Haliyal:ಹಣ್ಣಿನ ಬಾಕ್ಸ್ ತರೆದ ಭಜರಂಗದಳ ಕಾರ್ಯಕರ್ತರಿಗೆ ಶಾಕ್! ಒಳಗಿತ್ತು ಹಿಂಸಾತ್ಮಕ ರೀತಿಯಲ್ಲಿ ಗೋವುಗಳು
Haliyal:ಹಣ್ಣಿನ ಬಾಕ್ಸ್ ತರೆದ ಭಜರಂಗದಳ ಕಾರ್ಯಕರ್ತರಿಗೆ ಶಾಕ್! ಒಳಗಿತ್ತು ಹಿಂಸಾತ್ಮಕ ರೀತಿಯಲ್ಲಿ ಗೋವುಗಳು
ಕಾರವಾರ:- ಹಣ್ಣುಗಳನ್ನು ಸಾಗಿಸುವ ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತಿದ್ದ ಜಾನುವಾರುಗಳನ್ನು ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಐದು ಜಾನುವಾರುಗಳನ್ನು ರಕ್ಷಿಸಿದೆ.
ಇದನ್ನೂ ಓದಿ:-Karwar :ಕುಡಿದ ಮತ್ತಿನಲ್ಲಿ ಮಾವನಿಂದ ಅಳಿಯನ ಹ**
ಆರೋಪಿಯನ್ನು ಹಳಿಯಾಳ (Haliyala) ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಯಲ್ಲಾಪುರ ರಾಜ್ಯ ಹೆದ್ದಾರಿಯ ಮುತ್ತಲಮುರಿ ಗ್ರಾಮದ ಬಳಿ ನಡೆದಿದೆ. ಬೆಳಗಾವಿಯ ಗಂದಿಗವಾಡದ ತನ್ವೀರ್ ಬಡೇಸಾಬ್ ಸಾಹೇಬ್ ಖಾನ್ (43) ಬಂಧಿತ ಆರೋಪಿಯಾಗಿದ್ದು ಬೆಳಗಾವಿ ನೋಂದಣಿಯ ಬೊಲೆರೊ ವಾಹನದಲ್ಲಿ ಎರಡು ಹೋರಿ ಮತ್ತು ಮೂರು ಎಮ್ಮೆಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿ ಅವುಗಳ ಮೇಲೆ ಹಣ್ಣಿನ ಟ್ರೇಗಳನ್ನು ಇಟ್ಟು ,ಯಾರಿಗೂ ಕಾಣದಂತೆ ಪ್ಲಾಸ್ಟಿಕ್ ಟಾರ್ಪಾಲ್ ಮುಚ್ಚಿ ಬೆಳಗಾವಿಯಿಂದ ಮಂಗಳೂರು ಕಡೆಗೆ ಸಾಗಿಸುತಿದ್ದನು.

ಈವೇಳೆ ಭಜರಂಗದಳದ ಕಾರ್ಯಕರ್ತರು ಎಲ್ಲವನ್ನು ವಶಪಡಿಸಿಕೊಂಡು ಹಳಿಯಾಳದ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.