ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar ಪಾರ್ಕಲ್ಲಿ ರೋಮಿಯೋಗಳ ಕಾಮದಾಟ! 

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಪಾರ್ಕುಗಳಲ್ಲಿ ಪೋಲಿ ಜೋಡಿಗಳ ಕಾಟ ಹೆಚ್ಚಾಗಿದೆ. ಬಿಡುವಿನ ಸಮಯದಲ್ಲಿ ಕಾರವಾರದ ಪಾರ್ಕ ,ಬೀಚ್ (Beach) ಗಳಿಗೆ ಬರುವ ಜೋಡಿಗಳು ಪಾರ್ಕ ನಲ್ಲಿಯೇ ಯಾವುದೇ ಮುಜುಗರವಿಲ್ಲದೇ ಕಾಮದಾಟ ನಡೆಸುತಿದ್ದು ಪಾರ್ಕ ನಲ್ಲಿ ಓಡಾಡುವ ಜನ ಹೌಹಾರುವಂತೆ ಮಾಡಿದೆ.
03:06 PM Apr 30, 2025 IST | ಶುಭಸಾಗರ್

Karwar ಪಾರ್ಕಲ್ಲಿ ರೋಮಿಯೋಗಳ ಕಾಮದಾಟ!

Advertisement

ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಪಾರ್ಕುಗಳಲ್ಲಿ ಪೋಲಿ ಜೋಡಿಗಳ ಕಾಟ ಹೆಚ್ಚಾಗಿದೆ. ಬಿಡುವಿನ ಸಮಯದಲ್ಲಿ ಕಾರವಾರದ  ಪಾರ್ಕ ,ಬೀಚ್ (Beach) ಗಳಿಗೆ ಬರುವ ಜೋಡಿಗಳು ಪಾರ್ಕ ನಲ್ಲಿಯೇ ಯಾವುದೇ ಮುಜುಗರವಿಲ್ಲದೇ ಕಾಮದಾಟ ನಡೆಸುತಿದ್ದು  ಪಾರ್ಕ ನಲ್ಲಿ ಓಡಾಡುವ ಜನ ಹೌಹಾರುವಂತೆ ಮಾಡಿದೆ.

ಕಾರವಾರ ನಗರದ ಹೃದಯ ಭಾಗದಲ್ಲಿ ಇರುವ ಗಾಂಧಿ ಪಾರ್ಕ ನಲ್ಲಿ ಯುವಜೋಡಿಗಳು ಪಾರ್ಕ ಬಂದು ವಿಶ್ರಾಂತಿ ನೆಪದಲ್ಲಿ ಸೆನ್ಸರ್ ಇಲ್ಲದೇ ಕಾಮದಾಟದಲ್ಲಿ ತೊಡಗುತಿದ್ದಾರೆ.

ಇದನ್ನೂ ಓದಿ:-Karwar :ಸಾಯಿ ಮಂದಿರದಲ್ಲಿ 15 ಕೆಜಿ ಬೆಳ್ಳಿ ಕಳ್ಳತನ ಆರೋಪ ಸಿಸಿ ಕ್ಯಾಮರಾದಲ್ಲಿ ಸೆರೆ!

Advertisement

ಇಂದು ಕಾರವಾರದ ಗಾಂಧಿ ಪಾರ್ಕ ನಲ್ಲಿ ಜೋಡಿಯೊಂದು ಮಟ -ಮಟ ಮಧ್ಯಾಹ್ನ ಜನರ ಓಡಾಟದ ನಡುವೆಯೇ ಬೇಕಾ ಬಿಟ್ಟಿಯಾಗಿ ನಡೆದುಕೊಂಡಿದ್ದು ಇವರ ಆಟವನ್ನು ನೋಡಿದ ಪಾರ್ಕ ಬಂದ ಜನ ಅಲ್ಲಿಂದ ಕಾಲು ಕಿತ್ತಿದ್ದಾರೆ. ನೋಡಲು ವಿದ್ಯಾರ್ಥಿಗಳಂತೆ ಕಾಣುವ ಈ ಜೋಡಿಗಳು ಪಾರ್ಕ ನಲ್ಲಿ ಅಶ್ಲೀಲ ರೀತಿಯಲ್ಲಿ ನಡೆದುಕೊಂಡು ಬಂದ ಜನರಿಗೆ ಮುಜುಗರ ಉಂಟುಮಾಡಿದರು.

ಇನ್ನು ಸಂಜೆಯಾಗುತಿದ್ದಂತೆ ಕಾರವಾರ ನಗರದ ಕಡಲ ತೀರದ ಕತ್ತಲ ಪ್ರದೇಶ , ಮಕ್ಕಳ ಪಾರ್ಕ ರೋಡ್ ರೋಮಿಯೋಗಳಿಗೆ "ಪಂಪ್ ಹೌಸ"ಆಗಿ ಮಾರ್ಪಟ್ಟಿದೆ.

ಕಡಲ ತೀರ ಹಾಗೂ ಪಾರ್ಕ ಗಳಲ್ಲಿ ರಾತ್ರಿ ವಿದ್ಯುತ್ ಸಂಪರ್ಕ ಸಹ ಇರದ ಹಿನ್ನಲೆಯಲ್ಲಿ ರಾತ್ರಿ ಈ ಭಾಗದಲ್ಲಿ ಅಕ್ರಮ ಚಟುವಟಿಕೆಯ ಕೇಂದ್ರವಾಗಿದೆ.

ಇನ್ನು ಈ ಭಾಗದಲ್ಲಿ ಪೊಲೀಸರಾಗಲಿ, ಪ್ರವಾಸಿ ಮಿತ್ರರಾಗಲಿ ಇಲ್ಲ .ಹೀಗಾಗಿ ಯುವ ಜೋಡಿಗಳು ಯಾವ ಭಯವಿಲ್ಲದೇ ಬೇಕಾ ಬಿಟ್ಟಿಯಾಗಿ ನಡೆದುಕೊಳ್ಳುತಿದ್ದು ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಕಾರವಾರ ನಗರ ಪೊಲೀಸರು ಇವರ ಚಳಿ ಬಿಡಿಸದಿದ್ದಲ್ಲಿ ಮುಂದೊಂದು ದಿನ ಈ ಸ್ಥಳಗಳು ಅಪರಾಧ ಕೃತ್ಯಗಳ ಹಾಟ್ ಸ್ಪಾಟ್ ಆಗುವುದರಲ್ಲಿ ಅನುಮಾನವಿಲ್ಲ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
BeachGandi parkIllegal activitiesKarwarKarwar newsparkPoliceStudentTouristಕಾರವಾರ
Advertisement
Next Article
Advertisement