Dandeli: ದಾಂಡೇಲಿ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ
Dandeli: ದಾಂಡೇಲಿ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ !
ದಾಂಡೇಲಿ :ದಾಂಡೇಲಿ(dandeli) ನಗರದ ಲಿಂಕ್ ರಸ್ತೆಯಲ್ಲಿ ಎರಡು ಅಂಗಡಿಗಳಲ್ಲಿ ಕಳುವು ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಇಂದು ಗುರುವಾರ ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ಲಿಂಕ್ ರಸ್ತೆಯಲ್ಲಿರುವ ಸೋನಾ ಮೆಡಿಕಲ್ ಅಂಗಡಿಗೆ ಮತ್ತು ಶಬ್ಬೀರ್ ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಅಂಗಡಿಯ ಮೇಲ್ಚಾವಣಿ ಸೀಟು ಒಡೆದು ಕಳ್ಳರು ಒಳ ನುಗ್ಗಿದ್ದಾರೆ.
ಇದನ್ನೂ ಓದಿ:-Dandeli:ಅಬ್ಬರದ ಗಾಳಿ ಮಳೆ -ದಾಂಡೇಲಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಸೋನಾ ಮೆಡಿಕಲ್ ಶಾಪಿನಲ್ಲಿ ಡ್ರವರ್ ನಲ್ಲಿಟ್ಟಿದ್ದ ಅಂದಾಜು ನಾಲ್ಕರಿಂದ ಐದು ಸಾವಿರ ರೂಪಾಯಿ ಚಿಲ್ಲರೆ ಹಣ ಕಳವು ಮಾಡಿದ್ದಾರೆ ಎಂದು ಮಾಲಿಕ ಸತೀಶ್ ಬಿದಾದ ಅವರು ತಿಳಿಸಿದ್ದಾರೆ.
ಇನ್ನು ಶಬ್ಬೀರ್ ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಅಂಗಡಿಯಿಂದ ಅಂದಾಜು 1,500/- ರೂ ನಗದು ಮತ್ತು ಮೂರ್ನಾಲ್ಕು ಮೊಬೈಲ್ ಕಳವಾಗಿರುವುದರ ಬಗ್ಗೆ ಮಾಲಿಕ ಶಬ್ಬೀರ್ ಹುಸೇನ್ ಸಾಬ್ ಪಾನವಾಲೆ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:-Dandeli: ವಿದ್ಯುತ್ ಶಾಕ್ – 15. ವರ್ಷದ ಹೆಣ್ಣಾನೆ ಸಾ**
ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆಯೂ ಇದೇ ಲಿಂಕ್ ರಸ್ತೆಯಲ್ಲಿ ಎರಡು ಅಂಗಡಿಗೆ ಕಳ್ಳರು ನುಗ್ಗಿ ಕಳ್ಳತ ಮಾಡಿದ್ದರು.