Siddapura| ಪ್ರವಾಸಿಗರ ಬಸ್ ಪಲ್ಟಿ | 19 ಜನರಿಗೆ ಗಾಯ
Siddapura| ಪ್ರವಾಸಿಗರ ಬಸ್ ಪಲ್ಟಿ | 19 ಜನರಿಗೆ ಗಾಯ
ಸಿದ್ದಾಪುರ /ಸಾಗರ (october19):- ಪ್ರವಾಸಿಗರ ಬಸ್ ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬಿದ್ದ ಪರಿಣಾಮ, ಸುಮಾರು 18 ಜನರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapur)ತಾಲೂಕಿನ ಜೋಗಿನ ಮಠ ಬಳಿ ನಡೆದಿದೆ. ಈ ಭಾಗ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಸಮೀಪವಿದ್ದು ಉತ್ತರ ಕನ್ನಡ ಜಿಲ್ಲೆಯ ಗಡಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ 45 ಜನರಿದ್ದ ಪ್ರವಾಸಿಗರ ತಂಡವು, ಖಾಸಗಿ ಬಸ್ ನಲ್ಲಿ ಪ್ರವಾಸಕ್ಕೆ ಆಗಮಿಸಿತ್ತು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ನಂತರ, ವಡನಬೈಲ್ ನ ಬಳೆಪದ್ಮಾವತಿ ಅಮ್ಮನವರ ದೇವಾಲಯಕ್ಕೆ ತೆರಳುತ್ತಿದ್ದರು.
Sagar Marikamba Devi Jatre 2026| ಯಾವಾಗ ಏನೆಲ್ಲಾ ಕಾರ್ಯಕ್ರಮ ವಿವರ ನೋಡಿ.
ಈ ವೇಳೆ ಬಸ್ ಬ್ರೇಕ್ ಫೇಲ್ ಆಗಿ ಪಲ್ಟಿಯಾಗಿ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಹಾಗೂ ಸಾಗರ ತಾಲೂಕಿನ ಕಾರ್ಗಲ್ ಠಾಣೆ ಪೊಲೀಸರು ಗಾಯಾಳುಗಳ ನೆರವಿಗೆ ಧಾವಿಸಿ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳುಗಳು ರತ್ನಮ್ಮ (50), ಗಮ್ಯಶ್ರೀ (11), ಸುಶೀಲಾ (45), ನಾರಾಯಣಪ್ಪ (72), ಸುಮಿತ್ ಕುಮಾರ್ (38), ಸುಬ್ಬಲಕ್ಷ್ಮಿ(29), ರೋಹಿತ್ ( 20), ನವೀನ (12), ಸಾವಿತ್ರಿ (36), ವಿದ್ಯಾ ರಾಣಿ (34), ಜ್ಯೋತಿ (32), ಪುಷ್ಪಾವತಿ (48), ಲಕ್ಷ್ಮಿ (50), ಗಂಗಮ್ಮ (65), ಮದನ್ (14), ಗೌತಮ್ (30), ಶಕುಂತಲಾ (34) ಗಾಯಗೊಂಡವರೆಂದು ಗುರುತಿಸಲಾಗಿದ್ದು ಉಳಿದವರ ಮಾಹಿತಿ ಲಭ್ಯವಾಗಬೇಕೆದಿ.ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

And for orders more than 2499 rs 15% discount ( for Deepavali)We also take birthday parties and family get together etc also
