Uttara kannda ಈ ಗೋ ಕಳ್ಳರನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ

ಕಾರವಾರ :- ಜನವರಿ 19 ರಂದು ಉತ್ತರ ಕನ್ನಡ ಜಿಲ್ಲೆಯ(uttara kannda) ಹೊನ್ನಾವರ (honnavara)ತಾಲೂಕಿನ ಸಾಲಕೋಡು ಗ್ರಾಮದ ಅರಣ್ಯದಲ್ಲಿ ಗರ್ಭ ಧರಿಸಿದ್ದ ಗೋವನ್ನು ಕಡಿದು ತಲೆ ,ಕಾಲುಗಳನ್ನು ಅಲ್ಲಿಯೇ ಬಿಟ್ಟು ಮಾಂಸ ಕದ್ದೊಯ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಇದರ ಬೆನ್ನಲ್ಲೇ ಪ್ರಮುಖ ಇಬ್ಬರು ಆರೋಪಿಗಳಿಗಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಆರು ತಂಡಗಳನ್ನು ಮಾಡಿ ಹುಡುಕುತ್ತಿದೆ. ಆದರೇ ಈ ಚಾಲಾಕಿ ಕಳ್ಳರು ತಲೆಮರಿಸಿಕೊಂಡಿದ್ದು ಇವರನ್ನು ಹುಡುಕಿಕೊಟ್ಟರೇ ತಲಾ 50 ಸಾವಿರ ಬಹುಮಾನ ಘೋಷಣೆಯನ್ನು ಎಸ್.ಪಿ ಎಂ ನಾರಾಯಣ್ ಮಾಡಿದ್ದರು.
ಇದನ್ನೂ ಓದಿ:-Honnavara ಗರ್ಭಿಣಿ ಆಕಳು ರುಂಡ ,ಕಾಲು ಕಡಿದು ,ಕರುಹತ್ಯೆ ಮಾಡಿದ ದುರುಳರು!
ಹೊನ್ನಾವರದ ವಸಿಮ್, ಮುಜಾಮಿಲ್ ಎಂಬ ಗೋಕಳ್ಳರ ತಲೆಗೆ ಇದೀಗ ಪೊಲೀಸರು ತಲಾ 50 ಸಾವಿರ ಬಹುಮಾನ ಘೋಷಣೆ ಮಾಡಿದ್ದು ಈ ಇಬ್ಬರ ಸುಳಿವು ಹಾಗೂ ಹಿಡಿದುಕೊಟ್ಟಲ್ಲಿ ಒಟ್ಟು ಒಂದು ಲಕ್ಷ ಬಹುಮಾನ ನೀಡಲಿದೆ.

ಇದನ್ನೂ ಓದಿ:-Kumbhamela ಮೇಳದಲ್ಲಿ ಮಿಂಚುತ್ತಿರೋ ಈ ಬ್ಯೂಟಿಫುಲ್ ಸಾಧ್ವಿಯಾರು ಗೊತ್ತಾ?
ಈ ಇಬ್ಬರು ಗೋ ಕಳ್ಳತನದ ಕಿಂಗ್ ಪಿನ್ ಆಗಿದ್ದು ಜಿಲ್ಲೆಯಲ್ಲಿ ನಡೆದ ಗೋಹತ್ಯೆಯಲ್ಲಿ ಇವರ ಕೈ ಇದ್ದು ಗೋಮಾಂಸ ಸಾಗಾಟದ ದೊಡ್ಡ ಜಾಲ ಹೊಂದಿದ್ದಾರೆ.