Uttara kannada: ಉತ್ತರ ಕನ್ನಡ ಜಿಲ್ಲೆಯ 53 ದ್ವೀಪಗಳಲ್ಲಿ ಭದ್ರತೆ ಹೆಚ್ಚಳಕ್ಕೆ ಸಿಸಿ ಕ್ಯಾಮರ ಅಳವಡಿಕೆ- ಎಸ್.ಪಿ ಮಿಥುನ್ ಹೆಚ್.ಎನ್
Uttara kannada: ಉತ್ತರ ಕನ್ನಡ ಜಿಲ್ಲೆಯ 53 ದ್ವೀಪಗಳಲ್ಲಿ ಭದ್ರತೆ ಹೆಚ್ಚಳಕ್ಕೆ ಸಿಸಿ ಕ್ಯಾಮರ ಅಳವಡಿಕೆ- ಎಸ್.ಪಿ ಮಿಥುನ್ ಹೆಚ್.ಎನ್
ಕಾರವಾರ:- ಒಂದೆಡೆ ಪೆಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ , ಮತ್ತೊಂದೆಡೆ ಕರ್ನಾಟಕದ ಬೆಂಗಳೂರು,ಮಂಗಳೂರು (mangalur)ಸೇರಿದಂತೆ ಹಲವು ಕಡೆ ಉಗ್ರರು ಟಾರ್ಗೆಟ್ ಮಾಡಿರುವುದು ಎನ್.ಐ.ಎ ಯಿಂದ ಹೊರಬಂದ ಬೆನ್ನಲ್ಲೇ ಇದೀಗ ಕರಾವಳಿಯಲ್ಲಿ ಭದ್ರತೆ ಮತ್ತಷ್ಟು ಹೆಚ್ಚಿಸಲು ಕೋಸ್ಟಲ್ ಸೆಕ್ಯೂರಿಟಿ ಪೊಲೀಸರು ಕಾರವಾರದಲ್ಲಿ (karwar) ಭದ್ರತಾ ಸಭೆಯನ್ನು ಕೈಗೊಂಡರು.
ಉತ್ತರ ಕನ್ನಡ ಜಿಲ್ಲೆ ರಾಜ್ಯದ ಅತೀ ಸೂಕ್ಷ್ಮ ವಲಯದಲ್ಲಿ ಒಂದಾಗಿದೆ. ಕಾರವಾರದಲ್ಲಿ ದೇಶದ ಪ್ರತಿಷ್ಟಿತ ಕದಂಬ ನೌಕಾನೆಲೆ, ಕೈಗಾ ಅಣು ಸ್ಥಾವರ, ವಿಶ್ವ ಪ್ರಸಿದ್ಧ ಮುರುಡೇಶ್ವರ ,ಗೋಕರ್ಣದಂತ ಪ್ರವಾಸಿ ಸ್ಥಳಗಳನ್ನ ಸಹ ಹೊಂದಿದೆ. ಹೀಗಾಗಿ ಈ ಭಾಗಗಳು ಅತೀ ಸೂಕ್ಷವಾಗಿದ್ದು ,ಈ ಹಿಂದೆ ಎನ್.ಐ.ಎ ತಂಡ ಈ ಭಾಗದಲ್ಲಿ ಶಂಕಿತ ಉಗ್ರರನ್ನು ಸಹ ಬಂಧಿಸಿತ್ತು. ಇನ್ನು ನೌಕಾನೆಲೆ ಇರುವುದರಿಂದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲ ಗೊಳಿಸಿತ್ತು.
ಆದ್ರೆ ಇದೀಗ ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಕರಾವಳಿ ಭಾಗದಲ್ಲಿನ ಕರಾವಳಿ ತೀರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಹೆಚ್.ಎನ್ ರವರು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ನೇತ್ರತ್ವದಲ್ಲಿ ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್, ನೌಕಾದಳ, ಪ್ರವಾಸೋಧ್ಯಮ ಇಲಾಖೆ,ಬಂದರು ಇಲಾಖೆಗಳೊಂದಿಗೆ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಸಭೆ ನಡೆಸಿದೆ.

