Karwar|ಅನಾರೋಗ್ಯದ ನಡುವೆಯೇ ಮನೆಗೆ ಬಂದ ಶೈಲ್ ಗೆ ಇಡಿ ಮತ್ತೊಂದು ಶಾಕ್ !
Karwar|ಅನಾರೋಗ್ಯದ ನಡುವೆಯೇ ಮನೆಗೆ ಬಂದ ಶೈಲ್ ಗೆ ಇಡಿ ಮತ್ತೊಂದು ಶಾಕ್ !
ಕಾರವಾರ :- ಇಡಿ ದಾಳಿ ನಡೆದು ಒಂದು ವಾರದ ಬಳಿಕ ಕಾರವಾರ ಕ್ಷೇತ್ರದ (karwar) ಶಾಸಕ ಸತೀಶ್ ಸೈಲ್ ಕ್ಷೇತ್ರಕ್ಕೆ ಮರಳಿ ಬಂದಿದ್ದಾರೆ.ಕಳೆದ ಬುಧವಾರ ಅಗಸ್ಟ್ 13 ರಂದು ಇಡಿ ಅಧಿಕಾರಿಗಳಿಂದಾದ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಚಿತ್ತಾಕುಲದ ಮನೆಯ ಮೇಲೆ ಇಡಿ ದಾಳಿ ನಡೆಸಿತ್ತು.
ಈ ಸಂದರ್ಭದಲ್ಲಿ ಇಡಿ ಅಧಿಕಾರಿಗಳು 22 ಗಂಟೆಗಳ ಶೋಧ ನಡೆಸಿ ಬರೋಬ್ಬರಿ 14.13 ಕೋಟಿ ಮೌಲ್ಯದ ವಸ್ತುಗಳನ್ನು ಸೀಝ್ ಮಾಡಿತ್ತು. ಇನ್ನು ಅನಾರೋಗ್ಯದ ಕಾರಣ ಸೈಲ್ ದೆಹಲಿಯ ಆಸ್ಪತ್ರೆ ಯೊಂದರಲ್ಲಿ ಚಿಕಿತ್ಸೆ ಪಡೆಯುತಿದ್ದರು. ಇದೀಗ ಇಂದು ಕಾರವಾರ ಕ್ಕೆ ಬಂದಿದ್ದು ಇಡಿ ಅಧಿಕಾರಿಗಳು ಶಾಸಕ ಸೈಲ್ ಗೆ ನೋಟಿಸ್ ನೀಡಿವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ:-ED Raide: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಸಿಕ್ಕಿದ್ದೆಷ್ಟು?
ಬೇಲಿಕೇರಿ ಬಂದರಿನಿಂದ ಆಕ್ರಮ ಅದಿರು ಸಾಗಾಟ ಸಂಬಂಧ ಇಡಿ ಅಧಿಕಾರುಗಳು ದಾಳಿ ನಡೆಸಿದ್ದಾರೆ.ಇದಲ್ಲದೇ ಅದಿರು ನಾಪತ್ತೆ ಪ್ರಕರಣದಲ್ಲಿ ತನಿಖೆ ಸಹ ಶಾಸಕ ಸೈಲ್ ಎದುರಿಸುತಿದ್ದಾರೆ.