Karwar: ಶಾಸಕ ಸೈಲ್ ಮನೆಯಮೇಲೆ ED ರೈಡ್ |ಸಿಕ್ಕಿದ್ದೇನು?
Karwar: ಶಾಸಕ ಸೈಲ್ ಮನೆಯಮೇಲೆ ED ರೈಡ್ |ಸಿಕ್ಕಿದ್ದೇನು?
ಕಾರವಾರ:- ಬುಧವಾರ ಬೆಳಂಬೆಳಗ್ಗೆ ಗಣಿ ದಣಿಗಳಿಗೆ ಇಡಿ ಶಾಕ್ ನೀಡಿದೆ. ರಾಜ್ಯದಲ್ಲಿ ಸದ್ದು ಮಾಡಿದ್ದ ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ ಉತ್ತರ ಕನ್ನಡ (uttara kannada) ಹಾಗೂ ವಿಜಯನಗರ ಜಿಲ್ಲೆಯ ಗಣಿ ದಣಿಗಳಿಗಳಿಗೆ ಗ್ರಿಲ್ ಮಾಡಿದ್ದು 20 ತಾಸುಗಳಿಗೂ ಹೆಚ್ಚುಕಾಲ ಶೋಧ ನಡೆಸಿದ್ದಾರೆ .
ಉತ್ತರ ಕನ್ನಡ ಜಿಲ್ಲೆ ಅಂಕೋಲ(ankola) ತಾಲೂಕಿನ ಬೇಲಿಕೇರಿ ಅದಿರು(belikeri mining) ನಾಪತ್ತೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಗಣಿ ದಣಿಗಳಿಗೆ ಇಡಿ ಶಾಕ್ ನೀಡಿದೆ. ಕಾರವಾರ -ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ,ವಿಜಯನಗರ ಜಿಲ್ಲೆಯ ಹೊಸಪೇಟೆಯ ಗಣಿ ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್ ಹಾಗೂ ಕಾಂಗ್ರೆಸ್ ನಗರಸಭೆ ಸದಸ್ಯ ಕಾರದಪುಡಿ ಮಹೇಶ್ ಮನೆಗೆ ಇಡಿ ದಾಳಿ ನಡೆಸಿದೆ.
ಇದನ್ನೂ ಓದಿ:-Karnataka:ಅಪ್ಸರಕೊಂಡ-ಮುಗಳಿ ಸಾಗರ ವನ್ಯಜೀವಿಧಾಮ ಸೆಪ್ಟೆಂಬರ್ ನಲ್ಲಿ ಲೋಕಾರ್ಪಣೆ.
ಕಾರವಾರ ಶಾಸಕ ಸತೀಶ್ ಸೈಲ್ ರವರ ಚಿತ್ತಾಕುಲದಲ್ಲಿನ ನಿವಾಸಕ್ಕೆ ಕೇಶವ್ ರಾವ್ ನೇತ್ರತ್ವದ ಏಳು ಜನ ಇಡಿ ಅಧಿಕಾರಿಗಳು ಹಾಗೂ ಸಿ.ಆರ್.ಪಿ (ಸೆಂಟ್ರಲ್ ರಿಸರ್ವ ಪೊಲೀಸ್ ) ಸಿಬ್ಬಂದಿಗಳು ಸೇರಿ ಒಟ್ಟು ಇಪ್ಪತ್ತು ಜನರು ದಾಳಿ ಮಾಡಿದ್ದಾರೆ.ಆದ್ರೆ ಶಾಸಕ ಸೈಲ್ ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿದ್ದು ,ಕುಟುಂಬವು ಸಹ ಬೆಂಗಳೂರಿನಲ್ಲಿದ್ದ ಕಾರಣ ಮನೆಯಲ್ಲಿ ಶಾಸಕರ ಅತ್ತೆ , ಮ್ಯಾನೇಜರ್ , ಸಹಾಯಕ ಸಿಬ್ಬಂದಿಗಳಿದ್ದರು.ಇನ್ನು ಶಾಸಕರ ಸೈಲ್ ಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ ಶಾಸಕರ ಎರಡು ಮನೆಗಳನ್ನು ಶೋಧಿಸಲಾಯಿತು.ಇದರ ಜೊತೆಗೆ ಶಾಸಕ ಮ್ಯಾನೇಜರ್ ಅಭಯ್ ಹಾಗೂ ನಾರಾಯಣ್ ರವರನ್ನು ಸಹ ತನಿಖೆಗೆ ಒಳಪಡಿಸಲಾಗಿದ್ದು ಹಣದ ಸಂಬಂಧ ಇಂಡಿಯನ್ ಬ್ಯಾಂಕ್ ಅಧಿಕಾರಿಗಳಿಗು ಸಹ ಡ್ರಿಲ್ ಮಾಡಲಾಗಿದೆ.