ಕಾರವಾರದಲ್ಲಿ ಕದಂಬ ನೌಕಾದಳ ,ಬಂದರುಗಳು ಇರುವುದರಿಂದ ಇಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಇದೇ ಮೊದಲಬಾರಿಗೆ ಕಾರವಾರ ಸರಹದ್ದಿನ 53 ದ್ವೀಪಗಳಲ್ಲಿ ,ಲೈಟ್ ಹೌಸ್ ಗಳಲ್ಲಿ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ. ಇದಲ್ಲದೇ ಸಿಸಿ ಕ್ಯಾಮರಾ ಕಣ್ಗಾವಲು, ಹೆಚ್ಚುವರಿ ನಿಗಾ ಇಡಲು ಬೋಟುಗಳು ,ಸಶಸ್ತ್ರ ಪೊಲೀಸರ ನಿಯೋಜನೆಗೆ ಕ್ರಮ ಕೈಗೊಂಡಿದ್ದಾರೆ. ಇದಲ್ಲದೇ ಪ್ರವಾಸಿ ಸ್ಥಳಗಳು ,ಸಮುದ್ರ ತೀರ ಭಾಗದಲ್ಲೂ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲು ಈ ಸಭೆಯಲ್ಲಿ ಸಾಧಕ ಭಾದಕಗಳ ಚರ್ಚೆ ನಡೆಸಲಾಯಿತು.ರಾಜ್ಯದ ಕರಾವಳಿ ಭಾಗದಲ್ಲಿ 1106 ದ್ವೀಗಳು ಅರಬ್ಬಿ ಸಮುದ್ರ ಭಾಗದಲ್ಲಿ ಇದ್ದು ಇದರಲ್ಲಿ 53 ದ್ವೀಪಗಳು ಉತ್ತರ ಕನ್ನಡ ಜಿಲ್ಲೆಯದ್ದಾಗಿದೆ. ನೌಕಾ ನೆಲೆ ಇರುವುದರಿಂದ ಈ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಂಡಿದ್ದೇವೆ,ಮೀನುಗಾರಿಕಾ ಬಂದರಿನಲ್ಲಿಯೂ ಹೆಚ್ಚಿನ ನಿಗಾ ವಹಿಸಲಾಗುತ್ತದೆ.ಜಿಲ್ಲೆಯ ಕೋಸ್ಟ್ ಗಾರ್ಡ ,ನೇವಿ , ಕೋಸ್ಟಲ್ ಪೊಲೀಸರ ಸಹಯೋಗದಲ್ಲಿ ಸಮಿತಿ ಇದೆ. ಇಲ್ಲಿನ ಸಾಧಕ ಭಾದಕ ಚರ್ಚೆ ಮಾಡಲಾಗಿದೆ,ವಿಶೇಷ ನಿಗಾ ಇರಿಸಲು ತೀರ್ಮಾನಿಸಲಾಗಿದೆ ಎಂದು ಕರಾವಳಿ ಕಾವಲುಪಡೆ ಎಸ್ .ಪಿ ಮಿಥುನ್ ಹೆಚ್.ಎನ್. ರವರು ತಿಳಿಸಿದ್ದಾರೆ.
ಇದನ್ನೂ ಓದಿ:-traffic police guidelines: ಇನ್ನುಮುಂದೆ ಪೊಲೀಸರು ವಾಹನವನ್ನು ದಿಢೀರನೆ ಅಡ್ಡಗಟ್ಟುವಂತಿಲ್ಲ.
ಒಟ್ಟಿನಲ್ಲಿ ಉಗ್ರರ ಭೇಟೆಗಾಗಿ ಹಾಗೂ ಅಕ್ರಮ ಚಟುವಟಿಕೆಯನ್ನು ತಡೆಯಲು ಇದೀಗ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಕರಾವಳಿ ಪಡೆ ಸಿದ್ದತೆ ಮಾಡಿಕೊಂಡಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಡಲು ಸಜ್ಜಾಗಿದೆ.