Sirsi: ಶಿರಸಿ ಸಂಪರ್ಕಿಸುವ ರಸ್ತೆ ಬಂದ್
ಶಿರಸಿ ಸಂಪರ್ಕಿಸುವ ರಸ್ತೆ ಬಂದ್

ಕಾರವಾರ:- ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ಮುಂದುವರೆದಿದ್ದು ಮಳೆಯ ಆರ್ಭಟಕ್ಕೆ ಕರಾವಳಿ ತತ್ತರಿಸಿದೆ.ಕುಮಟಾ ತಾಲೂಕಿನ ಮಿರ್ಜಾನ್ ಮಾರ್ಗವಾಗಿ ಅಂಕೋಲಾ - ಶಿರಸಿಗೆ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ.
ಕುಮಟಾ ತಾಲೂಕಿನ ಖೈರೆ ಕ್ರಾಸ್ ಬಳಿ ಶಿರಸಿ ಸಂಪರ್ಕಿಸುವ ರಸ್ತೆ ಯಲ್ಲಿ ಈ ಘಟನೆ ನಡೆದಿದ್ದು ,ದೊಡ್ಡ ಪ್ರಮಣದಲ್ಲಿ ಗುಡ್ಡ ಕುಸಿಯುವ ಆತಂಕ ತಂದೊಡ್ಡಿದೆ.
ಇದನ್ನೂ ಓದಿ:-Kumta: ದೇವಿಮನೆ ಘಟ್ಟ ಭಾಗದಲ್ಲಿ ಗುಡ್ಡ ಕುಸಿತ
ಇಲ್ಲಿನ ಗುಡ್ಡದ ಆಸುಪಾಸು ಇರುವ ನಿವಾಸಿಗರನ್ನು ಸ್ಥಳಾಂತರಿಸಲು ಸ್ಥಳೀಯ ಆಡಳಿತ ಸೂಚನೆ ನೀಡಿದೆ.
ಗುಡ್ಡದಂಚಿನ ಕೆಲ ಮನೆಗಳಿಗೆ ಹಾನಿಯಾಗುವ ಆತಂಕವಿದ್ದು ,ಸದ್ಯ ಮಿರ್ಜಾನ ಕತಗಾಲ್ ರಸ್ತೆ ಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ಕುಮಟಾ ಮೂಲಕ ಶಿರಸಿಗೆ ಹೋಗುವವರು ಸುಮಾರು 18 ಕಿ.ಮೀ ಹೆಚ್ಚುವರಿ ಪ್ರಯಾಣ ಮಾಡಬೇಕಿದೆ.
ಮಾದನಗೇರಿ ಹೆದ್ದಾರಿಯಲ್ಲಿ ನಿಂತಿದ್ದ ನೀರು ತೆರವು

ಮಾದನಗೇರಿ-ಗೋಕರ್ಣ ಹೆದ್ದಾರಿಯಲ್ಲಿ ನೀರು (water) ತುಂಬಿ ಸಂಚಾರಕ್ಕೆ ಅಡಚಣೆಯಾಗಿದ್ದು , ಅಂಗಡಿ,ಮನೆಗಳಿಗೆ ನೀರು ನುಗ್ಗಿತ್ತು. ಆದರೇ ಇದೀಗ ಇಲ್ಲಿ ನಿಂತ ನೀರನ್ನು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಿದ್ದು ಇದೀಗ ನೀರು ಇಳಿದಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.
ದೇವಿಮನೆ ಘಟ್ಟದಲ್ಲಿ ಕಲ್ಲು ತೆರವು.

ಇಂದು ಬೆಳಗ್ಗೆ ದೇವಿಮನೆ ಘಟ್ಟದಲ್ಲಿ ರಸ್ತೆಮೇಲೆ ಬಿದ್ದಿದ್ದ ಗುಡ್ಡದ ಕಲ್ಲುಗಳನ್ನು ತೆರವು ಮಾಡಲಾಗಿದೆ.
