ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

News| ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ವೈದ್ಯರಿಗೆ ಗೊತ್ತಿಲ್ಲದಂತೆ ಕಾರವಾರದ ನಕಲಿ ವೈದ್ಯೆಯಿಂದ ರೋಗಿಗಳಿಗೆ  ಮೂರು ತಿಂಗಳಿಂದ ಟ್ರೀಟ್ಮೆಂಟ್ ! 

Belagavi /karwar news:-  ಸರ್ಕಾರಿ ಆಸ್ಪತ್ರೆಯಲ್ಲಿ ನಕಲಿ ವೈದ್ಯಯೊಬ್ಬಳು ಮೂರು ತಿಂಗಳಿಂದ ಕೆಲಸ ಮಾಡುವ ಮೂಲಕ ಸರ್ಕಾರದ ಆಸ್ಪತ್ರೆ ವ್ಯವಸ್ತೆ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾಳೆ.
10:37 PM Sep 05, 2025 IST | ಶುಭಸಾಗರ್

ಹೌದು ಈಕೆಯ ಹೆಸರು ಸನಾ ಶೇಖ್ ಅಂತ‌‌. ಈ ಸನಾ ಶೇಕ್ ಗೂ ಹಾಗೂ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೂ ಯಾವುದೇ ಸಂಬಂಧವಿಲ್ಲ. ಆದರೆ ಇಲ್ಲಿನ ವೈದ್ಯರಿಗೆ ಗೊತ್ತಾಗದಂತೆ ಕಳೆದ ಮೂರು ತಿಂಗಳಿನಿಂದ ಇದೇ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಸನಾ ವೈಡ್ ಎಪ್ರಾನ್ ಹಾಕಿಕೊಂಡು ಕೆಲಸ ಮಾಡಿದ್ದಾಳೆ.

Advertisement

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಸನಾ ಶೇಕ್ ಗೆ ಬೀಮ್ಸ್ ನಲ್ಲಿ ಕೆಲಸ ಮಾಡೋಕೆ ಯಾರು ಅವಕಾಶ ಕೊಟ್ರು, ಅದು ಒಂದು ದಿನ ಅಲ್ಲ ಎರಡು ದಿನ ಅಲ್ಲ ಬರೊಬ್ಬರಿ ಈಕೆ ಮೂರು ತಿಂಗಳು ಕೆಲಸ ಮಾಡಿದ್ರೂ ಸಹ ಆಸ್ಪತ್ರೆ ವೈದ್ಯರಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ಈಕೆ ಯಾರು ಎಲ್ಲಿಂದ ಬಂದಿದ್ದಾಳೆ‌, ಎಂದು ಪರಿಶೀಲನೆ ನಡೆಸದೆ ಅಸಡ್ಡೆ ತೋರಿಸಿದ್ದಾರೆ. ಬಡವರ ಆಸ್ಪತ್ರೆಗೆ ವೈಟ್ ಎಪ್ರಾನ್ ಹಾಕಿಕೊಂಡು ಬರೋರೆಲ್ಲ ವೈದ್ಯರಾಗಿ ಬಿಡಬಹುದು ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.

Karnataka: ಶಕ್ತಿ ಸೌಧದ ವಿದ್ಯುತ್ ಬಿಲ್ ಬಾಕಿ| ಪವರ್ ಕಟ್ ಮಾಡುವ ಎಚ್ಚರಿಕೆ ನೀಡಿದ ಹೆಸ್ಕಾಂ!

ಕಳೆದ ಮೂರು ತಿಂಗಳಿನಿಂದ ಬೀಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸನಾರನ್ನು ಅಲ್ಲಿನ ಸಿಬ್ಬಂಧಿ ಹಲವು ಬಾರಿ ಪ್ರಶ್ನೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಸನಾ ಬೀಮ್ಸ್ ನಿರ್ದೇಶಕ ಅಶೋಕ್ ಶೆಟ್ಟಿ ಹೆಸರು ಹೇಳಿ ಸಿಬ್ಬಂಧಿಯನ್ನೆ ಹೆದರಸುತ್ತಿದ್ದಳು ಎನ್ನಲಾಗಿದೆ. ನಿನ್ನೆಯಷ್ಟೆ ಬೀಮ್ಸ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಸೆಕ್ಯೂರಿಟಿ ಗಾರ್ಡ್ ಕೈಗೆ ರೆಡ್ ಹ್ಯಾಂಡ್ ಆಗಿ ಸನಾ ಸಿಕ್ಕಿಬಿದ್ದಿದ್ದಾಳೆ. ಈ ವಿಚಾರನ್ನು ಸೆಕ್ಯೂರಿಟಿ ಗಾರ್ಡ್ ತಕ್ಷಣವೇ ಬೆಳಗಾವಿ ಬೀಮ್ಸ್ ಸರ್ಜನ್ ಹಾಗೂ ಆರ್ ಎಂ ಒ ಗಮನಕ್ಕೆ ತಂದಿದ್ದಾರೆ. ಹೀಗಾಗಿ ವೈಟ್ ಎಪ್ರಾನ್ ಹಾಕಿಕೊಂಡು ಕಳೆದ ಕೆಲ ತಿಂಗಳಿಂದ ತಾನೊಬ್ಬ ವಿದ್ಯಾರ್ಥಿ ಎಂದು ಹೇಳಿಕೊಂಡು ಟ್ರೀಟ್ಮೆಂಟ್ ಮಾಡ್ತಿದ್ದ ಸನಾಳ ಬಣ್ಣ ಬಯಲಾಗಿದೆ.

ಇನ್ನು ನಕಲಿ ವೈದ್ಯೆ ಬಗ್ಗೆ ತನಿಖೆ ನಡೆಸಿ ಒಂದುವಾರದಲ್ಲಿ ಮಾಹಿತಿ ನೀಡುವಂತೆ ಬೀಮ್ಸ್ ಆಡಳಿತ ನೋಟೀಸ್ ಜಾರಿಮಾಡಿದೆ.

ಜಾರಿಯಾದ ನೋಟೀಸ್

Advertisement
Tags :
Belagavi BIMS HospitalFake Doctor CaseHealth departmentHospital Security LapseKarnatakaKarnataka newsKarwar newsTrending newsViral news
Advertisement
Next Article
Advertisement