ಬಿಜೆಪಿ ಹತ್ತು ಪ್ರಶ್ನೆಗೆ 10 ಉತ್ತರ ನೀಡಿದ ಕಾಂಗ್ರೆಸ್ |ಏನದು? ವಿವರ ನೀಡಿ




ಬಿಜೆಪಿ (Bjp)ವಕ್ತಾರ ಸದಾನಂದ ಭಟ್ ಅವರು ಕಾಂಗ್ರೆಸ್ ಏನು ಮಾಡಿದೆ ಎಂದು ಹತ್ತು ಪ್ರಶ್ನೆಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಕೇಳಿದ್ದರು. ಅದಕ್ಕೆ ಕಾಂಗ್ರೆಸ್ ವಕ್ತಾರರಾದ ಶಂಭು ಶೆಟ್ಟಿಯವರು ಈ ಕೆಳಗಿನಂತೆ ಉತ್ತರಿಸಿದ್ದಾರೆ.
- ಬರಗಾಲ ಮತ್ತು ನೀರಿನ ಸಮಸ್ಯೆಗೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಏನು ಪರಿಹಾರ ಕೊಟ್ಟಿದ್ದೀರಿ? ಬರಗಾಲದಿಂದ ಹಾನಿಗೊಳಗೊಂಡ ರೈತರಿಗೆ ಬೆಳೆ ಪರಿಹಾರ ಕೊಟ್ಟಿದ್ದೀರಿ?
ಪರಿಸರದ ಅಸಮತೋಲನದಿಂದ ರಾಜ್ಯ ತೀವ್ರ ಬರ ಪರಿಸ್ಥಿತಿಯನ್ನು ಅನುಭವಿಸುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ತನ್ನ ಇತಿ-ಮಿತಿಯೊಳಗೆ ರೈತರಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸರ್ವ ಪ್ರಯತ್ನ ಮಾಡುತ್ತಿದೆ. ಈ ನಡುವೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ನೀಡುವಲ್ಲಿ ನಿಷ್ಕಾಳಜಿ ತೋರಿದ್ದು, ಪ್ರಸ್ತುತ ಸುಪ್ರೀಂ ಕೋರ್ಟ ಮಧ್ಯಸ್ಥಿಕೆಯಿಂದ ನಾವು ಕೇಳಿದ್ದ ರೂ. 18,174 ಕೋಟಿ ಬರ ಪರಿಹಾರದಲ್ಲಿ ಕೇವಲ 3,454 ಕೋಟಿಯಷ್ಟು ಅಂದರೆ ಕೇವಲ ಶೇ. 19% ನೀಡಿ ಕೈ ತೊಳೆದುಕೊಂಡಿದೆ. ಇಲಾಖಾ ಮೂಲಗಳ ಪ್ರಕಾರ ಬೆಳೆಹಾನಿ ಅನುಭವಿಸಿದ ಅರ್ಹ ರೈತರ ಸಂಖ್ಯೆ 34 ಲಕ್ಷ ಎಂದು ಅಂದಾಜಿಸಲಾಗಿದೆ. ಈಗ ಚುನಾವಣಾ ಆಯೋಗದ ಅನುಮತಿಯಂತೆ ಎನ್.ಡಿ.ಆರ್.ಎಫ್. ನಿಯಮಾನುಸಾರ ಅರ್ಹ ರೈತರಿಗೆ ಸೋಮವಾರದಿಂದ ಪರಿಹಾರದ ಹಣ ಜಮೆಯಾಗಲಿದೆ. ಪ್ರಸ್ತುತ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳ ಬಳಿ ಬರ ನಿರ್ವಹಣೆಗೆ ಸಾಕಷ್ಟು ಹಣ ಮೀಸಲಾಗಿದ್ದು, ಜನ/ಜಾನುವಾರು/ಮೇವು ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳಲು ಈ ಹಿಂದೆಯೇ ನಿರ್ದೇಶಿಸಲಾಗಿದೆ.
- ಈ ಹಿಂದೆ ರಾಜ್ಯ ಬಿಜೆಪಿ ಸರಕಾರ ತನ್ನ ಬಜೆಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಘೋಷಣೆ ಮಾಡಿದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಯನ್ನು ಯಾಕೆ ಕೈ ಬಿಟ್ಟಿದ್ದೀರಿ?
ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಯನ್ನು ರಾಜ್ಯ ಸರ್ಕಾರದ ಕೈಬಿಟ್ಟಿಲ್ಲ. ಹಿಂದಿನ ಸರ್ಕಾರ ಬಜೆಟ್ಟಿನಲ್ಲಿ ಘೋಷಿಸಿದಂತೆ ಅಗತ್ಯ ಅನುದಾನ ಮೀಸಲಿಡದೇ ಇರುವುದು ದುರಂತ. ಈ ತರಹದ ಹೇಳಿಕೆಗಳು ಜನರನ್ನು ತಪ್ಪು ದಾರಿಗೆ ಒಯ್ಯುತ್ತದೆ. ಈಗಾಗಲೇ ಘನ ಮುಖ್ಯಮಂತ್ರಿ/ಉಪ ಮುಖ್ಯಮಂತ್ರಿಗಳು ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದ್ದು, ಇತ್ತೀಚಿಗೆ ಜಿಲ್ಲೆಯ ಕುಮಟಾದಲ್ಲಿ ನಡೆದ ಪ್ರಜಾಧ್ವನಿ -2.0 ಸಮಾವೇಶದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಚುನಾವಣೆ ನಂತರ ನಿರ್ಣಯ ಮಾಡಿ ಕ್ರಮ ಕೈಗೊಳ್ಳಲಾಗುವುದು.
- ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಎಷ್ಟು ಅನುದಾನವನ್ನು ನೀಡಿದ್ದೀರಿ?
ಜಿಲ್ಲೆಗೆ ನೀಡುವ ಅನುದಾನದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ತಾರತಮ್ಯ ಮಾಡಿಲ್ಲ. ಅಭಿವೃದ್ಧಿಗೆ ಪೂರಕವಾಗಿ ಅನುದಾನ ನೀಡುತ್ತಲೇ ಬಂದಿದ್ದೇವೆ. ಅಭಿವೃದ್ಧಿ ನಿರಂತರವಾಗಿ ಆಗಬೇಕಾದದ್ದು. ಒಂದು ವರ್ಷದಲ್ಲಿ ಸರ್ಕಾರ ಗ್ಯಾರೆಂಟಿಗಳನ್ನು ಜನತೆಗೆ ನೀಡುತ್ತ, ಜಿಲ್ಲೆಯ 12 ತಾಲೂಕಿನಲ್ಲೂ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಿದ್ದೇವೆ. ಆಯವ್ಯಯದಲ್ಲಿ ಘೋಷಣೆಯಾದ ಅನುದಾನ ಆಯಾ ಇಲಾಖೆಗಳಿಗೆ ನೇರವಾಗಿ ಜಮೆ ಆಗುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲೂ ಹಲವಾರು ಯೋಜನೆ ಅನುಷ್ಠಾನಗೊಂಡು ಉದ್ಘಾಟನೆಯಾಗಿದೆ. ಅಭಿವೃದ್ಧಿಯನ್ನು ಕಣ್ಣು ತೆರೆದು ನೋಡುವ ದೃಷ್ಟಿಕೋನ ಬಿಜೆಪಿ ಹೊಂದಿದ್ದರೆ ಮಾತ್ರ ಗೋಚರವಾಗುವುದಲ್ಲವೇ?
ಗೃಹಲಕ್ಷ್ಮಿ ಯೋಜನೆಗೆ 11,037 ಕೋಟಿ, ಗೃಹಜ್ಯೋತಿ ಯೋಜನೆಗೆ 4,894 ಕೋಟಿ, ಅನ್ನಭಾಗ್ಯ ಯೋಜನೆಗೆ 4,595 ಕೋಟಿ, ಶಕ್ತಿ ಯೋಜನೆಗೆ 4,380 ಕೋಟಿ ಮತ್ತು ಯುವನಿಧಿ ಯೋಜನೆಗೆ 18.17 ಕೋಟಿ ರೂ. ಗಳನ್ನು ನೀಡಲಾಗಿದೆ.