ಕಾರವಾರ(karwar) ಶಾಸಕ ಸೈಲ್ ಮಲ್ಲಿಕಾರ್ಜುನ್ ಶಿಪ್ಪಿಂಗ್ ಕಂಪನಿ ಮಾಲೀಕರಾಗಿದ್ದು ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಜನಪ್ರತಿನಿಧಿಗಳ ನ್ಯಾಯಾಲಯ ಏಳು ವರ್ಷ ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ ನಲ್ಲಿ ಆದೇಶಕ್ಕೆ ತಡೆ ತಂದಿದ್ದರು. ಇನ್ನು ವಿಜಯಪುರ ಜಿಲ್ಲೆಯ ಸ್ವಸ್ತಿಕ್ ನಾಗರಾಜ್ ಹಾಗೂ ಕಾಂಗ್ರೆಸ್ ನಗರಸಭೆ ಸದಸ್ಯ ಕಾರದಪುಡಿ ಮಹೇಶ್ ರವರು ಶಾಸಕ ಸೈಲ್ ಗೆ ಆಪ್ತರಾಗಿದ್ದು ಹಲವು ವ್ಯವಹಾರಗಳಲ್ಲಿ ಒಟ್ಟಿಗಿದ್ದರು.
ಇದನ್ನೂ ಓದಿ:-Karwar:ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಆಗಸ್ಟ್ 15 ರ ನಂತರ ಪ್ರತಿ ಶನಿವಾರ ಪೂರ್ಣಾವಧಿ ಶಾಲೆಗಳ ತರಗತಿ !
ಇದಲ್ಲದೇ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದಲ್ಲು ಸಹ ಈ ಮೂವರು ಆರೋಪಿಗಳಾಗಿದ್ದಾರೆ. ಇಂದು ನಡೆದ ಇಡಿ ದಾಳಿಯಲ್ಲಿ ಕೆಲವು ದಾಖಲೆ ಪತ್ರಗಳು ,ಅಲ್ಪ ಮಟ್ಟದ ಹಣ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳ ಮಾಹಿತಿಯಾಗಿದೆ.
ಇನ್ನು ಹಣದ ವಹಿವಾಟು ಮಾಹಿತಿಗಾಗಿ ಕಾರವಾರದ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಹಾಗೂ ಇಬ್ಬರು ಸಿಬ್ಬಂದಿಗಳನ್ನು ಸಹ ತನಿಖೆಗೆ ಒಳಪಡಿಸಿ ಎರಡು ಟ್ರಂಕ್ ನಲ್ಲಿ ಬೆಂಗಳೂರು ಕಚೇರಿಗೆ ದಾಖಲೆ ಪತ್ರಗಳು ,ವಶಪಡಿಸಿಕೊಂಡ ಹಣ ಸೇರಿದಂತೆ ಇತರೆ ದಾಖಲೆಗಳನ್ನು ರವಾನೆ ಮಾಡಲಾಗಿದೆ.
ಇನ್ನು ಶಾಸಕ ಸತೀಶ್ ಸೈಲ್ ನಿನ್ನೆಯಿಂದ ಮೊಬೈಲ್ ಸ್ವಿಚ್ ಆಫ್ ಆಗಿದ್ದು ,ಯಾರ ಕೈಗೂ ಸಿಕ್ಕಿಲ್ಲ. ಅಜ್ಞಾತ ಸ್ಥಳದಲ್ಲಿ ಇದ್ದಾರೆ ಎಂದು ಹೇಳಲಾಗಿದ್ದು ,ಸಧ್ಯ ಇಡಿ ಅಧಿಕಾರಿಗಳು ಶಾಸಕರ ಮನೆಯಲ್ಲಿ ಇಂದು ಮುಂಜಾನೆ ವರೆಗೂ ಶೋಧ ಕಾರ್ಯ ನಡೆಸಿದ್ದು ಏನೆಲ್ಲಾ ವಶಕ್ಕೆ ಪಡೆಯಲಾಗಿದೆ ಎಂಬುದು ತಿಳಿದುಬರಬೇಕಿದೆ.