Karwar: ಕರಾವಳಿ ಉತ್ಸವ ರದ್ದಿಲ್ಲ ಮುಂದೂಡಿಕೆ
Karwar: ಕರಾವಳಿ ಉತ್ಸವ ರದ್ದಿಲ್ಲ ಮುಂದೂಡಿಕೆ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar ) ಮೇ 4 ರಿಂದ ನಡೆಸಲು ಉದ್ದೇಶಿಸಿದ್ದು ಕೆಲವು ಕಾರಣಗಳಿಂದ ಮುಂದೂಡಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ,ಶಾಸಕ ಸತೀಶ್ ಸೈಲ್ ರವರು ಮಾತೂಕತೆ ನಡೆಸಿ ಕರಾವಳಿ ಉತ್ಸವವನ್ನು ಮುಂದೂಡುವ ನಿರ್ಣಯ ಕೈಗೊಂಡಿದ್ದಾರೆ.
ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನಲೆ ಎಂದು ಹೇಳಲಾಗಿತ್ತಾದರೂ ಇತರೆ ಕಾರಣಗಳು ಸಹ ಉತ್ಸವ ರದ್ದಾಗಲು ಕಾರಣವಾಗಿದೆ. ಕಾರವಾರದ ರವೀಂದ್ರನಾಥ ಟಾಗೂರ್ ಕಡಲ ತೀರದಲ್ಲಿ ಪೆಂಡಾಲ್ ಹಾಕಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಇಂದು ಎಲ್ಲವನ್ನೂ ತೆಗೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ'-Karwar :ಕಾರವಾರದಲ್ಲಿ ಮೇ 4 ರಿಂದ 5 ದಿನಗಳ ಅದ್ದೂರಿ ಕರಾವಳಿ ಉತ್ಸವ : ಸತೀಶ್ ಸೈಲ್
ಇನ್ನು ಕರಾವಳಿ ಉತ್ಸವವನ್ನು ದಿನಾಂಕ ಮಾತ್ರ ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ಗೊತ್ತುಪಡಿಸಿ ಕರಾವಳಿ ಉತ್ಸವ ಆಯೋಜಿಸಲಾಗುವುದು ಎಂದು ಜಿಲ್ಲಾಡಳಿತ ಮೂಲಗಳು ಹೇಳಿವೆ.
ಇನ್ನು ಕರಾವಳಿ ಉತ್ಸವ ನಡೆಸಲು ದಿನಾಂಕ ನಿಗದಿಯಾದ ದಿನದಿಂದಲೇ ಹಲವು ವಿಘ್ನಗಳು ಮೂಡಿದ್ದವು. ಸಭೆಗೆ ಜಿಲ್ಲಾ ಉಸ್ತವಾರಿ ಸಚಿವರು ಗೈರಾಗಿದ್ದರು.
ಇದಾದ ನಂತರ ಉತ್ಸವಕ್ಕೆ ಮುಖ್ಯಮಂತ್ರಿಗಳನ್ನು ಕರೆಸಲೇ ಬೇಕು ಎಂಬ ಹಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬಿದ್ದಿದ್ದರು. ಹಿಂದೆ ಬನವಾಸಿ ಉತ್ಸವದಲ್ಲಿ ಆದ ಅಚಾತುರ್ಗಳು ಕರಾವಳಿ ಉತ್ಸವದಲ್ಲಿ ಆಗಬಾರದು ಎಂಬ ಎಂಬ ನಿಲುವಿತ್ತು.
ಇನ್ನು ಮುಖ್ಯಮಂತ್ರಿಗಳ ದಿನಾಂಕ ನಿಗದಿಯಾಗದ ಹಿನ್ನಲೆ ಸಹ ಕರಾವಳಿ ಉತ್ಸವ ಕಾರ್ಯಕ್ರಮ ಮುಂದೂಡಲು ಕಾರಣವಾಗಿದೆ ಎನ್ನಲಾಗುತ್ತಿದೆ.