ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi:ಬಂಗಾರದ ಅಂಗಡಿ ಹಾಗೂ ಮನೆಗೆ ಕನ್ನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಕಾರವಾರ:- ಶಿರಸಿ ತಾಲ್ಲೂಕಿನ ದಾಸನಕೊಪ್ಪದಲ್ಲಿ ತಡರಾತ್ರಿ ಸಂಭವಿಸಿದ ಕಳ್ಳತನದಿಂದ, ಬಂಗಾರದ ಅಂಗಡಿಯೊಂದಿಗೆ ಹತ್ತಿರದ ಮನೆಗೂ ಕಳ್ಳರು ಪ್ರವೇಶಿಸಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.
10:47 PM Jul 13, 2025 IST | ಶುಭಸಾಗರ್
ಕಾರವಾರ:- ಶಿರಸಿ ತಾಲ್ಲೂಕಿನ ದಾಸನಕೊಪ್ಪದಲ್ಲಿ ತಡರಾತ್ರಿ ಸಂಭವಿಸಿದ ಕಳ್ಳತನದಿಂದ, ಬಂಗಾರದ ಅಂಗಡಿಯೊಂದಿಗೆ ಹತ್ತಿರದ ಮನೆಗೂ ಕಳ್ಳರು ಪ್ರವೇಶಿಸಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.

ಬಂಗಾರದ ಅಂಗಡಿ ಹಾಗೂ ಮನೆಗೆ ಕನ್ನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

Advertisement

ಕಾರವಾರ:- ಶಿರಸಿ(sirsi) ತಾಲ್ಲೂಕಿನ ದಾಸನಕೊಪ್ಪದಲ್ಲಿ ತಡರಾತ್ರಿ ಸಂಭವಿಸಿದ ಕಳ್ಳತನದಿಂದ, ಬಂಗಾರದ ಅಂಗಡಿಯೊಂದಿಗೆ ಹತ್ತಿರದ ಮನೆಗೂ ಕಳ್ಳರು ಪ್ರವೇಶಿಸಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.

ಇದನ್ನೂ ಓದಿ:-Sirsi:ಅಳಿಯನಿಂದಲೇ ಅತ್ತೆಯ ಕೊಲೆ-ಆಸ್ತಿ ಜಗಳದಲ್ಲಿ ಹೋಯ್ತು ವೃದ್ದೆಯ ಪ್ರಾಣ

ದಾಸನಕೊಪ್ಪ ಗ್ರಾಮದ ಜೀವನ ಚಂದ್ರಹಾಸ ಶೇಟ್ ಅವರಿಗೆ ಸೇರಿದ 'ವಿಘ್ನೇಶ್ವರ ಜ್ಯುವೆಲ್ಲರ್ಸ್' ಎಂಬ ಬಂಗಾರದ ಅಂಗಡಿಯಲ್ಲಿ ಕಳ್ಳರು ದಾಳಿ ನಡೆಸಿದ್ದು, ಅಂಗಡಿಯ ಕೌಂಟರ್‌ನಲ್ಲಿ ಇಡಲಾಗಿದ್ದ ಸುಮಾರು 1.20 ಲಕ್ಷ ಮೌಲ್ಯದ ಬಂಗಾರದ ಮೂಗಿನ ಬೊಟ್ಟುಗಳನ್ನು ಕದ್ದೊಯ್ದಿದ್ದಾರೆ. ಜೊತೆಗೆ, 18 ಸಾವಿರ ಮೌಲ್ಯದ 200 ಗ್ರಾಂ ಬೆಳ್ಳಿಯ ಕಾಲು ಗುಂಡು, 13,500 ಮೌಲ್ಯದ 150 ಗ್ರಾಂ ಕಾಲು ಪಿಲ್ಲಿ, 40,500 ಮೌಲ್ಯದ 450 ಗ್ರಾಂ ಕಾಲು ಸುತ್ತು ಹಾಗೂ 45 ಸಾವಿರ ಮೌಲ್ಯದ 750 ಗ್ರಾಂ ಹಳೆಯ ಬೆಳ್ಳಿಯ ಆಭರಣಗಳನ್ನು ದೋಚಲಾಗಿದೆ.

Advertisement

ಇದೇ ವೇಳೆ, ಅಂಗಡಿಗೆ ತಗುಲಿರುವ ದತ್ತಾತ್ರೇಯ ದೇವಪ್ಪ ಶೇಟ್ ಅವರ ಮನೆಯಲ್ಲಿಯೂ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ಚಿನ್ನಾಭರಣಗಳನ್ನೂ ಕಳ್ಳರು ದೋಚಿರುವ ಮಾಹಿತಿ ಲಭ್ಯವಾಗಿದೆ.

ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Advertisement
Tags :
feedKarnatakKarwarNewsSirsiTheftUttara Kannada
Advertisement
Next Article
Advertisement