Siddapura ಮದ್ಯಕುಡಿದವನ ಪುಂಡಾಟ|ಸತ್ತವರೆಷ್ಟು ? ಗಾಯಗೊಂಡವರು ಯಾರು?
Siddapura news :- ಮದ್ಯ ಸೇವಿಸಿ ಅಯಪ್ಪಸ್ವಾಮಿ ದೇವಸ್ಥಾನದ ಜಾತ್ರೆಗೆ ಸೇರಿದ್ದ ಭಕ್ತರ ಮೇಲೆ ಕಾರು ಚಲಾಯಿಸಿ ಸರಣಿ ಅಪಘಾತ ಪಡಿಸಿ ಓರ್ವ ಯುವತಿ ಸಾವಿಗೆ ಹಾಗೂ ಎಂಟು ಜನರಿಗೆ ಗಂಭೀರ ಗಾಯಪಡಿಸಿದ ಘಟನೆ
ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ರವೀಂದ್ರ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸಿದ್ಧಾಪುರ ಕವಲಕೊಪ್ಪದ ದೀಪಾ ರಾಮಗೊಂಡ (21) ಸಾವಿಗೀಡಾದ ಯುವತಿಯಾಗಿದ್ದು , ಸಿದ್ದಾಪುರದ ಕಲ್ಪನಾ, ಜಾನಕಿ, ಚೈತ್ರಾ, ಜ್ಯೋತಿ, ಮಾದೇವಿ, ಗೌರಿ, ರಾಮಪ್ಪ ಹಾಗೂ ಗಜನಾನ ಭಟ್ ಅವರಿಗೆ ಗಂಭೀರ ಗಾಯಗಳಗಾದವರಾಗಿದ್ದಾರೆ.
ಇದನ್ನೂ ಓದಿ:-Siddapura ಜಾತ್ರೆಯಲ್ಲಿ ಜನರ ಮೇಲೆ ನುಗ್ಗಿದ ಕಾರು ಓರ್ವ ಮಹಿಳೆ ಸಾವು 9ಕ್ಕೂ ಹೆಚ್ಚು ಜನರಿಗೆ ಗಾಯ
ಸಿದ್ದಾಪುರದ ರೋಶನ್ ಫೆರ್ನಾಂಡೀಸ್ ಮದ್ಯ ಸೇವಿಸಿ ಕಾರು ಚಲಾಯಿಸಿ ಅಪಘಾತ ಪಡಿಸಿದ ವ್ಯಕ್ತಿಯಾಗಿದ್ದು ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡವರಿಗೆ ಸಿದ್ಧಾಪುರ(siddapura) ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದ್ದು ಈ ಪೈಕಿ ಗಂಭೀರ ಗಾಯಗೊಂಡ ಕಲ್ಪನಾ ನಾಯ್ಕ್ ಹಾಗೂ ಇನ್ನೋರ್ವ ಮಹಿಳೆಯನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆ ಏನು?.

ಮಕರ ಸಂಕ್ರಾಂತಿ ನಿಮಿತ್ತ ಸಿದ್ಧಾಪುರದ ರವೀಂದ್ರ ನಗರದಲ್ಲಿ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸ ನಡೆದಿದ್ದು ನೂರಾರು ಭಕ್ತರು ಭಾಗಿಯಾಗಿದ್ದರು . ಈ ವೇಳೆ ರೋಷನ್ ಎಂಬಾತ ಕುಡಿದ ಮತ್ತಿನಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸಿ ಜಾತ್ರೆಗೆ ಸೇರಿದ್ದ ಭಕ್ತರ ಮೇಲೆ ತನ್ನ ಇಕೋ ಸ್ಪೋರ್ಟ್ಸ್ ಕಾರನ್ನು ಹತ್ತಿಸಿದ್ದಾನೆ. ನಂತರ ವಾಹನ ಸಮೇತ ಪರಾರಿಯಾಗುತಿದ್ದು ,ಈವೇಳೆ ಉದ್ರಿಕ್ತ ಜನರು ವಾಹನಕ್ಕೆ ಕಲ್ಲುತೂರಾಟ ನಡೆಸಿ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.