- ಹಿಂದೂ ಅಮಾಯಕ ಕಾರ್ಯಕರ್ತರ ಮೇಲೆ ಅನವಶ್ಯಕವಾಗಿ ರಾಜಕೀಯ ಪ್ರೇರಿತವಾಗಿ ಪ್ರಕರಣಗಳನ್ನು ಏಕೆ ದಾಖಲಿಸುತ್ತಿದ್ದೀರಿ?
ರಾಜಕೀಯ ಪ್ರೇರಿತವಾದ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎನ್ನುವುದು ಶುದ್ಧ ಸುಳ್ಳು. ಅಂತಹ ಯಾವುದಾದರು ಉದಾಹರಣೆ ಇದ್ದಲ್ಲಿ ಸಾರ್ವಜನಿಕರ ಮುಂದೆ ಇಡಲಿ. ಆದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅವಶ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
- ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ನಿಲ್ಲಿಸಿ ಹೈನುಗಾರಿಕೆಗೆ ನೀಡುತ್ತಿದ್ದ ಪ್ರೋತ್ಸಾಹ ಧನಕ್ಕೆ ಯಾಕೆ ಅನುದಾನ ನೀಡುತ್ತಿಲ್ಲ?
ರೈತರಿಗೆ / ಹೈನುಗಾರಿಕೆಗೆ ನೀಡುತ್ತಿರುವ ಅನುದಾನ ಕಡಿತ ಮಾಡಿಲ್ಲ. ಕೃಷಿ ಇಲಾಖೆಯ ಯೋಜನೆಗಳಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ‘ಅನುಗ್ರಹ’ ಯೋಜನೆಯಡಿಯಲ್ಲಿ ಜಾನುವಾರುಗಳು ಮೇಕೆ, ಕುರಿ ಅಸುನೀಗಿದರೆ ತಲಾ 5 ಸಾವಿರ ಪರಿಹಾರ ಧನ. ಹಾಗೂ ಪಶುಗಳಿಗೆ (ಹಸು-ಎಮ್ಮೆ-ಎತ್ತು ) ತಲಾ 10 ಸಾವಿರ ಪರಿಹಾರ ಧನ ನೀಡಲಾಗುತ್ತಿದೆ.
- ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಅರಣ್ಯ ಅತಿಕ್ರಮಣದಾರರ ಹಿತ ರಕ್ಷಣೆಗಾಗಿ ಯಾವ ಕ್ರಮವನ್ನು ಕೈಗೊಂಡಿದ್ದೀರಿ?
ಅರಣ್ಯ ಅತಿಕ್ರಮಣದಾರರ ಸಮಸ್ಯೆ ತುಂಬಾ ಹಳೆಯದು, ಕಾಂಗ್ರೆಸ್ ಸರ್ಕಾರ ಸೆಪ್ಟೆಂಬರ 21, 2015ರಂದು ಆದೇಶ ಹೊರಡಿಸಿ, 27-04-1978ರ ಪೂರ್ವದಲ್ಲಿ ಅತಿಕ್ರಮಣ ಮಾಡಿದ ಅರಣ್ಯವಾಸಿ, ಅನುಸೂಚಿತ ಬುಡಕಟ್ಟಿನ ವ್ಯಕ್ತಿಯ ಅಥವಾ ಇತರೇ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದಲ್ಲಿ ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಒಕ್ಕಲೆಬ್ಬಿಸಬಾರದೆಂದು ಆದೇಶ ನೀಡಿದೆ. ಅಲ್ಲದೇ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅರಣ್ಯ ಹಕ್ಕುಗಳ ಕಾಯಿದೆಯಲ್ಲಿ ಸಾಕಷ್ಟು ಗೊಂದಲಗಳಿದ್ದು, ಇದರಿಂದ ಇತರೇ ಪಾರಂಪಾರಿಕ ಅರಣ್ಯವಾಸಿಗಳು ಹಕ್ಕು ಪತ್ರ ಪಡೆಯಲು ಹೆಣಗಾಡುತ್ತಿದ್ದಾರೆ. ಅರಣ್ಯ ಭೂಮಿಯ ಮೇಲೆ ಹಕ್ಕು ಸಾಧಿಸಲು 3 ತಲೆಮಾರಿನ ಅವಲಂಬನೆ ಸಾಬೀತುಪಡಿಸಲು ಬೇಕಾದ ಪುರಾವೆಗಳು ಹಾಗೂ ಸಾಕ್ಷö್ಯವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕಾಯಿದೆಯಲ್ಲಿ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ವಿನಂತಿಸಿದ್ದರೂ ಸ್ಪಂದಿಸುತ್ತಿಲ್ಲ.
