For the best experience, open
https://m.kannadavani.news
on your mobile browser.
Advertisement

Karwar |ನಡು ರಸ್ತೆಯಲ್ಲೇ ಮಾಜಿ ನಗರಸಭೆ ಸದಸ್ಯನ ಭರ್ಭರ ಹ**ತ್ಯೆ 

Karwar :- ವಾಯು ವಿಹಾರಕ್ಕೆ ಹೋಗುತಿದ್ದ ನಗರಸಭೆ ಮಾಜಿ ಸದಸ್ಯ,ರೌಡಿ ಶೀಟರ್ ನನ್ನು ನಡು ರಸ್ತೆಯಲ್ಲೇ ಚಾಕು ಇರಿದು ಹತ್ಯೆ ಮಾಡಿದ ಘಟನೆ ಕಾರವಾರ ನಗರದ ಕಮಲಾಕರ್ ರಸ್ತೆಯ ಬಿ.ಎಸ್.ಎನ್ .ಎಲ್ ಕಚೇರಿ ಬಳಿ ನಡೆದಿದೆ.
11:14 AM Apr 20, 2025 IST | ಶುಭಸಾಗರ್
karwar  ನಡು ರಸ್ತೆಯಲ್ಲೇ ಮಾಜಿ ನಗರಸಭೆ ಸದಸ್ಯನ ಭರ್ಭರ ಹ  ತ್ಯೆ 

Karwar |ನಡು ರಸ್ತೆಯಲ್ಲೇ ಮಾಜಿ ನಗರಸಭೆ ಸದಸ್ಯನ ಭರ್ಭರ ಹ**ತ್ಯೆ

Advertisement

Karwar :- ವಾಯು ವಿಹಾರಕ್ಕೆ ಹೋಗುತಿದ್ದ ನಗರಸಭೆ ಮಾಜಿ ಸದಸ್ಯ,ರೌಡಿ ಶೀಟರ್ ನನ್ನು ನಡು ರಸ್ತೆಯಲ್ಲೇ ಚಾಕು ಇರಿದು ಹತ್ಯೆ ಮಾಡಿದ ಘಟನೆ ಕಾರವಾರ (karwar) ನಗರದ ಕಮಲಾಕರ್ ರಸ್ತೆಯ ಬಿ.ಎಸ್.ಎನ್ .ಎಲ್ ಕಚೇರಿ ಬಳಿ ನಡೆದಿದೆ.

ಸತೀಶ್ ಕೊಳಂಬಕರ್ ಹತ್ಯೆಯಾದ ವ್ಯಕ್ತಿಯಾಗಿದ್ದಾನೆ. ಈತ ರೌಡಿ ಶೀಟರ್ ಆಗಿದ್ದು ಈತನ ಮೇಲೆ 9 ಕ್ಕೂ ಹೆಚ್ಚು ಪ್ರಕರಣಗಳಿವೆ. ಹಣದ ವ್ಯವಹಾರದ ಸಂಬಂಧ ಕೆಲವು ದಿನದ ಹಿಂದೆ ಕಾರವಾರ ನಗರದ ಪ್ರೀಮಿಯರ್ ಹೋಟಲ್ ನಲ್ಲಿ ಕೆಲವು ವ್ಯಕ್ತಿಗಳೊಂದಿಗೆ ಜಗಳವಾಗಿತ್ತು.

ಪ್ರಕೃತಿ ಮೆಡಿಕಲ್ ,ಕಾರವಾರ.

ಇದನ್ನೂ ಓದಿ:-Karwar :ಸಾಯಿ ಮಂದಿರದಲ್ಲಿ 15 ಕೆಜಿ ಬೆಳ್ಳಿ ಕಳ್ಳತನ ಆರೋಪ ಸಿಸಿ ಕ್ಯಾಮರಾದಲ್ಲಿ ಸೆರೆ!

ಇನ್ನು ಈ ಹತ್ಯೆಯನ್ನು ನಿತೇಶ್ ತಾಂಡೇಲ್ ಹಾಗೂ ದರ್ಶನ್ ಎಂಬುವವರು ಸೇರಿ ಹತ್ಯೆ ಮಾಡಿರುವ ಆರೋಪವನ್ನು ಮೃತ ಸತೀಶ್ ರವರ ಮಗಳು ಮಾಡಿದ್ದಾರೆ. ಮೃತ ವ್ಯಕ್ತಿಯು ಕಾರವಾರ ನಗರದ ಪದ್ಮನಾಭ ನಗರದವರಾಗಿದ್ದು  ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಗುತ್ತಿಗೆ ಕೆಲಸ ಮಾಡುತಿದ್ದರು.

ಇನ್ನು ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರತಿಕ್ರಿಯಿಸಿದ್ದು ಹಣದ ವಿಷಯದಲ್ಲಿ ವಯುಕ್ತಿಕ ಕಾರಣದಿಂದ ಹತ್ಯೆ ನಡೆದಿದೆ.

ಕಾರವಾರ ನಗರಸಭೆ ಮಾಜಿ ಸದಸ್ಯನ ಹ***

ಹತ್ಯೆಯಾದ ಸತೀಶ್ ರವರಿಗೆ ಎರಡು ಲಕ್ಷ ಹಣವನ್ನು ಆರೋಪಿಗಳು ಸಾಲವಾಗಿ ನೀಡಿದ್ದು ಕೆಲವು ದಿನದ ಹಿಂದೆ ಆರೋಪಿಗಳು ಮರಳಿ ಕೇಳಿದಾಗ  ಪ್ರೀಮಿಯರ್ ಹೋಟಲ್ ನಲ್ಲಿ ಗಲಾಟೆ ಮಾಡಿದ್ದು ಇಂದುಸಹ ವಾಯು ವಿಹಾರಕ್ಕೆ ಬಂದಿದ್ದ ಸತೀಶ್ ಗೆ  ಆರೋಪಿಗಳು ಹಣ ಕೇಳಿದಾಗ ಜಗಳವಾಗಿ ,ಅದು ವಿಕೋಪಕ್ಕೆ ಹೋಗಿ ಚಾಕು ಇರಿದು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಶೀಘ್ರ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