For the best experience, open
https://m.kannadavani.news
on your mobile browser.
Advertisement

Om Prakash Murder Case: ಪಲ್ಲವಿ ಆಸ್ತಿ ಹುಚ್ಚು! ಓಂ ಪ್ರಕಾಶ್ ಜೀವ ತೆಗಿಯಿತೇ ಕಾಳಿ ನದಿ ತೀರದ ಕೋಟಿ ಮೌಲ್ಯದ ಆಸ್ತಿ?

ಕಾರವಾರ :-ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ (Om Prakash)ಹತ್ಯೆ ಪತ್ನಿಯೇ ಮಾಡಿರುವುದು ಎಂಬುದು ಗೊತ್ತಾಗಿದೆ. ಆದರೇ ಈ ಹತ್ಯೆ ಏನಕ್ಕೆ ಮಾಡಲಾಯ್ತು ಎಂದು ಹುಡುಕಿದಾಗ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕಾಳಿ ನದಿ ತೀರ ಪ್ರದೇಶದ ಆಸ್ತಿಯ ಸುತ್ತಾ ಹರಿದಾಡುತ್ತಿದೆ.
11:18 PM Apr 21, 2025 IST | ಶುಭಸಾಗರ್
om prakash murder case  ಪಲ್ಲವಿ ಆಸ್ತಿ ಹುಚ್ಚು  ಓಂ ಪ್ರಕಾಶ್ ಜೀವ ತೆಗಿಯಿತೇ ಕಾಳಿ ನದಿ ತೀರದ ಕೋಟಿ ಮೌಲ್ಯದ ಆಸ್ತಿ

Om Prakash Murder Case: ಪಲ್ಲವಿ ಆಸ್ತಿ ಹುಚ್ಚು! ಓಂ ಪ್ರಕಾಶ್ ಜೀವ ತೆಗಿಯಿತೇ ಕಾಳಿ ನದಿ ತೀರದ ಕೋಟಿ ಮೌಲ್ಯದ ಆಸ್ತಿ?

Advertisement

ಕಾರವಾರ :-ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ (Om Prakash)ಹತ್ಯೆ ಪತ್ನಿಯೇ ಮಾಡಿರುವುದು ಎಂಬುದು ಗೊತ್ತಾಗಿದೆ. ಆದರೇ ಈ ಹತ್ಯೆ ಏನಕ್ಕೆ ಮಾಡಲಾಯ್ತು ಎಂದು ಹುಡುಕಿದಾಗ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕಾಳಿ ನದಿ ತೀರ ಪ್ರದೇಶದ ಆಸ್ತಿಯ ಸುತ್ತಾ ಹರಿದಾಡುತ್ತಿದೆ.

 ಓಂ ಪ್ರಕಾಶ್ ಹತ್ಯೆ ಹಲವು ಅನುಮಾನಗಳಿಗೆ ಹುಟ್ಟುಹಾಕಿದೆ. ಆಸ್ತಿ ವಿಚಾರಕ್ಕೆ ಪತ್ನಿ ಪಲ್ಲವಿ ಬರ್ಬರವಾಗಿ ಹತ್ಯೆಗೈದ್ರಾ ಪ್ರಶ್ನೆ ಮೂಡಿದೆ.ಅಲ್ಲದೇ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದ ಓಂ ಪ್ರಕಾಶ್, ಪತ್ನಿಯ ಚಿಕಿತ್ಸೆಗಾಗಿ 50 ಲಕ್ಷ ರೂಪಾಯಿವರೆಗೆ ವೆಚ್ಚ ಮಾಡಿದ್ದರಂತೆ.

ಇದನ್ನೂ ಓದಿ:-Joida news: ಈಜು ಕೊಳಕ್ಕೆ ಬಿದ್ದು ಮಗು ಸಾ**

ಓಂ ಪ್ರಕಾಶ್ 1996ರಲ್ಲಿ ಉತ್ತರ ಕನ್ನಡ ಎಸ್‌ಪಿ ಆಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಓಂ ಪ್ರಕಾಶ್ ಸಹೋದರಿ ಸರೀತಾ ಜೋಯಿಡಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತಿದ್ದರು. ಇಲ್ಲಿನ ಪರಿಸರಕ್ಕೆ ಮನಸೋತಿದ್ದ ಓಂ ಪ್ರಕಾಶ್, ಸಾಮಜೋಯಿಡಾದಲ್ಲಿ 2ಎಕರೆ 17 ಗುಂಟೆ ಜಮೀನು ಖರೀದಿಸಿದ್ದರು. ಇದರ ಜೊತೆಗೆ ಜೋಯಿಡಾ ತಾಲೂಕಿನ ಗಣೇಶ ಗುಡಿಯ ಬಾಡಗುಂದ ಗ್ರಾಮದಲ್ಲಿ 17 ಎಕರೆ ಜಮೀನು ಖರೀದಿ ಮಾಡಿದ್ದರು.

