Karwar : ಸುಳ್ಳೇ ಸುಳ್ಳು ಭೀಮಣ್ಣ ನಾಯ್ಕ ಫುಲ್ ಗರಂ ! ಏನಿದು ಸುಳ್ಳು?
Karwar : ಸುಳ್ಳೇ ಸುಳ್ಳು ಭೀಮಣ್ಣ ನಾಯ್ಕ ಫುಲ್ ಗರಂ ! ಏನಿದು ಸುಳ್ಳು?
ಕಾರವಾರ :- ಉತ್ತರ ಕನ್ನಡ (uttara Kannada) ಜಿಲ್ಲೆಯ ಕಾರವಾರದ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಇಂದು ಕೆ.ಡಿಪಿ ಸಭೆ ನಡೆಯಿತು. ವಿಶೇಷವಾಗಿ ಎರಡು ವರ್ಷದ ನಂತರ ಆರ್.ವಿ ದೇಶಪಾಂಡೆ ಭಾಗಿಯಾದರೇ ಕಾರವಾರದ ಶಾಸಕ ಸತೀಶ್ ಸೈಲ್ , ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳಿಂದ ಜನಪ್ರತಿನಿಧಿಗಳು ಮಾಹಿತಿ ಪಡೆದರು.
ಇದನ್ನೂ ಓದಿ:-Sirsi: ಒಂದು ವಾರದ ನಂತರ ಗಂಗಾವಳಿ ನದಿಯಲ್ಲಿ ಪತ್ತೆಯಾಯ್ತು ಪವನ್ ಶ**
ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಸಾಗರ ಮಾಲಾ ಯೋಜನೆಯ ಕುಮಟಾ- ಶಿರಸಿ-ಹಾವೇರಿ ರಸ್ತೆ ಕಾಮಗಾರಿ ಕುರಿತು ಶಿರಸಿ ಶಾಸಕ ಭೀಮಣ್ಣ ನಾಯ್ಕ ರವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ನಿಗದಿ ಸಮಯದಲ್ಲಿ ಕಾಮಗಾರಿ ಮುಗಿಸದೇ ನಿರ್ಲಕ್ಷ ಮಾಡಿರುವ ಬಗ್ಗೆ ಹೆದ್ದಾರಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಕುಮಟಾ ದಿಂದ ಹಾವೇರಿ ವರೆಗೆ ಸಾಗರಮಾಲಾ ಯೋಜನೆಯಡಿ ರಸ್ತೆ ಅಗಲೀಕರಣ ನಡೆಯುತ್ತಿದೆ. ಕುಮಟಾ ದಿಂದ ಶಿರಸಿ ವರೆಗೆ ರಸ್ತೆಯನ್ನು ಜೂನ್ ಒಳಗೆ ಮುಗಿಸಿಕೊಡುವುದಾಗಿ ಹೇಳಲಾಗಿತ್ತು. ಇದಕ್ಕಾಗಿ ನಾಲ್ಕು ತಿಂಗಳು ರಸ್ತೆ ಬಂದ್ ಮಾಡಿ ಜನರಿಗೆ ತೊಂದರೆಯಾಯಿತು. ಈವರೆಗೂ ಕಾಮಗಾರಿ ಮುಗಿದಿಲ್ಲ , ಇನ್ನು ಶಿರಸಿಯಿಂದ ಹಾವೇರಿ ವರೆಗೆ ರಸ್ತೆ ಕಾಮಗಾರಿ ನಾಲ್ಕು ಕಿಲೋಮೀಟರ್ ವರೆಗೂ ಮಾಡಿಲ್ಲ, ಇರುವ ಹೊಂಡ ಮುಚ್ಚಿಸಿ ಎಂದು ಸಭೆ ನಡೆಸಿ ಹೇಳಿದರೇ ನಾಳೆಯೇ ಮುಚ್ಚಿಸುವುದಾಗಿ ಸುಳ್ಳುಹೇಳಿ ತಪ್ಪಿಸಿಕೊಳ್ಳುತಿದ್ದೀರಾ , ಎಲ್ಲವನ್ನೂ ಸುಳ್ಳುಹೇಳಿ ಜಾರಿಕೊಂಡರೇ ಸುಮ್ಮನಿರುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ತರಾಟೆ ತೆಗೆದುಕೊಂಡರು. ಎಷ್ಟು ಮಾಡಿಸಿದ್ದೀರಿ ವಿವರ ಕೊಡುವಂತೆ ಅಧಿಕಾರಿ ಕರೆಸಿ ತಕ್ಷಣದಲ್ಲಿ ಮಾಡಲು ಸಾಧ್ಯವಾಗದಿದ್ದರೇ ಅಂತಹ ಕಂಪನಿಯನ್ನ ಬ್ಲಾಕ್ ಲೀಸ್ಟ್ ಗೆ ಹಾಕುವಂತೆ ತಾಕೀತು ಮಾಡಿದರು. ಶಿರಸಿ -ಕುಮಟಾ ರಸ್ತೆ ಕಳೆದ ಐದು ವರ್ಷದಿಂದ ಕಾಮಗಾರಿ ನಡೆಯುತ್ತಲೇ ಇದೆ, ಶಿರಸಿ ಹಾವೇರಿ ರಸ್ತೆ ಎರಡು ವರ್ಷಗಳು ಕಳೆಯಿತು ಕನಿಷ್ಟ ನಾಲ್ಕು ಕಿಲೋ ಮೀಟರ್ ಸಹ ಮಾಡಲಿಲ್ಲ ಎಂದರು.
ಇದನ್ನೂ ಓದಿ:-Sirsi :ದೇವಿಮನೆ ಘಟ್ಟದಲ್ಲಿ ಮತ್ತೆ ಕುಸಿದ ಗುಡ್ಡ!
ಇನ್ನು ಈ ಕುರಿತು ಮಾತನಾಡಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಶಿರಸಿ- ಕುಮಟಾ ಹೆದ್ದಾರಿಯಲ್ಲಿ 44 KM ಕಾಮಗಾರಿ ಮುಗಿದಿದೆ 10KM ಮಾತ್ರ ಬಾಕಿ ಇದೆ. ಡಿಸೆಂಬರ್ ನಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಹೇಳಿದರು. ಇನ್ನು ಶಿರಸಿಯಿಂದ ಹಾವೇರಿ ವರೆಗೆ ಹೋಗುವ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಯನ್ನು ತಕ್ಷಣ ಮುಚ್ಚಿಸುವುದಾಗಿ ಹೇಳಿದರು.
ಆದರೂ ಪ್ರಾಧಿಕಾರದ ಅಧಿಕಾರಿ ಮಾತಿಗೆ ಸಮಾಧಾನ ಪಡದ ಭೀಮಣ್ಣ ನಾಯ್ಕ ನಿಮ್ಮ ಸುಳ್ಳುಗಳನ್ನು ನಂಬುವುದಿಲ್ಲ ,ಶೀಘ್ರ ಮಾಡದಿದ್ದರೆ ಸುಮ್ಮನೆ ಕೂರುವುದಿಲ್ಲ ಎಂದು ಅಧಿಕಾರಿ ವಿರುದ್ಧ ಗರಂ ಆದರು.