Uttara kannda| ಜಿಲ್ಲೆಯ ಹೋಟಲ್ ಗಳಲ್ಲೂ ಪತ್ತೆಯಾಯ್ತು ಪ್ಲಾಸ್ಟಿಕ್ ಇಡ್ಲಿ!
ಉತ್ತರ ಕನ್ನಡ ಜಿಲ್ಲೆಯ ಹೋಟಲ್ ಗಳಲ್ಲೂ ಪತ್ತೆಯಾಯ್ತು ಪ್ಲಾಸ್ಟಿಕ್ ಇಡ್ಲಿ!
ಕಾರವಾರ :- ಹೋಟಲ್ ಗಳಲ್ಲಿ ಇಡ್ಲಿ ಮಾಡಲು ಪ್ಲಾಸ್ಟಿಕ್ ಷೀಟ್ ಗಳನ್ನು ಬಳಸುತಿದ್ದು ಇದರಿಂದ ಕ್ಯಾನ್ಸರ್ ಕಾರಕ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಇದೀಗ ಆರೋಗ್ಯ ಇಲಾಖೆ ಇಂತಹ ಇಡ್ಲಿಗಳ ಮೇಲೆ ನಿಷೇಧ ಹೇರಲು ಮುಂದಾಗಿದೆ.
ಹೋಟಲ್ ನಲ್ಲಿ ಇಡ್ಲಿಗಳು ಮೆದುವಾಗಿ ಬರಲು ಹಾಗೂ ಬೇಯಿಸುವಾಗ ಪಾತ್ರೆಗೆ ಅಂಟದಂತೆ ತಡೆಯಲು ಪ್ಲಾಸ್ಟಿಲ್ ನನ್ನು ಬಳಸುತ್ತಾರೆ. ಇಡ್ಡಿ ಜೊತೆ ಪ್ಲಾಸ್ಟಿಕ್ ಸಹ ಬೇಯುವುದರಿಂದ ಪ್ಲಾಸ್ಟಿಕ್ ನ ಹಾನಿಕಾರಕ ಅಂಶಗಳು ಇಡ್ಲಿಗೆ ಸೇರಿಕೊಳ್ಳುತ್ತವೆ.
ಇದನ್ನೂ ಓದಿ:-Uttara kannda :ಅಂಕೋಲದಲ್ಲಿ ಮಾರ್ಚ 5 ರ ವರೆಗೆ ನಿಷೇದಾಜ್ಞೆ ಜಾರಿ
ಇಂತಹ ಇಡ್ಲಿಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲಬಾರಿಗೆ ಸಾರ್ವಜನಿಕರ ದೂರಿನ ಮೇಲೆ ಶಿರಸಿ(sirsi) ನಗರಸಭೆ ಅಧಿಕಾರಿಗಳು ಹೋಟಲ್ ಗಳ ಮೇಲೆ ದಾಳಿ ಮಾಡಿದ್ದು ಶಿರಸಿ ನಗರದ ನಂದಿನಿ ಹೋಟಲ್ ಗೆ ದಾಳಿ ಮಾಡಿದಾಗ ಪ್ಲಾಸ್ಟಿಕ್ ಬಳಸಿ ಇಡ್ಲಿ ಬೇಯಿಸುವುದು ಪತ್ತೆಯಾಗಿದೆ.
ಈ ಕುರಿತು ಹೋಟಲ್ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ. ಇನ್ನು ಶಿರಸಿ ಯಲ್ಲಲ್ಲದೇ ಹಲವು ಭಾಗದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸಿ ಇಡ್ಲಿ ತೆಯಾರಿಸಲಾಗುತಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.