Bhatkal :ಭಟ್ಕಳದಲ್ಲಿದ್ದಾರೆ 14 ಪಾಕಿಸ್ತಾನಿ ಪ್ರಜೆಗಳು !
Bhatkal :ಭಟ್ಕಳದಲ್ಲಿದ್ದಾರೆ 14 ಪಾಕಿಸ್ತಾನಿ ಪ್ರಜೆಗಳು !
ಕಾರವಾರ :-ಕಾಶ್ಮೀರದ (kasmir) ಪಹಲ್ಗಾಂ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳಿಗೆ 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ.
ಆದ್ರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನೆಲಸಿರುವ 14 ಜನ ಪಾಕಿಸ್ತಾನ ಮೂಲದ ಮಹಿಳೆಯರಿದ್ದು ದೀರ್ಘಾವಧಿ ವೀಸಾ ಇರುವ ಕಾರಣ ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ:-Bhatkal| ಗರ್ಭ ಧರಿಸಿದ ಗೋಹತ್ಯೆ ಪ್ರಕರಣ ಆರೋಪಿ ಬಂಧನ
ಭಟ್ಕಳ(bhatkal) ಹಾಗೂ ಪಾಕಿಸ್ತಾನದ (pakisthan) ನಡುವೆ ಸ್ವತಂತ್ರ ಪೂರ್ವದಲ್ಲೇ ವೈವಾಹಿಕ ಸಂಬಂಧಗಳು ನಡೆಯುತಿದ್ದು ಭಟ್ಕಳದ ಮುಸ್ಲೀಂ ಹೆಣ್ಣನ್ನು ಪಾಕಿಸ್ತಾನದ ವರನಿಗೆ ನೀಡಿದರೇ ಪಾಕಿಸ್ತಾನದ ಹೆಣ್ಣನ್ನು ಭಟ್ಕಳಕ್ಕೆ ನೀಡುವುದು ನಡೆದುಕೊಂಡು ಬಂದಿದೆ.
ಈಗಾಗಲೇ ಹಲವು ವರ್ಷದಿಂದ 10 ಮಹಿಳೆಯರು ಪಾಕಿಸ್ತಾನ ಮೂಲದ ಮಹಿಳೆಯರಿದ್ದು ಇವರಲ್ಲಿ ನಾಲ್ಕು ಜನ ಭಾರತದಲ್ಲೇ ಹುಟ್ಟಿದ ಮಕ್ಕಳಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವಿಸಾ ನವೀಕರಣವಾಗುತ್ತದೆ. ಇನ್ನು ಈ ಮಹಿಳೆಯರು ಭಾರತದ ಪೌರತ್ವಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಇವರಿಗಾಗಲಿ ಭಾರತದಲ್ಲಿ ಹುಟ್ಟಿದ ಇವರ ಮಕ್ಕಳಿಗೆ ಪೌರತ್ವ ನೀಡಿಲ್ಲ. ಇನ್ನು ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ದೇಶ ತೊರೆಯಲು ಹೇಳಿದ್ದರೂ ದೀರ್ಘಾವಧಿ ವಿಸಾ ಹಾಗೂ ಭಾರತೀಯ ಪುರುಷರನ್ನು ವಿವಾಹವಾಗಿದ್ದರಿಂದ ಸದ್ಯ ಈ ಹದಿನಾಲ್ಕು ಮಹಿಳೆಯರು ಭಟ್ಕಳದಲ್ಲೇ ಇರಲಿದ್ದಾರೆ.
ಇನ್ನು ಕೆಲವು ವರ್ಷದ ಹಿಂದೆ ಬಾಂಗ್ಲಾದ ಮಹಿಳೆ ಸಹ ಗಡಿ ಉಲ್ಲಂಘಿಸಿ ಭಟ್ಕಳಕ್ಕೆ ಬಂದು ಇಲ್ಲಿನ ಯುವಕನನ್ನು ವಿವಾಹವಾಗಿದ್ದು ಈಕೆ ಸದ್ಯ ಜೈಲಿನಲ್ಲಿದ್ದು ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ಇನ್ನು ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಮಹಿಳೆಯರಲ್ಲದೇ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇರುವ ಸಾಧ್ಯತೆ ಇದ್ದು ಈ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.
ಸದ್ಯ ಕೇಂದ್ರ,ರಾಜ್ಯ ಸರ್ಕಾರದಿಂದಲೂ ಯಾವುದೇ ಮಾಹಿತಿ ಭಾರದ ಹಿನ್ನಲೆಯಲ್ಲಿ ಈ ಮಹಿಳೆಯರು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದು ,ಯಾವಾಗ ಗಡಿಪಾರಾಗುತ್ತೋ ಎಂಬ ಭಯದಲ್ಲಿದ್ದಾರೆ.