ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara Kannada| ಕಾಂಗ್ರೆಸ್ ಅಬ್ಬರದ ಪ್ರಚಾರ ಎಲ್ಲಿ ಏನು? ಯಾವ ನಾಯಕರು ಏನಂದ್ರು ವಿವರ ನೋಡಿ.

10:06 PM Apr 22, 2024 IST | ಶುಭಸಾಗರ್

ಜಾತಿ- ಧರ್ಮಗಳ ನಡುವೆ ಬೆಂಕಿ ಹಚ್ಚುವವರು ಬಿಜೆಪಿಗರು: ಡಾ.ಅಂಜಲಿ ಕಿಡಿ.

Advertisement

ಕಾರವಾರ ,election news:-- ಜಾತಿ- ಜಾತಿ, ಧರ್ಮ- ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬಿಜೆಪಿಯವರದ್ದು ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಕಿಡಿಕಾರಿದರು.

Honnavara ತಾಲೂಕಿನ ಅರೇಅಂಗಡಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮ- ಸಂಸ್ಕ್ರತಿ ಒಂದು ಕಡೆ, ರಾಜಕಾರಣ- ಸಮಾಜಸೇವೆ ಇನ್ನೊಂದು ಕಡೆ ಎನ್ನುವ ತತ್ವ ಕಾಂಗ್ರೆಸ್‌ನದ್ದು. ಆದರೆ ಬಿಜೆಪಿಗರು ಎಲ್ಲವನ್ನು ಮಿಶ್ರ ಮಾಡಿ ರಾಜಕಾರಣ ಕುಲಗೆಡಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ ಅವರು, ಜಿಲ್ಲೆಯ ಸಮಸ್ಯೆ ಅಷ್ಟೇ ಅಲ್ಲದೇ, ರಾಜ್ಯದ (state)ಸಮಸ್ಯೆಗೂ ಜಿಲ್ಲೆಯಲ್ಲಿ ಧ್ವನಿಯಾಗುತ್ತೇನೆ. ಕಳೆದ 10 ವರ್ಷದಲ್ಲಿ ಯಾವುದೇ ಜನಪರ ಯೋಜನೆ ತರಲಿಲ್ಲ. ತಂದ ಕೆಲ ಯೋಜನೆಗಳು ಅನುಷ್ಠಾನ ಯಶ್ವಸಿಯಾಗಿಲ್ಲ. ಒಂದು ವಿಷಯವನ್ನು ರಾಜಕೀಯವಾಗಿ ಹೇಗೆ ಉಪಯೋಗ ಮಾಡಬೇಕು ಎನ್ನುವುದು ಬಿಜೆಪಿಯವರನ್ನು ನೋಡಿ ಕಲಿಯಬೇಕು ಎಂದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವ ನೀಡಿದ ಭರವಸೆ ಈಡೇರಿಸಲು ವಿಫಲರಾಗಿದ್ದಾರೆ. ನಿರುದ್ಯೋಗ ಇರುದಿಲ್ಲ ಹೇಳಿ ಉದ್ಯೋಗಸೃಷ್ಠಿಯ ಭರವಸೆಯಂತೆ 80 ಕೋಟಿ ಉದ್ಯೋಗ ಸೃಷ್ಠಿಯಾಗಬೇಕಿತ್ತು. ಕಪ್ಪುಹಣ ತಂದು ಖಾತೆಗೆ ಹಾಕುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು ಈಡೇರಿಸಲು ವಿಫಲರಾಗಿದ್ದಾರೆ. ಮಾತಿನಲ್ಲಿ ಮರಳು ಮಾಡುವ ಪ್ರಧಾನಿ ರಾಜ್ಯಕ್ಕೆ ಬರಗಾಲಕ್ಕೆ ಒಂದು ರೂಪಾಯಿ ನೀಡಿಲ್ಲ. ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ. ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು, ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ರಾಜ್ಯ ಸರ್ಕಾರದ ಸಾಧನೆಯನ್ನು ತಿಳಿಸಿದರು.

