ಪ್ರೀತಿ ಪ್ರೇಮದ ನಾಟಕವಾಡಿ ಗರ್ಭಿಣಿಯಾದ ಯುವತಿಯನ್ನು ವಂಚಿಸಿ ಬೇರೊಬ್ಬಳನ್ನು ವಿವಾಹವಾದ ಭಟ್ಕಳದ ಯುವಕನ ವಿರುದ್ಧ ಸಂತ್ರಸ್ತೆ ದೂರು.
ಪ್ರೀತಿ ಪ್ರೇಮದ ನಾಟಕವಾಡಿ ಗರ್ಭಿಣಿಯಾದ ಯುವತಿಯನ್ನು ವಂಚಿಸಿ ಬೇರೊಬ್ಬಳನ್ನು ವಿವಾಹವಾದ ಭಟ್ಕಳದ ಯುವಕನ ವಿರುದ್ಧ ಸಂತ್ರಸ್ತೆ ದೂರು.
ಕಾರವಾರ :- ಪ್ರೀತಿಸುವ ನಾಟಕವಾಡಿ ಯುವತಿಯನ್ನು ನಂಬಿಸಿ ದೈಹಿಕವಾಗಿ ಬಳಸಿಕೊಂಡು ಮದುವೆಯಾಗುವುದಾಗಿ ಹೇಳಿ ಯುವತಿಗೆ ಗರ್ಭಪಾತ ಮಾಡಿಸಿ ಬೇರೊಂದು ಯುವತಿಯನ್ನು ಮದುವೆಯಾಗಿ ವಂಚಿಸಿದ ಘಟನೆ ಭಟ್ಕಳದಲ್ಲಿ (bhatkal) ಬೆಳಕಿಗೆ ಬಂದಿದ್ದು ನೊಂದ ಯುವತಿ ವಂಚಿಸಿದ ಯುವಕನ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಭಟ್ಕಳ ತಾಲೂಕಿನ ಮಾರುಕೇರಿ ನಿವಾಸಿ ಗಣೇಶ ಕೃಷ್ಣ ಗೊಂಡ ಎಂಬಾತನೇ ಪ್ರೀತಿಯ ಹೆಸರಿನಲ್ಲಿ ವಂಚಿಸಿದ ಯುವಕನಾಗಿದ್ದು ,ಭಟ್ಕಳ ತಾಲೂಕಿನ ನೂಝನ ಗ್ರಾಮದ ಯುವತಿ ವಂಚನೆಗೊಳಗಾದವಳಾಗಿದ್ದಾಳೆ.
ಎರಡು ವರ್ಷದ ಹಿಂದೆ ಗಣೇಶ್ ಕೃಷ್ಣ ಗೊಂಡ ಎಂಬಾತನ ಪರಿಚಯ ಪ್ರೀತಿಗೆ ತಿರುಗಿ ಎಲ್ಲೆಡೆ ಸುತ್ತಾಡಿದ್ದಾರೆ.
ದೇವಾಲಯಕ್ಕೆ ಹೋಗೋಣ ಎಂದು ಆಕೆಯನ್ನು ಮಾರುಕೇರಿಯ ಹೋಮ್‌ಸ್ಟೇಗೆ ಕರೆದೊಯ್ದು ದೈಹಿಕ ಸಂಪರ್ಕ ಮಾಡಿದ್ದು ನಂತರ ಯುವತಿ ಗರ್ಭಿಣಿಯಾಗಿದ್ದಾಳೆ. ನಂತರ ಮದುವೆಯಾಗುವುದಾಗಿ ಹೇಳಿ ಆಕೆಯನ್ನು ಭಟ್ಕಳದ ಖಾಸಗಿ ನರ್ಸಿಂಗ್ ಹೋಮ್ ಗೆ ಕರೆದೊಯ್ದು ಗರ್ಭಪಾತ ಮಾಡಿಸಿ ಕೈಕೊಟ್ಟಿದ್ದಾನೆ.
ತನಗೆ ಅನ್ಯಾಯವಾದ ಕುರಿತು ಯುವತಿ ಮೊದಲು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು ಸಂಧಾನದ ಮಾತುಕತೆಯಲ್ಲಿ ಯುವತಿಯನ್ನು ಮದುವೆಯಾಗುವುದಾಗಿ ಹೇಳಿದ್ದನು. ಆದರೇ ನಂತರ ಬೇರೊಂದು ಯುವತಿಯನ್ನು ಮದುವೆಯಾಗಿ ನೊಂದ ಯುವತಿಗೆ ಕೈಕೊಟ್ಟಿದ್ದಾನೆ.
ತಾನು ಮೋಸ ಹೋದುದನ್ನು ಅರಿತ ಯುವತಿ ಇದೀಗ ಭಟ್ಕಳ ಠಾಣೆಯಲ್ಲಿ ಸಂಧಾನ ಮಾಡಿದರು ಹಾಗೂ ವಂಚಿಸಿದ ಭಟ್ಕಳದ ಕೃಷ್ಣ ಗೊಂಡನ ವಿರುದ್ಧ ದೂರು ದಾಖಲಿಸಿದ್ದಾಳೆ.