ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi: ಮದ್ಯ ಸೇವಿಸಿ ಸಹೋದರ ಜಗಳ ಸುತ್ತಿಗೆಯ ಹೊಡೆತಕ್ಕೆ ಅಣ್ಣ ಸಾವು

ಶಿರಸಿ:ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಮ್ಮನೇ ಅಣ್ಣನನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ತಾಲೂಕಿನ ಹುತ್ತಾರ್‌ನಲ್ಲಿ ನಡೆದಿದೆ.
06:36 PM Mar 17, 2025 IST | ಶುಭಸಾಗರ್

Sirsi: ಮದ್ಯ ಸೇವಿಸಿ ಸಹೋದರ ಜಗಳ ಸುತ್ತಿಗೆಯ ಹೊಡೆತಕ್ಕೆ ಅಣ್ಣ ಸಾವು

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಶಿರಸಿ:ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಮ್ಮನೇ ಅಣ್ಣನನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ತಾಲೂಕಿನ ಹುತ್ತಾರ್‌ನಲ್ಲಿ ನಡೆದಿದೆ.

ತ್ಯಾಗರಾಜ ಗಣಪತಿ ಮುಕ್ರಿ (30) ಕೊಲೆಯಾದ ಸಹೋದರನಾಗಿದ್ದು, ಶಿವರಾಜ ಗಣಪತಿ ಮುಕ್ರಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಇದನ್ನೂ ಓದಿ:-Lokayukta ride|ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉನ್ನತ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ.

Advertisement

ಮದ್ಯ ಸೇವಿಸಿ ಬಂದಿದ್ದ ಶಿವರಾಜ್ ಮನೆಯಲ್ಲಿ ಗಲಾಟೆ ತೆಗೆದಿದ್ದು ಈ ವೇಳೆ ಮನೆಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಹಾಕಿದ್ದನು. ಯಾಕೆ ಹೀಗೆ ಗಲಾಟೆ ಮಾಡುತ್ತೀಯ ಕಾರಿನ ಗಾಜು ಒಡೆದಿದ್ದು ಏಕೆ ಎಂದು ಅಣ್ಣ ಗಣಪತಿ ಮುಕ್ರಿ ಕೇಳಿದ್ದಾನೆ.

ಇದನ್ನೂ ಓದಿ:-Sirsi: ಅಕ್ರಮ ಜಾನುವಾರು ಸಾಗಾಟ:ಇಬ್ಬರ ಬಂಧನ

ಇದಕ್ಕೆ ಸಿಟ್ಟಾದ ಶಿವರಾಜ್ ಅಲ್ಲೇ ಇದ್ದ ಸುತ್ತಿಗೆಯನ್ನು ಬೀಸಿ ಅಣ್ಣನ ತಲೆಗೆ ಭಲವಾಗಿ ಹೊಡೆದಿದ್ದು ತೀವ್ರವಾಗಿ ಗಾಯಗೊಂಡ ತ್ಯಾಗರಾಜನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರಕಾರಿ ಆಸ್ಪತ್ರೆಯಲ್ಲಿ ತ್ಯಾಗರಾಜ ಮೃತಪಟ್ಟಿದ್ದಾನೆ.

 ಇನ್ನು ಗಲಾಟೆ ತಪ್ಪಿಸಲು ಬಂದ ತ್ಯಾಗರಾಜು ಪತ್ನಿ  ಹೇಮಾವತಿ ಮುಕ್ರಿ ಹಾಗು ರೋಹಿತ ಮಂಜುನಾಥ ಮುಕ್ರಿ ಮೇಲೂ ಶಿವರಾಜ ಹಲ್ಲೆ ನಡೆಸಿದ್ದಾನೆ.

ಇನ್ನು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದು , ಕ್ಷುಲ್ಲಕ ಕಾರಣದ ಸಿಟ್ಟು ಒಂದು ಪ್ರಾಣವನ್ನೇ ತೆಗೆದಿರುವುದು ಮಾತ್ರ ದುರಂತ.

 

Advertisement
Tags :
CrimeDrunkenBrawl TragicIncidentFamilyDisputePolice newsSirsi
Advertisement
Next Article
Advertisement