Advertisement

ಇದನ್ನೂ ಓದಿ:-ಬಿಜೆಪಿಯವರಿಗೆ ನಾವು ಬೇಡ ಅಂದ್ರೆ ನಾವೇಕೆ ಪ್ರಚಾರಕ್ಕೆ ಹೋಗಬೇಕು-MLA ಶಿವರಾಮ್ ಹೆಬ್ಬಾರ್

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬೋಗಸ್ ಕಾರ್ಡ್. ಯಾವುದೇ ಯೋಜನೆ ತರುವುದಿಲ್ಲ ಎಂದು ಜನತೆಯ ದಿಕ್ಕು ತಪ್ಪಿಸಲು ಬಿಜೆಪಿಗರು ಯತ್ನಿಸಿದರು. ಈಗ ಲೋಕಸಭಾ ಚುನಾವಣೆಯ ಬಳಿಕ ಗ್ಯಾರಂಟಿ ಕೊಡುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಗ್ಯಾರಂಟಿ ಯೋಜನೆಯ ಜೊತೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದೆಲ್ಲಡೆ ಮತ್ತೆ 5 ಗ್ಯಾರಂಟಿ ಯಶ್ವಸಿಯಾಗಿ ಅನುಷ್ಠಾನ ಮಾಡುತ್ತೇವೆ. ನೆರೆಯ ಕೇರಳ, ಗೋವಾ ರಾಜ್ಯದಲ್ಲಿ ಇರದ ಸಿ.ಆರ್.ಜಡ್ ನಿಯಮ ನಮ್ಮ ರಾಜ್ಯದ ಕರಾವಳಿಯಲ್ಲಿದೆ ಅದನ್ನು ತೆರವುಗೊಳಿಸುವ ಜೊತೆ, ಅತಿಕ್ರಮಣ ಸಮಸ್ಯೆ ನಿವಾರಿಸಲು ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬರಬೇಕು. ನಮ್ಮ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಕರೆ ನೀಡಿದರು.

ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಘೋಷಣೆಯಂತೆ ಅನುಷ್ಠಾನ ಮಾಡಿದೆ. ಕುಮಟಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಶಾಸಕರಿದ್ದಾರೆ. ನಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಸಂಸದರನ್ನು ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಿ ಕ್ಷೇತ್ರದ ಸಮಸ್ಯೆ ಬಗೆಹರಿಸಿಕೊಳ್ಳೋಣ. ಕಾರ್ಯಕರ್ತರು ಒಗ್ಗಟ್ಟಾಗಿ ಜನೆಯ ಮನೆ ಬಾಗಲಿಗೆ ತೆರಳಿ ರಾಜ್ಯ ಸರ್ಕಾರದ ಸಾಧನೆಯನ್ನು ತಿಳಿಸುವ ಕೆಲಸ ಮಾಡೋಣ ಎಂದರು.

ಇದನ್ನೂ ಓದಿ:-ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಎಷ್ಟು ಕೋಟಿ ವಡೆಯರು! ವಿವರ ನೋಡಿ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ತೆಂಗೇರಿ, ಕೆಪಿಸಿಸಿ ಕಾರ್ಯದರ್ಶಿ ನಿವೇದಿತ್ ಆಳ್ವಾ, ಪ್ರಚಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ನಾಯಕ, ಕೆ.ಪಿ.ಸಿ.ಸಿ ಸದಸ್ಯರಾದ ಎಂ.ಎನ್.ಸುಬ್ರಹ್ಮಣ್ಯ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ, ಜಿ.ಪಂ. ಮಾಜಿ ಸದಸ್ಯ ರತ್ನಾಕರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Advertisement
Tags :
Anjali nimbalkarCongressElection championKannada newskaravali newsUttarakannada
Advertisement
Next Article
Advertisement