ಇದನ್ನೂ ಓದಿ:-Bhatkal ಒಂದು ಕೋಟಿಗೂ ಹೆಚ್ಚು ಮೌಲ್ಯದ ವಜ್ರ ಸಾಗಾಟ-ವ್ಯಕ್ತಿ ಬಂಧನ

ಈ ಎರಡು ಜಮೀನುಗಳಲ್ಲಿ ಸಾಮಜೋಯಿಡಾ ದಲ್ಲಿನ ಜಮೀನಿ ಹಾಗೂ ಬಾಡಗುಂದದ 7 ಎಕರೆ ಜಮೀನನ್ನು  ಮಗ ಕಾರ್ತಿಕೇಶ ಹೆಸರಲ್ಲಿ ನೊಂದಣಿ ಮಾಡಿಸಲಾಗಿತ್ತು.

ಉಳಿದ ಹತ್ತು ಎಕರೆ ಜಮೀನನ್ನು ಮೂರನೇ ವ್ಯಕ್ತಿ ಹೆಸರಲ್ಲಿ ನೊಂದಣಿ ಮಾಡಲಾಗಿತ್ತು.ಇನ್ನು ದಾಂಡೇಲಿಯ ಎರಡು ಎಕರೆ ಜಮೀನನ್ನು ಸಹೋದರಿಯ ಹೆಸರಿಗೆ ಮಾಡಿದ್ದಾರೆ.

ಸಾಮಜೋಯಿಡಾದಲ್ಲಿ ಗಂಧ,ಸಾಗುವಾನಿ ಸೇರಿದಂತೆ ವಾಣಿಜ್ಯ ಬೆಳೆ ಬೆಳೆದಿದ್ದು, ಗೆಸ್ಟ್‌ಹೌಸ್ ನಿರ್ಮಿಸಿದ್ದರು. ಬಾಡಗುಂದ ಗ್ರಾಮದಲ್ಲಿರುವ ಏಳು ಎಕರೆ ಜಮೀನನ್ನು ರಿವರ್ ರ‍್ಯಾಪ್ಟಿಂಗ್ ಮಾಡಲು ಲೀಸ್‌ಗೆ ನೀಡಿದ್ದರು. ಉಳಿದ ಹತ್ತು ಎಕರೆ ಜಮೀನನ್ನು ಬೇನಾಮಿ ಇಟ್ಟಿದ್ದು, ಈ ಜಮೀನನ್ನು ತನ್ನ ಸಹೋದರಿಯ ಹೆಸರಿಗೆ ಮಾಡಲು ನಿರ್ಧಾರ ಮಾಡಿದ್ದರಂತೆ .

Former DG-IGP Om Prakash murder case

ಈ ಬಗ್ಗೆ ಪತ್ನಿ ಹಾಗೂ ಮಗಳಿಗೆ ವಿರೋಧವಿತ್ತು. ಅಣ್ಣನಿಗೆ ಎಲ್ಲಾ ಜಮೀನು ನೀಡಿದ್ರಿ ನಮಗೆ ಏನು ಎಂಬ ಪ್ರಶ್ನೆ ಮಾಡುತಿದ್ದ ಇವರು ಜಮೀನ ವಿಷಯಕ್ಕೆ ಪತ್ನಿ ಹಾಗೂ ಮಗಳು ಓಂ ಪ್ರಕಾಶ್ ಜೊತೆ ಜಗಳ ಮಾಡ್ತಿದ್ರು ಎನ್ನಲಾಗಿದೆ. ಇದೇ ಕಾರಣಕ್ಕೆ ಓಂ ಪ್ರಕಾಶ್ ಕೊಲೆಯಾಯ್ತಾ ಅನ್ನೋ ಅನುಮಾನ ಮೂಡಿದೆ.

