ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Darmasthala case| ಕೇರಳದ ಯೂಟ್ಯೂಬರ್ ಮನಾಫ್ ಶಿರೂರಿನಲ್ಲಿ ಮಾಡಿದ್ದ ಅದ್ವಾನ ! ಈತನ ಕುರಿತು ಇಲ್ಲಿದೆ ಮಾಹಿತಿ

ಕಾರವಾರ :-ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಧರ್ಮಸ್ಥಳದಲ್ಲಿ ಸಿಕ್ಕ ಬುರುಡೆ ವಿಡಿಯೋ ವನ್ನು ಕೇರಳದ ಯೂಟ್ಯೂಬ್ ನಲ್ಲಿ ಮೊದಲು ಪ್ರಸಾರ ಮಾಡಿದ್ದ ಮನಾಫ್ ಗೆ ಇದೀಗ ಎಸ್.ಐ.ಟಿ ನೋಟಿಸ್ ನೀಡಿ ತನಿಖೆಗೆ ಹಾಜುರಾಗುವಂತೆ ತಿಳಿಸಿದೆ.
11:24 PM Sep 05, 2025 IST | ಶುಭಸಾಗರ್

ಅಷ್ಟಕ್ಕೂ ಕೇರಳದ ಮನಾಫ್ ಯಾರು ಎಂದು ಹುಡುಕುತ್ತಾ ಹೋದರೇ ಈತ ಮೂಲತಹಾ ಶಿವಮೊಗ್ಗ ಜಿಲ್ಲೆಯ ಸಾಗರದ ವ್ಯಕ್ತಿ. ಈತನ ತಂದೆ ಈ ಹಿಂದಿನ ಸಾಗರ ಪುರಸಭೆ ಸದಸ್ಯರಾಗಿದ್ದರು.

ಕಾಂಗ್ರೆಸ್ ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಈ ಕುಟುಂಬ ಸಾಗರದಲ್ಲಿ  ಮೊದಲು ಟಿಂಬರ್ ಬಿಸಿನೆಸ್ಸ್ ಪ್ರಾರಂಭಮಾಡಿ ನಂತರ ಕೇರಳಕ್ಕೆ ಮನಾಫ್ ತೆರಳಿ ,ಅಲ್ಲಿ ಉದ್ಯಮ ಶುರುಮಾಡುತ್ತಾರೆ.

Advertisement

2024 ರ ಜುಲೈ 11 ರಂದು ಅಂಕೋಲದ ಶಿರೂರು ಭೂ ಕುಸಿತ ದುರಂತ ದಲ್ಲಿ ಲಾರಿಯೊಂದಿಗೆ ಕೇರಳದ ಅರ್ಜುನ್ ಮೃತರಾಗಿದ್ದರು.

ಈ ಅರ್ಜುನ್ ಲಾರಿ ಮನಾಫ್ ನದ್ದು. ಶಿರೂರಿನ ಕಾರ್ಯಾಚರಣೆಯನ್ನ ಕೇರಳ ಜನರಿಗೆ ತೋರಿಸಲು youtub ನನ್ನು ಆರಂಭಿಸಿದ್ದ ಮನಾಫ್ ಯುಟ್ಯೂಬ್ ನಲ್ಲಿ ಶಿರೂರು ದುರಂತ ಕಾರ್ಯಾಚರಣೆಯನ್ನು ಲೈವ್ ತೋರಿಸುತಿದ್ದ‌ .ಇನ್ನು ಅರ್ಜುನ್ ಬದುಕಿ ಬರಬೇಕು ಎಂದು ಇಡೀ ಕೇರಳದ ದ್ವನಿಯಾಗಿತ್ತು. ಇದನ್ನು ಬಳಸಿಕೊಂಡ ಈತ ಆತನ ಹೆಸರಿನಲ್ಲಿ ಹಣ ಪಡೆದಿದ್ದಲ್ಲದೇ ಕೇರಳ ಜನರಲ್ಲಿ ಕರ್ನಾಟಕದ ವಿರುದ್ಧ ತಪ್ಪು ಭಾವನೆ ಬರುವಂತೆ ಪೋಸ್ಟ್ ಹಾಕುತಿದ್ದ.ಇದನ್ನು ನೋಡಿದ ಅರ್ಜುನ್ ಕುಟುಂಬ ಕೇರಳದ ಚೆರುವಾಯೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.

ಈತನ ವಿರುದ್ಧ ಚೆರುವಾಯೂರು ಠಾಣೆಯಲ್ಲಿ ಗಲಭೆಗೆ ಕುಮ್ಮಕ್ಕು,ಸಾರ್ವಜನಿಕ ಶಾಂತಿ ಭಂಗ ಮತ್ತು ಅಶಾಂತಿ ಉಂಟುಮಾಡುವ ಪ್ರಕರಣ ಸಹ ದಾಖಲಾಗಿದೆ.

