For the best experience, open
https://m.kannadavani.news
on your mobile browser.
Advertisement

Karwar: ನಕಲಿ ದಾಖಲೆ ನೀಡಿ ನ್ಯಾಯಾಲಯಕ್ಕೆ ವಂಚನೆ- ಮಹಿಳೆಗೆ 14 ದಿನ ನ್ಯಾಯಾಂಗ ಬಂಧನ

ಕಾರವಾರ :ನಕಲಿ ದಾಖಲೆ ( fake certificate) ನೀಡಿ ನ್ಯಾಯಾಲಯಕ್ಕೆ(court) ವಂಚನೆ ಮಾಡುತ್ತಿರುವ ಜಾಲ ಪತ್ತೆಯಾಗಿದ್ದು, ಜಿಲ್ಲಾ ನ್ಯಾಯಾಲಯದ ದೂರಿನ ಮೇಲೆ ಮಹಿಳೆಯೊಬ್ಬಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
12:31 PM Jun 25, 2025 IST | ಶುಭಸಾಗರ್
ಕಾರವಾರ :ನಕಲಿ ದಾಖಲೆ ( fake certificate) ನೀಡಿ ನ್ಯಾಯಾಲಯಕ್ಕೆ(court) ವಂಚನೆ ಮಾಡುತ್ತಿರುವ ಜಾಲ ಪತ್ತೆಯಾಗಿದ್ದು, ಜಿಲ್ಲಾ ನ್ಯಾಯಾಲಯದ ದೂರಿನ ಮೇಲೆ ಮಹಿಳೆಯೊಬ್ಬಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
karwar  ನಕಲಿ ದಾಖಲೆ ನೀಡಿ ನ್ಯಾಯಾಲಯಕ್ಕೆ ವಂಚನೆ  ಮಹಿಳೆಗೆ 14 ದಿನ ನ್ಯಾಯಾಂಗ ಬಂಧನ
Karwar court Karnataka

Karwar: ನಕಲಿ ದಾಖಲೆ ನೀಡಿ ನ್ಯಾಯಾಲಯಕ್ಕೆ ವಂಚನೆ- ಮಹಿಳೆಗೆ 14 ದಿನ ನ್ಯಾಯಾಂಗ ಬಂಧನ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :ನಕಲಿ ದಾಖಲೆ ( fake certificate) ನೀಡಿ ನ್ಯಾಯಾಲಯಕ್ಕೆ(court) ವಂಚನೆ ಮಾಡುತ್ತಿರುವ ಜಾಲ ಪತ್ತೆಯಾಗಿದ್ದು, ಜಿಲ್ಲಾ ನ್ಯಾಯಾಲಯದ ದೂರಿನ ಮೇಲೆ ಮಹಿಳೆಯೊಬ್ಬಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ಕಡಬ ಮೂಲದ ಪಿ.ಸಿ.ಅಲೈಸ್ ಕುರಿಯನ್ ಚಾಕು ಬಂಧಿತ ಮಹಿಳೆ. ಆಕೆ ಶಿರಸಿ ಮಾದಕ ವಸ್ತು ಮಾರಾಟದ ಆರೋಪಿಯೊಬ್ಬನಿಗೆ ಜಾಮೀನು ನೀಡಲು ಬಂದಿದ್ದಳು.

ಇದನ್ನೂ ಓದಿ:-Uttara kannada: ನಾಲ್ಕು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

 ಆಕೆಯ ಜಾಮೀನಿಗಾಗಿ ನೀಡಿದ ದಾಖಲೆಗಳ ಬಗ್ಗೆ ಅನುಮಾನ ಬಂದು ಶ್ಯೂರಿಟಿ ಮ್ಯಾನೇಜ್‌ಮೆಂಟ್ ಎಂಬ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಆಕೆ ಬೇರೆ, ಬೇರೆ ಆಧಾರ ಸಂಖ್ಯೆ ಹಾಗೂ ಆರ್‌ಟಿಸಿ ಮತ್ತಿತರ ನಕಲಿ ದಾಖಲೆ ನೀಡಿ 8 ಕಡೆ ಜಾಮೀನು ನೀಡಿದ ವಿಚಾರ ಬೆಳಕಿಗೆ ಬಂದಿದೆ.

ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರ ಸೂಚನೆಯ ಮೇರೆಗೆ ನ್ಯಾಯಾಲಯದ ಮುಖ್ಯ ಆಡಳಿತ ಅಧಿಕಾರಿ ರವೀಂದ್ರ ಆರ್.ನಾಯ್ಕ ಅವರು ದೂರು ನೀಡಿದ್ದರು.ಕಾರವಾರ ಶಹರ ಠಾಣೆ ಪೊಲೀಸರು ಆಕೆಯನ್ನು ಬಂಧಿಸಿದ್ದು, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:-Karwar :ಕಾರವಾರದಲ್ಲಿ ಅಬ್ಬರಿಸಿದ ಸಮುದ್ರ – ಮೀನುಗಾರಿಕಾ ಬೋಟುಗಳಿಗೆ ಹಾನಿ

ಇದೇ ರೀತಿ ನಕಲಿ ದಾಖಲೆ ನೀಡುತ್ತಿರುವ ಮತ್ತಿಬ್ಬರ ವಿವರ ಪತ್ತೆಯಾಗಿದ್ದು, ಅವರಿಬ್ಬರು ಪರಾರಿಯಾಗಿದ್ದಾರೆ. ಅವರ ವಿರುದ್ಧವೂ ಶೀಘ್ರ ಎಫ್‌ಐಆರ್ ದಾಖಲಾಗಲಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