Ankola:ಅಂಕೋಲ ದೇವಿಗದ್ದಾ ದಲ್ಲಿ ಗುಡ್ಡ ಕುಸಿತ - 24 ಗಂಟೆಯೊಳಗೆ ಮಣ್ಣು ತೆರವು
ಅಂಕೋಲ ದೇವಿಗದ್ದಾ ದಲ್ಲಿ ಗುಡ್ಡ ಕುಸಿತ - 24 ಗಂಟೆಯೊಳಗೆ ಮಣ್ಣು ತೆರವು
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಗೆ ಅಂಕೋಲ ತಾಲೂಕಿನ ದೇವಿಗದ್ದಾ ಗ್ರಾಮದ ರಸ್ತೆ ಮೇಲೆ ಬಂಡೆಕಲ್ಲುಗಳು ಉರುಳಿ ಬಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದ್ದು ಇದೀಗ ನಿರಂತರ ಕಾರ್ಯಾಚರಣೆ ಮೂಲಕ ಬಂಡೆಕಲ್ಲುಗಳನ್ನು ತೆರವು ಮಾಡಿ ದೇವಿಗದ್ದಾ ಗ್ರಾಮಕ್ಕೆ ತೆರಳಲು ಇದೀಗ ಸಂಚಾರ ಮುಕ್ತವಾಗಿದೆ.
ಇದನ್ನೂ ಓದಿ:-Ankola: ಮಂಗಳೂರಿಗೆ ತೆರಳುತಿದ್ದ ಬಸ್ ಹಳ್ಳದಲ್ಲಿ ಪಲ್ಟಿ-ಓರ್ವ ಸಾವು,ಐದು ಜನ ಗಂಭೀರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಮಳೆಯ ಆರ್ಭಟ ಇಳಿಕೆಯಾಗಿದೆ.ಆದರೇ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ ಜುಲೈ 30 ರ ವರೆಗೂ ಮಳೆಯಾಗಲಿದ್ದು ಯಲ್ಲೋ ಅಲರ್ಟ ನೀಡಲಾಗಿದೆ.
ಇನ್ನು ಕರಾವಳಿ ತೀರ ಭಾಗದಲ್ಲಿ ಹೆಚ್ಚಿನ ಗಾಳಿ ಇರುವುದರಿಂದ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ.ಆಗಷ್ಟ್ ನಿಂದ ಮೀನುಗಾರಿಕೆಗೆ ವಿಧಿಸಿದ್ದ ನಿರ್ಬಂಧ ತೆರವಾಗಲಿದೆ.ಈ ಹಿನ್ನಲೆಯಲ್ಲಿ ಮೀನುಗಾರರು ಬೋಟುಗಳ ರಿಪೇರಿಕಾರ್ಯ ಪೂರ್ಣಗೊಳಿಸಿ ಸಮುದ್ರಕ್ಕಿಳಿಯಲು ಸಿದ್ದವಾಗುತಿದ್ದು ,ಮಳೆ ಸಂಪೂರ್ಣ ಕಡಿಮೆಯಾದಲ್ಲಿ ಎಂದಿನಂತೆ ಮೀನುಗಾರಿಕೆ ಸಹ ಪ್ರಾರಂಭವಾಗಲಿದೆ.