Yallapur: ಭೀಕರ ಬಸ್ ಅಪಘಾತ ಸ್ಥಳದಲ್ಲೇ ಮೂವರು ಸಾವು ಚಿಕ್ಕ ಮಕ್ಕಳು ಸೇರಿ ಹಲವರಿಗೆ ಗಂಭೀರ ಗಾಯ
Yallapur: ಭೀಕರ ಬಸ್ ಅಪಘಾತ ಸ್ಥಳದಲ್ಲೇ ಮೂವರು ಸಾವು ಚಿಕ್ಕ ಮಕ್ಕಳು ಸೇರಿ ಹಲವರಿಗೆ ಗಂಭೀರ ಗಾಯ
ಕಾರವಾರ :- ಅತೀ ವೇಗದಲ್ಲಿ ತೆರಳುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ (ksrtc bus)ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವು ಕಂಡು ಏಳು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ನಲ್ಲಿ ನಡೆದಿದೆ.
ಮೃತರು ಬಾಗಲಕೋಟೆ (Bagalkot) ಮೂಲದ ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮದ ನಿಲವ್ವ ಹರದೊಳ್ಳಿ (40),ಜಾಲಿಹಾಳ ಗ್ರಾಮದ ಗಿರಿಜವ್ವ ಬೂದನ್ನವರ (30), ಇನ್ನೋರ್ವ 45 ವರ್ಷದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ.
ಇನ್ಬು ಗಾಯಗೊಂಡ 7 ಜನ ಪ್ರಯಾಣಿಕರು ಸಹ ಬಾಗಲಕೋಟೆ ಮೂಲದವರಾಗಿದ್ದಾರೆ.ಇದರಲ್ಲಿ 12 ವರ್ಷದ ಚಿಕ್ಕ ಚಿಕ್ಕ ಮಕ್ಕಳು ಸೇರಿದ್ದು, ಗಂಭೀರ ಗಾಯ ವಾಗಿದ್ದು ಎಲ್ಲರನ್ನೂ ಹುಬ್ಬಳ್ಳಿ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.
ಇದನ್ನೂ ಓದಿ:-Uttara kannada| ಜಿಲ್ಲೆಯಲ್ಲಿ ಏನು ಸುದ್ದಿ? ವಿವರ ನೋಡಿ.
ಬಾಗಲಕೋಟೆಯಿಂದ ಮಂಗಳೂರಿಗೆ ಈ ಬಸ್ ತೆರಳುತಿದ್ದು ಯಲ್ಲಾಪುರ ಘಟ್ಟದಲ್ಲಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಅಜಾಗುರೂಕತೆಯಿಂದ ಬಂದು ಕೆಟ್ಟು ನಿಂತಿದ್ದ ಕೇರಳ ಮೂಲದ KL-07-DA-1366 ನಂಬರ್ ಲಾರಿ ಗೆ ಗುದ್ದಿದ ಪರಿಣಾಮ ಈ ಘಟನೆ ನೆಡೆದಿದೆ.
ಲಾರಿಯಾತ ಇಂಡಿಕೇಟರ್ ಹಾಕದೆ ಕತ್ತಲೆಯಲ್ಲಿ ರಸ್ತೆಯಂಚಿನಲ್ಲಿ ನಿಲ್ಲಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕ
ಆಲಮಟ್ಟಿ ಗ್ರಾಮದ ಯಮನಪ್ಪ ಮಾಗಿ ಮೇಲೆ ಪ್ರಕರಣ ದಾಖಲಾಗಿದೆ.