ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar :ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮುಚ್ಚಲು ಆರ್‌ಬಿಐ ಆದೇಶ

ಕಾರವಾರ /ಬಾಂಬೆ:-ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ದಿ ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ ಗೆ ನೀಡಿದ್ದ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ರದ್ದುಪಡಿಸಿದೆ.
11:51 PM Jul 23, 2025 IST | ಶುಭಸಾಗರ್

ಕೆಲವು ತಿಂಗಳ ಹಿಂದೆ ಠೇವಣಿದಾರರ ಹಣ ನೀಡದೇ ವಿವಾದಕ್ಕೆ ಗುರಿಯಾಗಿದ್ದ ಈ ಬ್ಯಾಂಕ್ ಗೆ ಆರ್.ಬಿ.ಐ ಅಗತ್ಯವಾಗಿ ಬೇಕಾದ ಠೇವಣಿಯ ಬಂಡವಾಳವಿಲ್ಲ, ಬ್ಯಾಂಕಿನ ವಹಿವಾಟು, ಗಳಿಕೆ ಸಾಧ್ಯತೆಯೂ ಚನ್ನಾಗಿಲ್ಲ ಎಂದು ಹೇಳಿದೆ.

ಪರವಾನಗಿ ರದ್ದಾಗಿರುವುದರ ಪರಿಣಾಮ ಈ ಬ್ಯಾಂಕ್‌ನ ಕಾರ್ಯಗಳು ಬುಧವಾರದ ಅಂತ್ಯದ ನಂತರ ಸ್ಥಗಿತಗೊಳ್ಳಲಿವೆ.

Advertisement

ಈ ಬ್ಯಾಂಕ್‌ನ್ನು ಮುಚ್ಚುವ ಆದೇಶ ಹೊರಡಿಸುವಂತೆ ಕರ್ನಾಟಕದ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಆರ್‌ಬಿಐ ಮನವಿ ಮಾಡಿದೆ. ಬ್ಯಾಂಕನ್ನು ಮುಚ್ಚುವ ಪ್ರಕ್ರಿಯೆಗಳನ್ನು ನೋಡಿಕೊಳ್ಳಲು ಅಧಿಕಾರಿಯನ್ನು (ಲಿಕ್ವಿಡೇಟರ್) ನೇಮಕ ಮಾಡುವಂತೆ ಸೂಚಿಸಿದೆ.

ಬ್ಯಾಂಕ್‌ನ್ನು ಮುಚ್ಚುವ ಪ್ರಕ್ರಿಯೆ ಪೂರ್ಣಗೊಂಡ ನಂತರದಲ್ಲಿ, ಠೇವಣಿದಾರರಿಗೆ 5 ಲಕ್ಷದವರೆಗೆ ಠೇವಣಿ ವಿಮೆ ಸಿಗಲಿದೆ. ಬ್ಯಾಂಕ್‌ನ ಠೇವಣಿದಾರರ ಪೈಕಿ ಶೇ 92.9ರಷ್ಟು ಗ್ರಾಹಕರು ತಮ್ಮ ಠೇವಣಿಯ ಪೂರ್ಣ ಮೊತ್ತವನ್ನು ವಿಮಾ ಪರಿಹಾರದ ರೂಪದಲ್ಲಿ ಪಡೆಯಲು ಅರ್ಹರಿದ್ದಾರೆ ಎಂದು ಆರ್‌ಬಿಐ ಹೇಳಿದೆ.

ಈ ಹಿಂದೆ ವಿಮಾ ವ್ಯಾಪ್ತಿಯಲ್ಲಿ ಇರುವ ಠೇವಣಿಗಳ ಪೈಕಿ 37.79 ಕೋಟಿಯಷ್ಟನ್ನು ಪಾವತಿ ಮಾಡಲಾಗಿದೆ.

ಈ ಬ್ಯಾಂಕ್‌ನ ಕಾರ್ಯಚಟುವಟಿಕೆ  ಮುಂದುವರಿಯಲು ಅವಕಾಶ ಮಾಡಿಕೊಡುವುದು ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾದುದು ಎಂದು ಆರ್‌ಬಿಐ ಹೇಳಿದೆ.

ಇದನ್ನೂ ಓದಿ:-Karwar :ಶುಲ್ಕದ ನೆಪದಲ್ಲಿ ನಿರಾಶ್ರಿತ ಪರಿಹಾರದ ಹಣ ವಂಚಿಸಿದ ವಕೀಲೆ- ಕೋರ್ಟ ನಿಂದ ಬಡ್ಡಿ ಸಮೇತ ವೃದ್ಧನಿಗೆ ಹಣ ಹಿಂದಿರುಗಿಸುವಂತೆ ಕೋರ್ಟ ತೀರ್ಪು

ಇತ್ತೀಚಿನ ದಿನದಲ್ಲಿ ಉತ್ತರ ಕನ್ನಡ ಜಿಲ್ಲೆಯ 250 ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು ನಷ್ಟದಲ್ಲಿ ಇದ್ದು ಕಾರವಾರದಲ್ಲೇ ಕೆಲವು ಸಹಕಾರಿಬ್ಯಾಂಕ್ ಗಳು ಠೇವಣಿ ನೀಡಲಾಗದೇ ಮುಚ್ಚುವ ಹಂತದಲ್ಲಿದ್ದು ,ಕೆಲವು ಬ್ಯಾಂಕುಗಳು ಬ್ಯಾಂಕ್ (Bank) ಗ್ರಾಹಕರಿಗೆ ಹಣ ನೀಡದೇ ಹೇಮಾರಿಸಿದ್ದು 50 ಕೋಟಿಗೂ ಹೆಚ್ಚು ವಂಚನೆ ಮಾಡಿದ ವರದಿಯಾಗಿದ್ದು ಪ್ರಕರಣ ಇದೀಗ CID ಗೆ ವರ್ಗವಾಗಿದೆ.

Advertisement
Tags :
BankKarnatakaKarwarRBIurban bank karwarUttarakannadaಕಾರವಾರ
Advertisement
Next Article
Advertisement