ಇದನ್ನೂ ಓದಿ:-Uttrakannda ಬಿಜೆಪಿ ಯಿಂದ ಮುಖ್ಯಮಂತ್ರಿಗೆ ಹತ್ತು ಪ್ರಶ್ನೆ ? ಏನದು ವಿವರ ನೋಡಿ.
- ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಗಾಲದಲ್ಲಿ ಉಂಟಾಗುತ್ತಿರುವ ನೆರೆಯ ಅನಾನುಕೂಲತೆಯನ್ನು ತಪ್ಪಿಸಲು, ಪರಿಹಾರಕ್ಕೆ ಏನು ಕ್ರಮವನ್ನು ಕೈಗೊಂಡಿದ್ದೀರಿ?
ನಮ್ಮದು ಸಾಕಷ್ಟು ಅರಣ್ಯ ಪ್ರದೇಶಗಳಿಂದ ಹಾಗೂ ಬೆಟ್ಟ ಗುಡ್ಡಗಳಿಂದ ಕೂಡಿದ ದೈವಿದತ್ತ ಜಿಲ್ಲೆ. ಇಲ್ಲಿ ಅತಿಯಾದ ಮಳೆಯಿಂದ ಭೂಕುಸಿತ, ನೆರೆ ಹಾವಳಿ, ರಸ್ತೆ ಹಾಳಾಗುವಿಕೆ, ಸೇತುವೆ ಕುಸಿತದಂತಹ ಪ್ರಾಕೃತಿಕ ವಿಕೋಪಗಳು ಉಂಟಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಯಾರಿಂದನೂ ಸಾಧ್ಯವಿಲ್ಲ. ಆದರೂ ಸಹ ಜಿಲ್ಲಾಡಳಿಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಜನ/ಜಾನುವಾರುಗಳಿಗೆ ತೊಂದರೆಯಾಗದAತೆ ನೋಡಿಕೊಂಡಿದೆ. ಕಾಲಕಾಲಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಈ ಹಿಂದಿನ ತಮ್ಮ ಸರ್ಕಾರದ ನಿರ್ಲಕ್ಷö್ಯ ತಮಗೆ ಕಾಣುತ್ತಿಲ್ಲ.
- ವಿದ್ಯುತ್, ನೀರು, ಬಸ್ ನೋಂದಣಿ, ವಾಹನ ತೆರಿಗೆ ಇನ್ನಿತರ ದರವನ್ನು ಹೆಚ್ಚಿಸಿ ಎಲ್ಲಾ ಬೆಲೆ ಏರಿಕೆ ಮಾಡಿ ನಿಮ್ಮ ಗ್ಯಾರಂಟಿಗಾಗಿ ಸಂಗ್ರಹಿಸುತ್ತಿರುವ ಹೆಚ್ಚಿನ ಹಣ ಏನು ಮಾಡಿದಿರಿ?
ಗ್ಯಾರಂಟಿಯನ್ನು ಶತಾಯಗತಾಯ ವಿರೋಧಿಸುವ ಮನಸ್ಥಿತಿ ಭಾರತೀಯ ಜನತಾ ಪಕ್ಷದ್ದಾಗಿದೆ. ಕೇಂದ್ರ ಸರ್ಕಾರದ ತಪ್ಪು ನೀತಿಯಿಂದಾಗಿ ಬೆಲೆ ಏರಿಕೆ ಉಂಟಾಗುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಘೋಷಿಸಿದಂತೆ ರೂ. 15.00 ಲಕ್ಷ ರೂಪಾಯಿಗಳನ್ನು ಸಾಮಾನ್ಯ ಜನತೆಯ ಖಾತೆಗೆ ಜಮಾ ಮಾಡುತ್ತೇವೆಂದು ಭರವಸೆ ನೀಡಿದ್ದು ಸುಳ್ಳಾಗಿಲ್ಲವೇ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಭರವಸೆಯನ್ನು ನೀಡಿರುತ್ತೀರಿ. ಆದರೆ ಕಳೆದ 10 ವರ್ಷದಲ್ಲಿ ಎಷ್ಟು ಕೋಟಿ ಉದ್ಯೋಗ ಸೃಷ್ಟಿಯಾಯಿತು? ಪ್ರಸ್ತುತ ಉದ್ಯೋಗದಲ್ಲಿ ಕಡಿತ ಉಂಟಾಗಿ ನೀರುದ್ಯೋಗದ ಸಮಸ್ಯೆ ವೃದ್ಧಿಸುತ್ತಿರುವುದು ಇಡೀ ದೇಶ ನೋಡುತ್ತಿದೆ.
