Sirsi news|ಕಾಡು ಪ್ರಾಣಿಗಾಗಿ ಇಟ್ಟ ನಾಡಬಾಂಬ್ ಸ್ಪೋಟ -ಹಸು ಗಂಭೀರ ಗಾಯ
Sirsi news|ಕಾಡು ಪ್ರಾಣಿಗಾಗಿ ಇಟ್ಟ ನಾಡಬಾಂಬ್ ಸ್ಪೋಟ -ಹಸು ಗಂಭೀರ ಗಾಯ
ಕಾರವಾರ/sirsi news:- ಕಾಡು ಪ್ರಾಣಿಗಳ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ಸ್ಪೋಟಗೊಂಡು ಹಸುವೊಂದು ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಮಳಲಿ ಗ್ರಾಮದ ಹೊಸಮನೆ ಬಳಿ ನಡೆದಿದೆ.
Uttara kannada | ಮುಖ್ಯಮಂತ್ರಿಗಳು ಬಾರದೇ ಉದ್ಘಾಟನೆ ಇಲ್ಲ .-ಆರು ತಿಂಗಳಿಂದ ಬಾಗಿಲು ಹಾಕಿದೆ ಹೊಸ ಜಿಲ್ಲಾಸ್ಪತ್ರೆ
ಹೊಸಮನೆ ನಿವಾಸಿ ಲಕ್ಷ್ಮಣ ಗೌಡ ಅವರಿಗೆ ಸೇರಿದ ಈ ಹಸು, ಅಕೇಶಿಯಾ ತೋಪಿನಲ್ಲಿ ಮೇಯುತ್ತಿದ್ದಾಗ ಆಹಾರವೆಂದು ತಿಳಿದು ಬಾಂಬ್ ಅನ್ನು ಬಾಯಿಯಲ್ಲಿ ಕಚ್ಚಿದ್ದು ಬಾಂಬ್ ಸ್ಫೋಟದ ರಭಸಕ್ಕೆ ಹಸುವಿನ ಮುಖದ ಭಾಗಗಳು ಛಿದ್ರಗೊಂಡಿವೆ.
Sirsi| ಶಿರಸಿಯಲ್ಲಿ ಹಾರಾಡಿದ ಹರಿದ ಧ್ವಜ| ಭಟ್ಕಳದಲ್ಲಿ ನಾಡಗೀತೆಗೆ ಅಗೌರವ!
ಹಸು ಆಹಾರ ಸೇವಿಸಲಾಗದೆ ಮತ್ತು ನೀರು ಕುಡಿಯಲಾಗದೆ ಸಾವಿಗೂ ಬದುಕಿಗೂ ಹೋರಾಟ ನಡೆಸುತ್ತಿದೆ. ಇನ್ನು ಈ ಭಾಗದಲ್ಲಿ ಹಲವು ಕಡೆ ಕಾಡುಪ್ರಾಣಿಗಳ ಭೇಟೆಗಾಗಿ ನಾಡಬಾಂಬ್ ಇರಿಸಲಾಗಿದ್ದು ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೂಲೀಸರು ಭೇಟಿಯಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.