Sagar| ಕುಡಿದ ಮತ್ತಲೆ ನಗರಸಭೆ ಆಯುಕ್ತ ನಾಗಪ್ಪನ ಸೊಂಟದ ಕೆಳಗಿನ ಬೈಗುಳದ ಹುಚ್ಚಾಟ!
Sagar| ಕುಡಿದ ಮತ್ತಲೆ ನಗರಸಭೆ ಆಯುಕ್ತ ನಾಗಪ್ಪನ ಸೊಂಟದ ಕೆಳಗಿನ ಬೈಗುಳದ ಹುಚ್ಚಾಟ!
Shivamogga (03 November2025):- ಕುಡಿದ ಮತ್ತಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ಆಯುಕ್ತ ನಾಗಪ್ಪ ಬೀದಿ ಬದಿ ವ್ಯಾಪಾರಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಘಟನೆ ನಡೆದಿದೆ.
ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಸಾಗರದ (sagar)ರಾಣಿ ಚನ್ನಮ್ಮ ವೃತ್ತದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ಹಿನ್ನಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಲು ತಿಳಿಸಲಾಗಿತ್ತು.
Sagar Marikamba Devi Jatre 2026| ಯಾವಾಗ ಏನೆಲ್ಲಾ ಕಾರ್ಯಕ್ರಮ ವಿವರ ನೋಡಿ.
ಈ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆಗೆ ಕುಡಿದ ಮತ್ತಿನಲ್ಲಿ ಬಂದ ನಗರಸಭೆ ಪ್ರಬಾರ ಆಯುಕ್ತ ನಾಗಪ್ಪ ಅಲ್ಲಿದ್ದ ಬೀದಿ ಬದಿ ವ್ಯಾಪಾರಿಯನ್ನು ಗುರಿಯಾಗಿಸಿ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ . ಸ್ಥಳೀಯರಾಗಿರುವ ಮಹಾದೇವಪ್ಪನವರು ಈ ಬಗ್ಗೆ ಪ್ರಶ್ನೆ ಮಾಡಿದ್ದು ಅವರಿಗೂ ಕೆಟ್ಟ ಶಬ್ದದಲ್ಲಿ ಬೈದಿದ್ದಲ್ಲದೇ ಬೀದಿ ಬದಿ ವ್ಯಾಪಾರಿಗಳನ್ನು ಕುತ್ತಿಗೆ ಹಿಡಿದು ಹೊರದಬ್ಬುವ ಬೆದರಿಕೆ ಹಾಕಿದ್ದಾನೆ.
ಈತ ನಗರಸಭೆ ಪ್ರಬಾರ ಆಯುಕ್ತನಾಗಿದ್ದು ಸಾಗರದ ಕುಗ್ವೆ ಗ್ರಾಮದವನು. ಸ್ಥಳೀಯನಾಗಿದ್ದು ಕಳೆದ 15 ವರ್ಷದಿಂದ ಜಾತಿ ಕಾರಣದಿಂದ ಸಾಗರದಲ್ಲೇ ಗೂಟ ಹೊಡೆದುಕೊಂಡಿದ್ದಾನೆ.
Shivamogga | ಮನೆ ಕಳ್ಳತನ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು
ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರು ,ಮಾಜಿ ಶಾಸಕರ ಹರತಾಳು ಹಾಲಪ್ಪ ನವರ ಆಪ್ತನಾಗಿರುವ ಈತ ಮಾಡಿದ್ದೇ ಕಾನೂನು ಎನ್ನುವಂತಾಗಿದೆ ಎಂಬುದು ಸ್ಥಳೀಯರ ಆರೋಪ. ಇನ್ನು ಈ ಭಾಗದಲ್ಲಿ ಇರುವ ಬೀದಿ ಬದಿ ವ್ಯಾಪಾರಿಗಳಲ್ಲಿ ದಲಿತರೇ ಇದ್ದು ಹೀಗೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಕ್ಕೆ ಖಂಡನೆ ವ್ಯಕ್ತವಾಗಿದೆ.