- ಮೀನುಗಾರರ ಹಿತ ರಕ್ಷಣೆಗೆ ಮತ್ತು ಅನುಕೂಲಕ್ಕೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂಲಕಸುಬುಗಳಲ್ಲಿ ಮೀನುಗಾರಿಕೆಯು ಒಂದು. ಸರ್ಕಾರ ಮೀನುಗಾರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಸಾಂಪ್ರಾದಾಯಿಕ ಮೀನುಗಾರಿಕೆ ಪೇಟ್ರೊಲ್/ಡಿಸೆಲ್ ಸಬ್ಸಿಡಿ ದರದಲ್ಲಿ ನೀಡಲು ಚಿಂತನೆ ನಡೆದಿದೆ. ಕೇಂದ್ರ ಸರ್ಕಾರದಿಂದ ಗುರುತಿನ ಚೀಟಿ ಹಾಗೂ ಸಮುದ್ರದಲ್ಲಿ ನಾಪತ್ತೆಯಾಗುವ ಮೀನುಗಾರರ ತ್ವರಿತ ಹುಡುಕಾಟ ಮತ್ತು ಕುಟುಂಬಗಳಿಗೆ ಅಗತ್ಯ ಬೆಂಬಲ ಹಾಗೂ ದೋಣಿಗಳಿಗೆ ವಿಮಾ ರಕ್ಷಣೆ. ಇಂತಹ ಯೋಜನೆಗಳು ಮೀನಗಾರರಿಗೆ ತುಂಬಾ ಅಗತ್ಯವಿದೆ.
- ಕೇವಲ ಕಾಂಗ್ರೆಸ್ಸಿನ ಗ್ಯಾರಂಟಿಯಿಂದಲೇ ಜನರು ತಮ್ಮ ಜೀವನವನ್ನು ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿರುವ ನಿಮ್ಮ ಆಡಳಿತದ ಅವಧಿಯಲ್ಲಿ ಮಹಿಳೆಯರ ರಕ್ಷಣೆಗೆ ಯಾವ ಗ್ಯಾರಂಟಿ ನೀಡಿದ್ದೀರಿ?
ಗ್ಯಾರಂಟಿ ಯೋಜನೆಗಳು ಬಡವರ ಕೂಲಿಕಾರರ ಮಹಿಳೆಯರ ಜೀವನ ಶೈಲಿಯ ಮೇಲೆ ಧನಾತ್ಮಕ ಪರಿಣಾಮ ಬೀರಿವೆ. ವಸತಿ ಯೋಜನೆಗಳಲ್ಲಿ ಫಲಾನುಭವಿಗಳಾಗಿ ಮಹಿಳೆಯರನ್ನು ಮಾಡಿದ್ದು, ಕಾಂಗ್ರೆಸ್ ಸರ್ಕಾರ. ಸಮಾಜದ ಒಳಿತು ಮಹಿಳೆಯರ ಸಬಲೀಕರಣದಿಂದ ಮಾತ್ರ ಸಾಧ್ಯ ಎಂದು ಬಿಂಬಿಸಿ, ಪಂಚಾಯತ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50 ರಷ್ಟು ಮೀಸಲಾತಿ ನೀಡಿದ್ದು 18 ವರ್ಷದ ಯುವಕ/ಯುವತಿಯರಿಗೆ ಮತದಾನ ಹಕ್ಕು ನೀಡಿದ್ದು ನಮ್ಮ ಸರ್ಕಾರ. ಮಹಿಳೆಯರ ಸರ್ವಾಂಗೀಣ ಪ್ರಗತಿಗೆ ಕಾಂಗ್ರೆಸ್ ಪಕ್ಷ ಯಾವತ್ತೂ ಸನ್ನದ್ಧವಾಗಿದೆ. ಮಹಿಳೆಯರ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಕಠಿಣ ಕ್ರಮಕ್ಕೂ ಸಿದ್ದರಿದ್ದೇವೆ.
