Karwar : ನಗರಸಭೆ ಮಾಜಿ ಸದಸ್ಯನ ಹತ್ಯೆ ಆರೋಪಿ ಕಾಲಿಗೆ ಗುಂಡು! ಮೂರು ಜನ ಪೊಲೀಸರಿಗೂ ಗಾಯ
Karwar : ನಗರಸಭೆ ಮಾಜಿ ಸದಸ್ಯನ ಹತ್ಯೆ ಆರೋಪಿ ಕಾಲಿಗೆ ಗುಂಡು! ಮೂರು ಜನ ಪೊಲೀಸರಿಗೂ ಗಾಯ.
ಕಾರವಾರ :- ನಗರಸಭಾ ಮಾಜಿ ಸದಸ್ಯ ಸತೀಶ್ ಕೊಳಂಬಕರ್ ಹತ್ಯೆ ಆರೋಪಿಯನ್ನು ಪಂಚನಾಮೆಗೆ ಕರೆದೊಯ್ದು ವೇಳೆ ಪೊಲೀಸರ(police) ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ದ ಮಾಜಾಳಿಯಲ್ಲಿ ನಡೆದಿದೆ.
ಆರೋಪಿ ನಿತೇಶ್ ತಾಂಡೇಲ್ ಕಾಲಿಗೆ ಗುಂಡುಬಿದ್ದ ಆರೋಪಿಯಾಗಿದ್ದಾರೆ.
ಮಾಜಿ ನಗರಸಭಾ ಸದಸ್ಯ ಸತೀಶ್ ಕೊಳಂಬಕರ್ ಹತ್ಯೆ ಆರೋಪದಡಿ ಬಂಧಿತನಾಗಿದ್ದ ಆರೋಪಿಯನ್ನು ಪಂಚನಾನಾಮೆಗೆ ಕರೆದೊಯ್ದ ವೇಳೆ ಈ ಘಟನೆ ನಡೆದಿದ್ದು ,ಪಿ.ಎಸ್.ಐ ಕುಮಾರ್ ಕಾಂಬ್ಳೆರವರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.
ಇದನ್ನೂ ಓದಿ:-Karwar |ನಡು ರಸ್ತೆಯಲ್ಲೇ ಮಾಜಿ ನಗರಸಭೆ ಸದಸ್ಯನ ಭರ್ಭರ ಹ**ತ್ಯೆ
ಆರೋಪಿ ತಪ್ಪಿಸಿಕೊಳ್ಳುವಾಗ PSI ಕುಮಾರ್ ಕಾಂಬ್ಳೆ , ಹೆಡ್ ಕಾನಸ್ಟೇಬಲ್ ಹಸನ್ ಕುಟ್ಟಿ , ಕಾನಸ್ಟೇಬಲ್ ಗಿರೀಶಯ್ಯ ಮೇಲೆ ಹಲ್ಲೆ ಮಾಡಲಾಗಿದ್ದು ,ಆರೋಪಿ ಹಾಗೂ ಹಲ್ಲೆಗೊಳಗಾದ ಪೊಲೀಸರನ್ನ ಕಾರವಾರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಸ್ಪತ್ರೆಗೆ ಎಸ್. ಪಿ ಎಂ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಚಿತ್ತಾಕುಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.