Railways :ರೈಲ್ವೆ ಇಲಾಖೆ ಪರೀಕ್ಷೆ -ಮಂಗಳಸೂತ್ರ,ಜನಿವಾರಕ್ಕೆ ಕತ್ತರಿ! ಸಂಘಟನೆಗಳ ಆಕ್ರೋಶದ ನಂತರ ಏನಾಯ್ತು?
Railways :ರೈಲ್ವೆ ಇಲಾಖೆ ಪರೀಕ್ಷೆ -ಮಂಗಳಸೂತ್ರ,ಜನಿವಾರಕ್ಕೆ ಕತ್ತರಿ! ಸಂಘಟನೆಗಳ ಆಕ್ರೋಶದ ನಂತರ ಏನಾಯ್ತು?
ಮಂಗಳೂರು:- ರೈಲ್ವೇ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಜನಿವಾರ, ಮಂಗಳಸೂತ್ರಕ್ಕೆ ನಿರ್ಬಂಧ ವನ್ನು ಮಾಡಿ ಕೇಂದ್ರ ಸರ್ಕಾರದ ಸಾಮ್ಯದ ರೈಲ್ವೆ ಇಲಾಖೆ ಆದೇಶಿಸಿತ್ತು. ಈ ವಿಷಯ ಹಿಂದೂ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದ್ದು ಕೊನೆಗೆ ಎಚ್ಚೆತ್ತ ಇಲಾಖೆ ನಿರ್ಬಂಧ ಆದೇಶವನ್ನು ಮರಳಿ ಪಡೆದಿದೆ.
ಈ ಕುರಿತು ರೈಲ್ವೇ ನೇಮಕಾತಿ ಮಂಡಳಿಗಳಿಗೆ ಆದೇಶ ಹೊರಡಿಸಿದ ರೈಲ್ವೇ ಸಚಿವಾಲಯ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ತಿದ್ದುಪಡಿ ಮಾಡಿ ರೈಲ್ವೇ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ.
ವಿವಾದದ ಬೆನ್ನಲ್ಲೇ ಸಚಿವ ಸೋಮಣ್ಣ ಸೂಚನೆ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕಾಲ್ ಲೆಟರ್‌ನಲ್ಲಿ ಇರುವ ಪ್ಯಾರಾ 7ರ ಸೂಚನೆಗಳ ತಿದ್ದುಪಡಿ ಮಾಡಿದ್ದು , ಲೋಹದ ಆಭರಣಗಳು, ಧಾರ್ಮಿಕ ಚಿಹ್ನೆಗಳು,ಆಭರಣಗಳು,ಜನಿವಾರ,ಮಂಗಳಸೂತ್ರ,ಬ್ರೇಸ್‌ಲೆಟ್ ಧರಿಸಲು ಅನುಮತಿ ನೀಡಿದೆ.
ಇದನ್ನೂ ಓದಿ:-Train news: ನದಿಯ ಸೇತುವೆ ಮೇಲೆ ನಿಂತ ಇಂಟರ್ ಸಿಟಿ ರೈಲು ! ಆಗಿದ್ದೇನು?
ಕಾಲ್ ಲೆಟರ್‌ನಲ್ಲಿ ಸೂಕ್ತ ಪ್ರಸ್ತಾಪದೊಂದಿಗೆ ಪರೀಕ್ಷಾ ಹಾಲ್‌ಗೆ ಅನುಮತಿ ನೀಡಲಾಗಿದ್ದು ,ಪರೀಕ್ಷಾ ಮೇಲ್ವಿಚಾರಕರು ಅಂತಹ ಅಭ್ಯರ್ಥಿಗಳ ಮೇಲೆ ಹೆಚ್ಚು ಜಾಗರೂಕತೆ ವಹಿಸಲು ಸೂಚನೆ ಸಹ ನೀಡಿದೆ.
ಬದಲಾದ ಆದೇಶ ಪ್ರತಿ:-