್ಲಿ ಆರೋಪಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi ) ಟಿಪ್ಪುನಗರದ ಉಗ್ರವಾದಿ ಮೌಸಿನ್ ನನ್ನು ಶಿರಸಿಯ ಗಣೇಶ ನಗರದಲ್ಲಿ ನಡೆದಿದ್ದ ಅನೀಷ್ ಎಂಬುವವರ ಹತ್ಯೆ ಆರೋಪದಲ್ಲಿ
11:26 PM Apr 28, 2025 IST | ಶುಭಸಾಗರ್
ಶಿರಸಿಯ ಉಗ್ರ ಮೌಸಿನ್ ಬಂಧನ-ಕೋರ್ಟ ಗೆ ಹಾಜರುಪಡಿಸಿದ ಪೊಲೀಸರು

ಉಗ್ರ ಮೌಸೀನ್ ಗೆ 14 ದಿ‌ನ ನ್ಯಾಯಾಂಗ ಬಂಧನ.

Advertisement

ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

ಕಾರವಾರ : ಕೆಜೆ ಹಳ್ಳಿ -ಡಿಜೆಹಳ್ಳಿ ಸೇರಿದಂತೆ ಹಲವು ಪ್ರಕರಣದಲ್ಲಿ ಆರೋಪಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi ) ಟಿಪ್ಪುನಗರದ ಉಗ್ರವಾದಿ ಮೌಸಿನ್ ನನ್ನು ಶಿರಸಿಯ ಗಣೇಶ ನಗರದಲ್ಲಿ ನಡೆದಿದ್ದ ಅನೀಷ್ ಎಂಬುವವರ ಹತ್ಯೆ ಆರೋಪದಲ್ಲಿ ಶನಿವಾರ ಸಿಂಧಗಿಯಲ್ಲಿ ವಶಕ್ಕೆ ಪಡೆದು ಇಂದು ಶಿರಸಿಯ ಜೆಎಮ್.ಎಫ್.ಸಿ ಕೋರ್ಟ ಗೆ ಹಾಜುರು ಪಡಿಸಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಇಂದು ನ್ಯಾಯಾಲಯವು 14 ದಿನದ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ. ಇದಲ್ಲದೆ ಈತನಿಗೆ ಸಹಾಯ ಮಾಡಿದ ಕುಟುಂಬದ 29 ಜನರನ್ನು ಸಹ ಶಿರಸಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:-Sirsi  ರೇಷನ್ ಅಕ್ಕಿಯಲ್ಲಿ ಕಲ್ಲು ,ಮಣ್ಣು.- ಇದನ್ನು ತಿಂದವನನ್ನು ದೇವರೇ ಕಾಪಾಡಬೇಕು!

Advertisement

ಮೌಸೀನ್ ಶುಕುರ್ ಹೊನ್ನಾವರ್ ಉಗ್ರಚಟುವಟಿಕೆಯ ತರಬೇತಿ ಪಡೆದಿದ್ದು ,ಸಾದಿಕ್ ಎಂಬಾತನನ್ನು ಉಗ್ರ ಚಟುವಟಿಕೆಗಾಗಿ ತರಬೇತಿ ನೀಡಿದ್ದನು.ಶಿರಸಿಯಲ್ಲಿ ಪಿ.ಎಫ್.ಐ ಸಂಘಟನೆಯನ್ನು ಕಟ್ಟಿದ ಈತ ಹಲವರನ್ನು ಸಂಘಟನೆಗೆ ಸೇರಿಸಿಕೊಂಡಿದ್ದನು.ಮಿಟ್ಟೂರಿನಲ್ಲಿ ಎನ್.ಐ.ಎ ದಾಳಿ ನಡೆಸಿದಾಗ ಉಗ್ರ ಚಟುವಟಿಕೆಗೆ ತರಬೇತಿ ನೀಡುವ ಕೇಂದ್ರಕ್ಕೆ ಈತ ಮುಖ್ಯಸ್ತನಾಗಿದ್ದು ಈತನನ್ನು ಸಹ ಉಗ್ರ ಚಟುವಟಿಕೆ ಸಂಬಂಧ ಬಂಧಿಸಿತ್ತು.

ಆದರೇ ಜಾಮೀನಿನ ಮೇಲೆ ಹೊರಬಂದ ಈತ ಆರು ವರ್ಷದಿಂದ ತಲೆಮರೆಸಿಕೊಂಡಿದ್ದ.ಇದಲ್ಲದೇ ಕೆಜೆಹಳ್ಳಿ - ಡಿಜೆ ಹಳ್ಳಿ ಘಟನೆಯಲ್ಲೂ ಆರೋಪಿಯಾಗಿದ್ದನು. ಈತನ ಕುಟುಂಬವೂ ಅಪರಾಧ ಹಿನ್ನಲೆ ಹೊಂದಿದ್ದು ಕುಟುಂಬ ಸಮೇತ ಸಿಂಧಗಿಯ ಗದ್ದೆಯೊಂದರಲ್ಲಿ ಟೆಂಟ್ ಹಾಕಿ ಜೀವನ ನಡೆಸುತಿದ್ದು ಆರು ವರ್ಷದಲ್ಲಿ ಮದುವೆಯಾಗಿ ಐದು ಮಕ್ಕಳನ್ನು ಸಹ ಪಡೆದಿದ್ದನು.

ಇದನ್ನೂ ಓದಿ:-Sirsi : ಉಗ್ರರ ಗುಂಡೇಟಿನಿಂದ ತಪ್ಪಿಸಿಕೊಂಡ ಶಿರಸಿಯ ದಂಪತಿಗಳು -ವಿಡಿಯೋ ರಿಲೀಸ್ ,ಏನಂದ್ರು ನೋಡಿ

ಇನ್ನು ಈತ ಯಾವುದೇ ಕೆಲಸವನ್ನು ಮಾಡದೇ 29 ಜನರಿದ್ದ ಕುಟುಂಬವನ್ನು ಸಲಹುತಿದ್ದು ಈತನಿಗೆ ಹಣ ಎಲ್ಲಿಂದ ದೊರಕುತ್ತಿತ್ತು ಎಂಬ ತನಿಖೆ ಸಹ ನಡೆಯುತ್ತಿದೆ. ಇನ್ನು ಎನ್.ಐ.ಎ ಹಾಗೂ ಬೆಂಗಳೂರು ಪೊಲೀಸರು ಈತನನ್ನು ವಶಕ್ಕೆ ಪಡೆಯಲು ಸಿದ್ದತೆ ಮಾಡಿಕೊಂಡಿದ್ದು ,ಮತ್ತೆ ಯಾವ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಹೊರಬರಬೇಕಿದೆ.

Advertisement
Tags :
CourtCrimeNIAPfi activist arrestSirsiSirsi policeterraristUttara kannda
Advertisement
Next Article
Advertisement