ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar: ಕಾಂಗ್ರೆಸ್ ಶಾಸಕನ ಮನೆಯ ಮೇಲೆ ಇಡಿ ತಂಡ ದಾಳಿ- ಮನೆ ವಶಕ್ಕೆ?

ಕಾರವಾರ :- ಬೆಳಂಬೆಳಗ್ಗೆ ಕಾರವಾರ (karwar) ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿ ಕೇಶವ್ ನೇತೃತ್ವದಲ್ಲಿ 12 ಪ್ಯಾರಾ ಮಿಲಿಟರಿ ಶಸಸ್ತ್ರ ತಂಡದೊಂದಿಗೆ ಸುಮಾರು 6 ಅಧಿಕಾರಿಗಳ ತಂಡ ದಾಳಿ ಮಾಡಿದೆ.
09:43 AM Aug 13, 2025 IST | ಶುಭಸಾಗರ್
ಕಾರವಾರ :- ಬೆಳಂಬೆಳಗ್ಗೆ ಕಾರವಾರ (karwar) ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿ ಕೇಶವ್ ನೇತೃತ್ವದಲ್ಲಿ 12 ಪ್ಯಾರಾ ಮಿಲಿಟರಿ ಶಸಸ್ತ್ರ ತಂಡದೊಂದಿಗೆ ಸುಮಾರು 6 ಅಧಿಕಾರಿಗಳ ತಂಡ ದಾಳಿ ಮಾಡಿದೆ.

Karwar: ಕಾಂಗ್ರೆಸ್ ಶಾಸಕನ ಮನೆಯ ಮೇಲೆ ಇಡಿ ತಂಡ ದಾಳಿ- ಮನೆ ವಶಕ್ಕೆ?

Advertisement

ಕಾರವಾರ  :- ಬೆಳಂಬೆಳಗ್ಗೆ ಕಾರವಾರ (karwar)  ಶಾಸಕ ಸತೀಶ್ ಸೈಲ್ (MLA Sathish sail) ಮನೆಯ ಮೇಲೆ ಇಡಿ ಅಧಿಕಾರಿಗಳು  ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿ ಕೇಶವ್ ನೇತೃತ್ವದಲ್ಲಿ  12 ಪ್ಯಾರಾ ಮಿಲಿಟರಿ ಶಸಸ್ತ್ರ ತಂಡದೊಂದಿಗೆ ಸುಮಾರು 6 ಅಧಿಕಾರಿಗಳ ತಂಡ ದಾಳಿ ಮಾಡಿದೆ.

 ಈ ವೇಳೆ ಶಾಸಕರಾಗಲಿ ಅಥವಾ ಅವರ ಕುಟುಂಬದವರಾಗಲಿ ಮನೆಯಲ್ಲಿ ಇರಲಿಲ್ಲ‌ ‌.ಹೀಗಾಗಿ ಮನೆಯಲ್ಲಿ ಇರುವ ಕೆಲಸದವನನ್ನು ವಿಚಾರಣೆ ನಡೆಸುತಿದ್ದು ಶಾಸಕರಿಗೂ ಬುಲಾವ್ ಹೋಗಿದೆ.

Advertisement

ಇನ್ನು ದಾಳಿ ಮಾಡಿದ ಅಧಿಕಾರಿಗಳು ಮನೆಯನ್ನು ಸಂಪೂರ್ಣ ವಶಕ್ಕೆ ಪಡೆದಿದ್ದಾರೆ‌.ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅದಿರು ಸಾಗಾಟ ನಡೆಸುತ್ತಿದ್ದ ಸತೀಶ್ ಸೈಲ್ಈ ಹಿಂದೆ ಆಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಈ ಕುರಿತು ಈ ಹಿಂದೆ ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ ತಂಡದಿಂದ ದೂರು ದಾಖಲಿಸಲಾಗಿತ್ತು, ಜನಪ್ರತಿನಿಧಿಗಳ ನ್ಯಾಯಾಲದಿಂದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹೈ ಕೋರ್ಟ್ ಮೂಲಕ ಜಾಮೀನು ಪಡೆದಿರುವ ಸತೀಶ್ ಸೈಲ್ ಹೊರಬಂದಿದ್ದರು. ಇನ್ನು ಆದಾಯಕ್ಕಿಂತ ಅಧಿಕ ಹಣ ಮಾಡಿರುವ ಆರೋಪ ಸಹ ಇವರ ಮೇಲೆ ಇದ್ದು ಇದೀಗ ಇಡಿ ಅಧಿಕಾರಿಗಳು ರೈಡ್ ಮಾಡಿದ್ದಾರೆ.

Advertisement
Tags :
ED raideKarnatakaKarwarMla sathish sailNewsUttara Kannada
Advertisement
Next Article
Advertisement