Shirur :ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಮ್ಯಾರಥಾನ್ ನಲ್ಲಿ ಓಟ :ಬೆಳ್ಳಿ ಪದಕ

ಇನ್ನು ಈತ ಪ್ರಕರಣಗಳು ದಾಖಲಾದರೂ ಸುಮ್ಮನಿರದೇ ಇದೀಗ ಧರ್ಮಸ್ಥಳದ ವಿರುದ್ಧ ಕೇರಳದಲ್ಲಿ ತಪ್ಪು ಕಲ್ಪನೆ ಬರುವ ವಿಡಿಯೋಗಳನ್ನು ಹರಿಬಿಟ್ಟಿದ್ದಾನೆ .

ಇಷ್ಟು ಸಾಲದ ಎಂಬುದಕ್ಕೆ ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮರೂಡಿ ಜೊತೆ ಗೈ ಜೊಡಿಸಿದ್ದು ಬುರುಡೆ ತೆಗೆದ ವೊದಲ ವಿಡಿಯೋ ವನ್ನು ಪೋಸ್ಟ್ ಮಾಡಿದ್ದಾನೆ.

ಶಿರೂರಿನಲ್ಲಿ ಅಧಿಕ ಪ್ರಸಂಗ ತೋರಿದ್ದ ಮನಾಫ್!

ಇನ್ನು 2024 ರ ಜುಲೈ 16 ರಂದು ನಡೆದ ಭೂ ಕುಸಿತ ದಯರಂತದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಕೇರಳಾ ಮೀಡಿಯಾಗಳಿಗೆ ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಲಾರಿ ಶೋಧ ಮಾಡುವ ಬದಲು ಮಣ್ಣು ತೆಗೆಯುತಿದ್ದಾರೆ ಎಂದು ಹೇಳಿಕೆ ನೀಡಿದ್ದನು.

ಇನ್ನು ಕಾರ್ಯಾಚರಣೆ ನಡೆಯುವಾಗ ದಿಕ್ಕು ತಪ್ಪಿಸಿದ್ದ ಈತ ಲಾರಿಯ ಜಿಪಿಆರ್ ಎಸ್ ನದಿಯ ಮೇಲ್ಭಾಗ ತೋರಿಸುತ್ತಿದೆ ಎಂದು ಹೇಳಿ ಹಲವು ಕಡೆ ಶೋಧ ಕಾರ್ಯ ನಡೆಸುವಂತೆ ಮಾಡಿದ್ದನು.

ಕೊನೆಗೆ ಈತನ ಉಪಟಳ ತಡೆಯಲಾಗದೇ ಕುದ್ದು ಪೊಲೀಸರು ಜಾಡಿಸಿದ್ದರು.

ಶಿರೂರು ದುರಂತ ಸಿನಿಮಾ !

ಕೇರಳದಲ್ಲಿ ಶಿರೂರು ದುರಂತ ಸಂಬಂಧ  ಮೃತ ಅರ್ಜುನ್ ಕುರಿತು ಸಿನಿಮಾ ನಿರ್ಮಾಣವಾಗುತಿದ್ದು ಇದೇ ಮನಾಫ್ ನನ್ನು ಹೀರೋ ರೀತಿ ಬಿಂಬಿಸಲು ಹೊರಟಿದೆ. ಈತನೇ ಶಿರೂರು ಕಾರ್ಯಾಚರಣೆ ಪ್ರಾರಂಭವಾಗಲು ಕಾರಣ ಎನ್ನುವ ರೀತಿ ಬಿಂಬಿಸಲಾಗುತಿದ್ದು , ಕೇರಳದ ಕಾಸರಗೋಡು ಶಾಸಕ ಅಶ್ರಫ್ ಬರೆದ ಶಿರೂರು ದುರಂತ ಪುಸ್ತಕದಲ್ಲಿ ಈತನನ್ನು ಹೀರೋ ರೀತಿ ಬಿಂಬಿಸಿ ಬರೆಯಲಾಗಿದ್ದು , ಇದೀಗ ಈ ಪುಸ್ತಕದ ಕಥೆಯೇ ಸಿನಿಮಾ ಸಟ್ಟೇರಿದೆ.

Advertisement
Tags :
Breaking newsCrime newsDharmasthala caseIndiaKarnatakaKerala YouTuber ManafShirur News Karnataka NewsSocial Media ControversyUttara Kannada UpdatesViral newsYouTuber News
Advertisement
Next Article
Advertisement