Karwar :ಕುಡಿದ ಮತ್ತಿನಲ್ಲಿ ಮಾವನಿಂದ ಅಳಿಯನ ಹ**
Karwar :ಕುಡಿದ ಮತ್ತಿನಲ್ಲಿ ಮಾವನಿಂದ ಅಳಿಯನ ಹತ್ಯೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಬೈತಖೋಲ ಬಡಾವಣೆಯಲ್ಲಿ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ತನ್ನ ಅಳಿಯನನ್ನೇ ಹತ್ಯೆ ಮಾಡಿದ ಭೀಕರ ಘಟನೆ ಸಂಭವಿಸಿದೆ.
ವೈಯಕ್ತಿಕ ಕಾರಣದಿಂದ ಉಂಟಾದ ಜಗಳ ಕೊಲೆ ಪ್ರಕರಣಕ್ಕೆ ತಿರುಗಿದೆ.ಚಾಸ್ಟನ್ (35) ಹತ್ಯೆಯಾದ ವ್ಯಕ್ತಿ.
ಇದನ್ನೂ ಓದಿ:-Karwar: ಶಾಸಕ ಸೈಲ್ ಮನೆಯಮೇಲೆ ED ರೈಡ್ |ಸಿಕ್ಕಿದ್ದೇನು?
ಚೋರನ್ (43) ಎಂಬವರು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ತನ್ನ ಅಕ್ಕನ ಮಗ ಚಾಸ್ಟನ್ ಅವರನ್ನು ಹತ್ಯೆ ಮಾಡಿದ್ದಾರೆ. ಕುಡಿತದ ಮತ್ತಿನಲ್ಲಿ ಇಬ್ಬರ ನಡುವೆ ವಾಗ್ವಾದ ಉಂಟಾಗಿ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಕಳೆದ ಒಂದು ವಾರದ ಹಿಂದೆಯೂ ಈ ಇಬ್ಬರ ನಡುಗೆ ಹೊಡೆದಾಟ ನಡೆದಿತ್ತು. ಅದೇ ಕೋಪದಲ್ಲಿ ನಡೆದ ಹಲ್ಲೆಯಿಂದ ಹತ್ಯೆಯಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಕಾರವಾರ ನಗರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಘಟನೆ ಸಂಬಂಧ ಕಾರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.