ಅದೇ ರೀತಿ ಪುರುಷರಿಗೆ ವಿಶೇಷವಾಗಿ ರೈತರಿಗೆ, ಯುವಜನರಿಗೆ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಈಗ ಘೋಷಿಸಿರುವ ಪಂಚನ್ಯಾಯ ಗ್ಯಾರಂಟಿಯಲ್ಲಿ ಸಮಾಜದ ಎಲ್ಲ ವರ್ಗದ ಜನರ ಹಿತವನ್ನು ಕಾಪಾಡುವಲ್ಲಿ ಗಮನ ಕೇಂದ್ರಿಕರಿಸಲಾಗಿದೆ.
ಮುಂಬರುವ ಲೋಕಸಭಾ ಚುನಾವಣಾ(loksabha election 2024) ಪ್ರಣಾಳಿಕೆೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ 'ಮಹಿಳಾ ನ್ಯಾಯ', ರಾಷ್ಟೀಯ ಗ್ಯಾರಂಟಿ (garante)ಆಗಿ ಯುವಕರ ಉಜ್ವಲ ಭವಿಷ್ಯಕ್ಕಾಗಿ 'ಯುವ ನ್ಯಾಯ,' ರೈತರ ಬದುಕು ಹಸನಾಗಿಸಲು ‘ರೈತ ನ್ಯಾಯ' ಶ್ರಮಿಕ ವರ್ಗಕ್ಕೆ ಸಾಮಾಜಿಕ ಭದ್ರತೆ ಒದಗಿಸಲು ‘ಶ್ರಮಿಕ ನ್ಯಾಯ' ಹಾಗೂ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಲು ‘ಪಾಲುದಾರಿಕೆ ನ್ಯಾಯ' ಎನ್ನುವ ಪಂಚ ನ್ಯಾಯಗಳನ್ನು ಕಾಂಗ್ರೆಸ್ ಪಕ್ಷವು ಘೋಷಿಸಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಇಂಡಿಯಾ ಘಟಬಂಧನ ಸರ್ಕಾರವು ರಚನೆಯಾದರೆ ಪಂಚ ನ್ಯಾಯ ಯೋಜನೆಗಳು ಜಾರಿಬರುವುದು ಖಚಿತ.
ಅಲ್ಲದೇ ಬುಡಕಟ್ಟು ಜನಾಂಗದವರಾದ ಹಾಗೂ ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಹಾಲಕ್ಕಿ ಮತ್ತು ಕುಣಬಿ ಸಮಾಜದವರನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡಿಸಬೇಕೆಂಬ ನಮ್ಮ ಕೂಗಿಗೆ ಸಾಕಷ್ಟು ಸಾಕ್ಷಧಾರಗಳನ್ನು ಒದಗಿಸಿದರೂ ಕೇಂದ್ರ ಸರ್ಕಾರ ಅಲಕ್ಷö್ಯತನ ತೋರಿಸುತ್ತಿದೆ. ಇದರಿಂದ ಈ ಸಮುದಾಯದ ಯುವಕ/ಯುವತಿಯರು ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಗಳು ಶಿರಸಿಯ ಭೇಟಿ ಸಂದರ್ಭದಲ್ಲಿ ಕ್ಷೇತ್ರದ ಎಲ್ಲ ಸಮಸ್ಯೆಗಳ ಬಗ್ಗೆ ಶ್ರೀ ಆರ್.ವಿ.ದೇಶಪಾಂಡೆಯವರು(RV deshpande) ಪತ್ರ ಕೂಡ ಬರೆದು ಗಮನ ಸೆಳೆದಿದ್ದಾರೆ.