Uttara kannda:ಕರಾವಳಿಯಲ್ಲಿ ಅಲರ್ಟ - ಪ್ರವಾಸಿಗರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು
ಕರಾವಳಿಯಲ್ಲಿ ಅಲರ್ಟ - ಪ್ರವಾಸಿಗರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು
ಕಾರವಾರ :- ಕಾಶ್ಮೀರ ದಲ್ಲಿ ಪ್ರವಾಸಿಗರ ಮೇಲೆ ಉಗ್ರರ ನರಮೇಧ ನಡೆಸಿದ ಬೆನ್ನಲ್ಲೇ ಕರ್ನಾಟಕ ಕಾಶ್ಮೀರ (Kashmir) ಎಂದೇ ಹೆಸರಾಗಿರುವ ಪ್ರವಾಸಿಗರ ಮೆಚ್ಚಿನ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ರಜೆ ಹಿನ್ನಲೆಯಲ್ಲಿ ಬಿಗು ತಪಾಸಣೆಯನ್ನು ಕೈಗೊಳ್ಳಲಾಗಿದೆ.
ಜಿಲ್ಲಾ ಪೊಲೀಸರು,ಕರಾವಳಿ ಕಾವಲು ಪಡೆ, ಭಾರತೀಯ ತಟರಕ್ಷಕ ದಳ ಅಲರ್ಟ ಆಗಿದ್ದು ಎಲ್ಲೆಡೆ ತಪಾಸಣೆ ಕೈಗೊಳ್ಳುತ್ತಿದೆ.
ಜಿಲ್ಲೆಯ ಮುರುಡೇಶ್ವರ, ಗೋಕರ್ಣ ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಜಿಲ್ಲಾ ಪೊಲೀಸರು ಪ್ರವಾಸಿಗರ ಮಾಹಿತಿ ಕಲೆ ಹಾಕುತಿದ್ದು , ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿ ಬರುವ ಪ್ರವಾಸಿಗರ ಮಾಹಿತಿ ಪಡೆಯಲು ಸೂಚಿಸಿದೆ.
ಇನ್ನು ಕರಾವಳಿ ಕಾವಲುಪಡೆ ಹಾಗೂ ಭಾರತೀಯ ತಟರಕ್ಷಣಾ ಪಡೆಗಳು ಕರಾವಳಿ ಭಾಗದಲ್ಲಿ ಶತ್ರಗಳು ಒಳ ನುಗ್ಗದಂತೆ ತಡೆಯಲು ಬೋಟುಗಳ ತಪಾಸಣೆ ನಡೆಸುತಿದ್ದು ಕರಾವಳಿ ಭಾಗದಲ್ಲಿ ಬಿಗಿ ತಪಾಸಣೆ ಕೈಗೊಂಡಿದೆ.
ರಜೆಹಿನ್ನಲೆ ಪ್ರವಾಸಿಗರ ಹೆಚ್ಚಳ.
ಇನ್ನು ಕರಾವಳಿ ಭಾಗಕ್ಕೆ ದೇಶ ವಿದೇಶದ ಪ್ರಜೆಗಳು ಆಗಮಿಸುತಿದ್ದಾರೆ. ಜೊತೆಗೆ ಸಾಲು ಸಾಲು ರಜೆ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸರು ತಪಾಸಣೆ ಮತ್ತು ಮಾಹಿತಿ ಕಲೆಹಾಕುತಿದ್ದಾರೆ. ಸದ್ಯ ಜಿಲ್ಲೆಯ ಗೋಕರ್ಣ, ಮುರುಡೇಶ್ವರ ದಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತಿದ್ದು ಕಡಲ ತೀರಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.