Mundgod| ಪೋಷಕರ ನಿರ್ಲಕ್ಷ ತೊಟ್ಟಿಗೆ ಬಿದ್ದ ಮಗು ಸಾ***
Mundgod| ಪೋಷಕರ ನಿರ್ಲಕ್ಷ ತೊಟ್ಟಿಗೆ ಬಿದ್ದ ಮಗು ಸಾ***
ಕಾರವಾರ:- ಮನೆಯ ಮುಂದೆ ಆಟವಾಡುತಿದ್ದ ಮಗು ನೀರಿನ ತೊಟ್ಟಿಗೆ ಆಯಾ ತಪ್ಪಿ ಬಿದ್ದು ಮಗು ಸಾ** ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ (mundgod) ತಾಲೂಕಿನ ಗುಂಜಾವತಿ ಗ್ರಾಮದಲ್ಲಿ ನಡೆದಿದೆ.
ವಿನಯ ಕುಂಬಾರ(2), ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟ ಮಗುವಾಗಿದೆ.
ಗುರುವಾರ ಗುಂಜಾವತಿ ಗ್ರಾಮದ ಕುಂಬಾರ್ ರವರ ಮನೆಯಲ್ಲಿ ಮಗು ( child) ಆಟವಾಡುತ್ತಾ ಮನೆಯ ಮುಂದಿನ ನೀರಿನ ತೊಟ್ಟಿಗೆ ಆಯತಪ್ಪಿ ಬಿದ್ದಿದೆ. ಆದರೇ ಇದನ್ನು ಮೊದಲು ಯಾರೂ ಗಮನಿಸಿರಲಿಲ್ಲ. ನಂತರ ಮಗುವು ತೊಟ್ಟಿಯಲ್ಲಿ ಒದ್ದಾಡಿ ಉಸಿರು ಗಟ್ಟಿ ಮೃತಪಟ್ಟಿದೆ.
ಇದನ್ನೂ ಓದಿ:-Mundgodu: ಕಚೇರಿಯಲ್ಲೇ ಹೊಡೆದಾಡಿಕೊಂಡ ಉಪತಹಶಿಲ್ದಾರ್ ,ಕಂದಾಯ ಅಧಿಕಾರಿ
ಇನ್ನು ತಾಲೂಕು ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ರೂ ಮೊದಲೇ ಮೃತಪಟ್ಟಿದ್ದರಿಂದ ಚಿಕಿತ್ಸೆ ಸಹ ನೀಡಲು ವೈದ್ಯರು ವಿಫಲವಾದರು.
ಪೋಷಕರ ನಿರ್ಲಕ್ಷ ಬಾಳಿ ಬೆಳಕಾಗಬೇಕಿದ್ದ ಮಗುವೊಂದು ತೊಟ್ಟಿಯಲ್ಲಿ ಬದುಕು ಅಂತ್ಯವಾಗಿಸಿಕೊಂಡಿದೆ.ಘಟನೆ ಸಂಬಂಧ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.