ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Rain news: ತುಂಬಿದ ,ಕಾಳಿ, ಶರಾವತಿ-ನಾಲ್ಕು ಗ್ರಾಮದ ರಸ್ತೆ ಜಲಾವೃತ 

ಕಾರವಾರ  :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ (rain)ಸುರಿದ ಪರಿಣಾಮ ಜೋಯಿಡಾ(joida) ತಾಲೂಕಿನ ಕಾಳಿ ನದಿ ಗೆ ಕಟ್ಟಲಾದ ಸೂಫ ಜಲಾಶಯವು ಶೇ.85 ರಷ್ಟು ಭರ್ತಿಯಾಗಿದ್ದು ಜಲಾಶಯದ ಹಿನ್ನಿರಿನ ಬಜಾರಕೊಣಂಗ, ಕರಂಜೆ ಹಾಗೂ ಧೂಮದಾಳ ಗ್ರಾಮಗಳ  ರಸ್ತೆ ಜಲಾವೃತವಾಗಿದ್ದು ಗ್ರಾಮಸ್ಥರಿಗೆ ಪ್ರತಿ ದಿನ ಓಡಾಡಲು ಕೆಪಿಸಿಎಲ್ ದೋಣಿ ವ್ಯವಸ್ತೆ ಕಲ್ಪಿಸಿದೆ.
08:51 PM Sep 03, 2025 IST | ಶುಭಸಾಗರ್

ಮಳೆಯಿಂದ ರಸ್ತೆ ಮುಳುಗಡೆಯಾಗಿ ದೋಣಿ ಯನ್ನು ವ್ಯವಸ್ಥೆ ಮಾಡುತ್ತಿರುವುದು. (Kannadavani.news photo)

ರಾಜ್ಯದ ಅತಿ ಎತ್ತರವಾದ ಸೂಫಾ ಜಲಾಶಯದ (supa dam) ಗೇಟ್ ಇನ್ನೂ ತೆರೆದಿಲ್ಲ.ಇಲ್ಲಿನ 147 ಟಿ.ಎಮ್.ಸಿ ನೀರಿನ ಪೈಕಿ ಇದುವರೆಗೂ 128 ಟಿ.ಎಮ್.ಸಿ ನೀರು ಮಾತ್ರ ಭರ್ತಿ ಆಗಿದೆ.ಗರಿಷ್ಟ ಮಟ್ಟ ತಲಪುವ ವರೆಗೂ ಜಲಾಶಯದಿಂದ ನೀರು ಬಿಡದಿರಲು ಕೆಪಿಸಿಎಲ್ ತೀರ್ಮಾನಿಸಿದೆ. ಸದ್ಯ ಮಳೆ ಕಡಿಮೆಯಾಗಿದ್ದು ಒಂದುವೇಳೆ ಗರಿಷ್ಟ ಮಟ್ಟ ತಲುಪದೆ ಇದ್ದಲ್ಲಿ  ಹಂತ ಹಂತವಾಗಿ ವರ್ಷ ಪೂರ್ತಿ ವಿದ್ಯುತ್ ಉತ್ಪಾದನೆಗೆ ನೀರು ಉಪಯೋಗಿಸಿ ಬಿಡಲಾಗುತ್ತದೆ. ಇನ್ನು ಮೂರು ದಿನ ಮಳೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಹೆಚ್ಚಿನ ನೀರು ಜಲಾಶಯಕ್ಕೆ ಹರಿದುಬರುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ ಸೂಪಾ ಜಲಾನಯನ ಪ್ರದೇಶದಲ್ಲಿ ಎಚ್ಚರದಿಂದ ಇರಲು ಕೆಪಿಸಿಎಲ್ ಮನವಿ ಮಾಡಿದೆ.

Advertisement

ಗೇರುಸೊಪ್ಪ ಡ್ಯಾಮ್ ನಿಂದ ನೀರು ಬಿಡುಗಡೆ.

Kannadavani photo- ಗೇರುಸೊಪ್ಪ ಡ್ಯಾಮ್ ನಿಂದ ನೀರು ಬಿಟ್ಟಿರುವುದು.

ಇನ್ನು ಶರಾವತಿ ನದಿ (sharavathi river)ಸಹ ಮಳೆಯದಾಗಿ ಪ್ರವಾಹದ ಮಟ್ಟ ಮೀರಿ ಹರಿಯುತಿದ್ದು ಇಂದು ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದಿಂದ ಐದು ಗೇಟುಗಳನ್ನು ತೆರೆದು  20 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಹೀಗಾಗಿ ಹೊನ್ನಾವರ ನದಿ ಪಾತ್ರದ ಜನರಿಗೆ ಅಲರ್ಟ ನೀಡಲಾಗಿದ್ದು ,ತಗ್ಗು ಪ್ರದೇಶದ ಜನರಿಗೆ ಬೇರೆಡೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.

Advertisement
Tags :
Gerusoppa dam water releaseKali river floodKarnataka Heavy RainKarwar rainKarwar weather updateRain newsSharavathi river newsSupa dam water levelUttara Kannada FloodUttara Kannada news
Advertisement
Next Article
Advertisement