For the best experience, open
https://m.kannadavani.news
on your mobile browser.
Advertisement

ಕಾಗೇರಿಗೆ ಅನಂತ ಮೌನದ ಪೆಟ್ಟು! ಮತ್ತೆ ಪ್ರಸಕ್ತ ರಾಜಕಾರಣಕ್ಕೆ ಬರಲಿದ್ದಾರಾ ಹಿಂದು ಹುಲಿ?

10:14 PM Apr 19, 2024 IST | ಶುಭಸಾಗರ್
ಕಾಗೇರಿಗೆ ಅನಂತ ಮೌನದ ಪೆಟ್ಟು  ಮತ್ತೆ ಪ್ರಸಕ್ತ ರಾಜಕಾರಣಕ್ಕೆ ಬರಲಿದ್ದಾರಾ ಹಿಂದು ಹುಲಿ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಂಸದರಾಗಿರುವ ಅನಂತಕುಮಾರ್ ಹೆಗಡೆ ಇದೀಗ ಮೌನವಾಗಿದ್ದಾರೆ. ಪಕ್ಷದ ಯಾವ ಪ್ರಚಾರದಲ್ಲಿ ಭಾಗವಹಿಸದೇ ಬೆಂಗಳೂರು ,ಶಿರಸಿ ಎಂದು ಓಡಾಡಿಕೊಂಡಿರುವ ಅವರ ಮೌನ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ.

Advertisement

ತಮ್ಮದೇ ಆದ ಮತ ಬ್ಯಾಂಕ್ ಹೊಂದಿರುವ ಅನಂತಕುಮಾರ್ ಹೆಗಡೆ ಚುನಾವಣಾ ಪೂರ್ವದಲ್ಲಿ ಇಡೀ ಕ್ಷೇತ್ರ ಓಡಾಡಿ ಮೋದಿ ಗೆಲ್ಲಿಸಿ ಅಂದವರು ಒಂದು ಸುತ್ತಿನ ಪ್ರಚಾರವನ್ನೇ ಮುಗಿಸಿದ್ದರು.

ಆದ್ರೆ ಎಲ್ಲಿ ಕಾಗೇರಿ ಅಭ್ಯರ್ಥಿ ಆಗುತಿದ್ದಂತೆ ತಟಸ್ಥರಾದ ಅವರು ತಮ್ಮ ಫೇಸ್ ಬುಕ್ ಮೂಲಕ ತಮ್ಮ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದರು. ಇನ್ನು ಕಾಗೇರಿ ಸಹ ಅನೇಕ ಬಾರಿ ಹೆಗಡೆ ಭೇಟಿಗೆ ಸಮಯ ಕೇಳಿದರೂ ಸಿಗಲಿಲ್ಲ ,ಅವರ ಬೆಂಬಲ ಬೇಕು ಎಂದು ಹೇಳುತ್ತಲೇ ಚುನಾವಣೆ ಮತದಾನದ ದಿನವೂ ಹತ್ತಿರ ಬರುತ್ತಿದೆ‌.

ಇನ್ನು ಅನಂತಕುಮಾರ್ ಹೆಗಡೆ ಆಪ್ತ ವಲಯದ ಮಾಹಿತಿ ಪ್ರಕಾರ ಹಿಂದೆ ಕಾಗೇರಿ ರವರು ಹೆಗಡೆ ಪರ ಪ್ರಚಾರಕ್ಕೆ ಬಾರದೇ ಕಾಲೆಳೆದಿದ್ದು ಹೆಚ್ಚು ,ಈಗ ಹೇಗೆ ಪ್ರಚಾರಕ್ಕೆ ಬರಬೇಕು ಎಂಬ ಪ್ರಶ್ನೆ ಮಾಡುತಿದ್ದಾರೆ.

ಇನ್ನು ಈ ಬಾರಿ ಯಾವುದೇ ಕಾರಣಕ್ಕೆ ಕಾಗೇರಿ ಪರ ಪ್ರಚಾರಕ್ಕೆ ಹೆಗಡೆ ಬರುವುದಿಲ್ಲ ಎಂಬ ಮಾಹಿತಿ ಹೆಗಡೆ ಆಪ್ತ ಮೂಲಗಳಿಂದ ಬರುತ್ತಿದೆ.

ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ (congres) ಜಿಲ್ಲೆಯಲ್ಲಿ ಚಿಗುರೊಡೆದಿದೆ‌. ಕಾಗೇರಿಗೆ ಆಘಾತ ನೀಡಲು ಕಾಂಗ್ರೆಸ್ ಬಳಸುತ್ತಿರುವ ತಂತ್ರಗಾರಿಕೆಗಳು ಫಲ ಕೊಡುತ್ತಿದೆ.ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಸರೂ ಇಲ್ಲ ಎನ್ನುತಿದ್ದ ಕಾಲ ಬದಲಾಗಿದೆ. ಇತ್ತ ಬಿಜೆಪಿ ಪ್ರಚಾರದ ಅಬ್ಬರ ಕಾವು ಪಡೆದಿಲ್ಲ, ಇನ್ನು ಅನಂತಕುಮಾರ್ ಹೆಗಡೆ ಮೌನ ಕಾಗೇರಿಗೆ ಆಘಾತ ನೀಡುತ್ತಿದೆ. ಈಗಿರುವ ಸ್ಥಿತಿಯಲ್ಲಿ ಕಾಂಗ್ರೆಸ್ ಬಿಜೆಪಿ(bjp) ಮತಪೆಟ್ಟಿಗೆಗೆ ಕೈ ಹಾಕುತ್ತಿದೆ. ಬಿಜೆಪಿ ಯ ಅಶ್ವವನ್ನು ಕಾಂಗ್ರೆಸ್ ನವರು ಕಟ್ಟಿಹಾಕಿದ್ದಾರೆ. ಯುದ್ಧ ನಡೆದ ನಂತರವೇ ನಿಜ ಸ್ಥಿತಿ ತಿಳಿಯುವುದಾದರೂ ಕಾಂಗ್ರೆಸ್ ಈ ಭಾರಿ ದೊಡ್ಡ ಮತ ಗಳಿಸುವ ಎಲ್ಲಾ ಸಾಧ್ಯತೆಗಳಿವೆ‌.

ಇನ್ನು ಅನಂತಕುಮಾರ್ ಹೆಗಡೆ (ananthkumar hegde) ಸದ್ಯ ಬೆಂಗಳೂರಿನಲ್ಲಿದ್ದು ಜಿಲ್ಲೆಯ ರಾಜಕಾರಣದ ಬಗ್ಗೆ ಪ್ರತಿ ಮಾಹಿತಿ ಪಡೆಯುತಿದ್ದು ಬದಲಾವಣೆಯನ್ನು ಗಮನಿಸುತಿದ್ದಾರೆ .ಇನ್ನು ಕದಂಬ ಬಗ್ಗೆ ಹೆಚ್ಚು ತೊಡಗಿಕೊಂಡಿದ್ದು ತಮ್ಮ ಉದ್ಯಮದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದಾರೆ ಎನ್ನುತ್ತಾರೆ ಅವರ ಆಪ್ತ ವಲಯದವರು.

ಶೀಘ್ರದಲ್ಲೇ ಚುನಾವಣೆ ನಂತರ ತಮ್ಮ ಆಪ್ತ ವಲಯಕ್ಕೆ ಶುಭ ಸುದ್ದಿ ಕೊಡುತ್ತಾರೆ ಎಂಬ ಸುದ್ದಿ ಹರಿದಾಡುತಿದ್ದು ,ಲೋಕಸಭಾ ಚುನಾವಣೆ ನಂತರ ಪ್ರಸಕ್ತ ರಾಜಕಾರಣಕ್ಕೆ ಮರಳುವ ನಿರೀಕ್ಷೆ ಇದೆ.

ರಾಜಕೀಯ ನಿವೃತ್ತಿ ಎನ್ನುತಿದ್ದ ಹೆಗಡೆ ಇದೀಗ ಮರಳಿ ಪಕ್ಷದ ರಾಜಕಾರಣಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ.

ವಿವಾಧಿತ ಭಾಷಣದಿಂದ ಪಕ್ಷಕ್ಕೆ ಆದ ತೊಂದರೆಗಳನ್ನು ನಿವಾರಿಸಿಕೊಳ್ಳಲು ಹೆಗಡೆಯವರನ್ನು ತಟಸ್ಥರನ್ನಾಗಿಸಲಾಗಿದೆ ಎನ್ನಲಾಗುತಿದ್ದು ,ಮುಂದಿನ ಬದಲಾದ ರಾಜಕೀಯದಲ್ಲಿ ಅವರನ್ನು ಬಳಸಿಕೊಳ್ಳಲು ಪಕ್ಷ ಬಯಸಿದೆ ಎನ್ನುತ್ತದೆ ಮೂಲಗಳು. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ನಂತರ ಅನಂತಕುಮಾರ್ ಹೆಗಡೆ ಮರಳಿ ರಾಜಕೀಯದಲ್ಲಿ ಸಕ್ರಿಯರಾಗುವ ಸಾಧ್ಯತೆಗಳಿದ್ದು ಅದು ರಾಜ್ಯ ರಾಜಕಾರಣಕ್ಕೂ ಅಥವಾ ರಾಷ್ಟ್ರ ರಾಜಕಾರಣಕ್ಕೋ ಎಂಬುದನ್ನು ಅವರೇ ಮುಂದೆ ತಿಳಿಸಲಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