ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

ಕುಮಟಾ| ಪಕ್ಷೇತರ ಸ್ಪರ್ಧೆ ಇಲ್ಲ, ನನ್ನ ಬೆಂಬಲ "ಅವರಿಗೆ" ಎಂದ JDS ನಾಯಕ ಸೂರಜ್ ಸೋನಿ

09:36 PM Mar 30, 2024 IST | ಶುಭಸಾಗರ್

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡ ಸೂರಜ್ ಸೋನಿಯವರು ಪಕ್ಷೇತರರಾಗಿ ಲೋಕಸಭಾ ಚುನಾವಣೆ ( Loksabha election 2024) ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಗೆ ತೆರೆ ಬಿದ್ದಿದೆ.

Advertisement

ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಕುಮಟಾ ಭಾಗದಲ್ಲಿ ಸೂರಜ್ ಸೋನಿಗೆ ಬಿಜೆಪಿ ಬಿಟ್ಟು ಜೆಡಿಎಸ್ ನಲ್ಲಿ ಇದ್ದಿದ್ದರಿಂದ ಎದುರಾಳಿ ಹಾಲಿ ಶಾಸಕ ದಿನಕರ್ ಶಟ್ಟಿ ಜೊತೆ ಕೆಲಸ ಮಾಡುವುದು ಸಮಸ್ಯೆ ತಂದೊಡ್ಡಿತ್ತು.

ಇದನ್ನೂ ಓದಿ:- ಸಿ.ಎಂ ಸ್ಥಾನಕ್ಕಾಗಿ ಮಹಾಬಲೇಶ್ವರ ,ಕಾಲಭೈರವನ ಮೊರೆಹೋದ ಡಿಕೆ ಶಿವಕುಮಾರ್.

ಇದನ್ನ ಅರಿತ ಸಚಿವ ಮಧು ಬಂಗಾರಪ್ಪ (Madhu bangarappa) ಕಾಂಗ್ರೆಸ್ ಗೆ (congress) ಆಹ್ವಾನ ನೀಡಿದ್ದಲ್ಲದೇ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಇನ್ನು ನಾಯಕ ಜನಾಂಗದ ಹಲವು ಮುಖಂಡರು ಕಾಂಗ್ರೆಸ್ ಗೆ ಬರುವಂತೆ ಸೂರಜ್ ಸೋನಿಗೆ ಒತ್ತಾಯಿಸಿದ್ದರು.
ಆದರೇ ಚುನಾವಣೆ ಘೋಷಣೆ ಆಗುತಿದ್ದಂತೆ ಸೂರಜ್ ಸೋನಿ ಬೆಂಬಲಿಗರು ಪಕ್ಷೇತರರಾಗಿ ಕಣಕ್ಕೆ ಇಳಿಯುವಂತೆ ಒತ್ತಾಯ ಮಾಡಿದ್ದರು.

Advertisement

ಆದ್ರೆ ಇದೀಗ ತಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಿಲ್ಲ, ಪಕ್ಷದ ವರಿಷ್ಟರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ( HD kumarswami) ರವರ ಮಾರ್ಗದರ್ಶನದಂತೆ ಲೋಕಸಭಾ ಚುನಾವಣೆಯಲ್ಲಿ ಕೆಲಸ ನಿರ್ವಹಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಕಾಗೇರಿ ಪರ ಇರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:-30 ವರ್ಷ ಸಂಸದರಾದ ಅನಂತಕುಮಾರ್ ಹೆಗಡೆ ರಣಾಂಗಣ ಹೇಗಿತ್ತು? ಅಂದಿನಿಂದ ಇಂದಿನ ವರೆಗೆ ಗಳಿಸಿದ ಮತವೆಷ್ಟು ಗೊತ್ತಾ?

ಇನ್ನು ಹಾಲಿ ಶಾಸಕ ದಿನಕರ್ ಶಟ್ಟಿ ಹಾಗೂ ಸೂರಜ್ ಸೋನಿ ನಡುವೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟು ಅಲ್ಪ ಮತದಲ್ಲಿ ಸೋಲುಕಂಡಿದ್ದ ಸೂರಜ್ ಸೋನಿಗೆ ಹಾಲಿ ಶಾಸಕ ದಿನಕರ್ ಶಟ್ಟಿಯೇ ಎದುರಾಳಿ .

ಹೀಗಿರುವಾಗ ಬಿಜೆಪಿ ಪರ ಪ್ರಚಾರದಲ್ಲಿ ಭಾಗವಹಿಸಿದರೇ ರಾಜಕೀಯವಾಗಿ ಸಮಸ್ಯೆ ತಲೆದೂರುತ್ತದೆ. ಇದನ್ನ ಹೇಗೆ ಬಗೆಹರಿಸುತ್ತಾರೆ ಎಂಬುದು ಕುತೂಹಲ ಮೂಡುವಂತಾಗಿದ್ದು ,ಒಟ್ಟಿನಲ್ಲಿ ಕುಮಟಾದ ಪ್ರಭಾವಿ ನಾಯಕ ಸೂರಜ್ ಸೋನಿ ಬೆಂಬಲ ಬಿಜೆಪಿ ಪರ ವಾಲಿರುವುದು ಕಾಗೇರಿಗೆ ಮತ್ತಷ್ಟು ಬಲ ಬಂದಂತಾಗಿದೆ.

Advertisement
Tags :
Bjp uttra kanndaJds leaderKannada newsKarnatakaKumtaLoksabha election 2024Uttarakannadaಸೂರಜ್ ಸೋನಿ
Advertisement
Next Article
Advertisement