ಇನ್ನು ಜೋಯಿಡಾದಲ್ಲಿ ತಮ್ಮ ಕುಟುಂಬ ಹಾಗೂ ಆಪ್ತರ ಹೆಸರಿನಲ್ಲಿ ಜಮೀನು ಮಾಡಿದ್ದಾರೆ ಎನ್ನಲಾಗಿದೆ.ಆದ್ರೆ ಈ ಬಗ್ಗೆ ಹೆಚ್ಚು ಮಾಹಿತಿ ಹೊರಬರಬೇಕಿದೆ.

ಜೋಯಿಡಾ ದಲ್ಲಿ ಇರುವ ಓಂ ಪ್ರಕಾಶ್ ರವರ ಜಮೀನು

ಪತ್ನಿಯ ಕಿರಿಕ್ ಕಾರವಾರದಲ್ಲಿ ಪೊಲೀಸ್ ಸಿಬ್ಬಂದಿಗೆ ಕಪಾಲಿಗೆ ಬಾರಿಸಿದ್ದ ಪಲ್ಲವಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಓಂ ಪ್ರಕಾಶ್ ರವ ಜನುಮ ದಿನದಂದು ಕಾರವಾರ ಮೂಲದ ಪೊಲೀಸ್ ಅಧಿಕಾರಿ ತಮ್ಮ ಸಿಬ್ಬಂದಿ ಜೊತೆ ಕೇಕ್ ತೆಗೆದುಕೊಂಡು ಅವರ ನಿವಾಸಕ್ಕೆ ವಿಷ್ ಮಾಡಲು ತೆರಳಿದ್ದರಂತೆ . ಈ ಸಂದರ್ಭದಲ್ಲಿ ಅವರ ಪತ್ನಿ ಪೊಲೀಸ್ ಅಧಿಕಾರಿ ಬಳಿ ಕೆಟ್ಟದಾಗಿ ವರ್ತಿಸಿದ್ದು ಸಿಬ್ಬಂದಿ ಕೈಯಲ್ಲಿ ಇದ್ದ ಕೇಕ್ ಎಸೆದು ಪೊಲೀಸ್ ಸಿಬ್ಬಂದಿಗೆ ಕಪಾಲ ಮೋಕ್ಷ ಮಾಡಿದ್ದರಂತೆ. ನಂತರ ಈ ವಿಷಯ ಓಂ ಪ್ರಕಾಶ್ ಗೆ ತಿಳಿದು ಆ ಅಧಿಕಾರಿ ಹಾಗೂ ಸಿಬ್ಬಂದಿ ಬಳಿ ಕ್ಷಮೆ ಕೇಳಿದ್ದರಂತೆ. ಈ ಕುರಿತು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹಳೆಯ ನೆನಪನ್ನು ಮಾಡಿಕೊಂಡರು.

ಕೋಟಿ ಕೋಟಿ ಆಸ್ತಿ ಮಾಡಿದ ಓಂ ಪ್ರಕಾಶ್.

DG@IGP Om Prakash land

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ ಬೆಂಗಳೂರಿನ ಹಲವೆಡೆ ಓಂ ಪ್ರಕಾಶ್ ಆಸ್ತಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಓಂ ಪ್ರಕಾಶ್‌ರಿಗೆ ಸೇರಿದ 2 ಮನೆ ಇದೆ,ಕಾವೇರಿ ಜಂಕ್ಷನ್‌ನ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ  ಒಂದು ಫ್ಲಾಟ್ ಇದೆ,ಹೆಚ್‌ಎಸ್‌ಆರ್ ಲೇಔಟ್‌ನ ಐಪಿಎಸ್ ಕ್ವಾಟ್ರಸ್‌ನಲ್ಲಿ ಮನೆ ಇದೆ. ಹೀಗಾಗಿ ಈ ಆಸ್ತಿ ಕಲಹವೇ ಪತ್ನಿ ರೂಪದಲ್ಲಿ ಯಮನಾಗಿ ಬಂದು ಜೀವ ಬಲಿ ಪಡೆದಂತಾಗಿದ್ದು, ಪೊಲೀಸರ ತನಿಖೆಯಿಂದ ಕಾರಣ ಏನು ಎಂಬುವ ಸತ್ಯ ಹೊರಬರಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