Sirsi : ಮಹಿಳೆ ಜೊತೆ ಅನುಚಿತ ವರ್ತನೆ ಆರೋಪ -ಉದ್ಯಮಿ ಯಶೋಧರ ನಾಯ್ಕ ವಿರುದ್ಧ ಪ್ರಕರಣ ದಾಖಲು
Sirsi : ಮಹಿಳೆ ಜೊತೆ ಅನುಚಿತ ವರ್ತನೆ ಆರೋಪ -ಉದ್ಯಮಿ ಯಶೋಧರ ನಾಯ್ಕ ವಿರುದ್ಧ ಪ್ರಕರಣ ದಾಖಲು
ಶಿರಸಿ: ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಕಾಂಗ್ರೆಸ್ (congress) ಮುಖಂಡ ಹಾಗೂ ಉದ್ಯಮಿ ಯಶೋಧರ ನಾಯ್ಕ ಟ್ರಸ್ಟ್ ಅಧ್ಯಕ್ಷ ಯಶೋಧರ ಗಣಪ ನಾಯ್ಕ ವಿರುದ್ಧ ಶಿರಸಿಯ 1 ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ (police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಸಿಯಲ್ಲಿರುವ ಯಶೋಧರ ನಾಯ್ಕ ಟ್ರಸ್ಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದೂರು ನೀಡಿದ್ದು , ಆಕೆ ನೀಡಿದ ದೂರಿನಂತೆ ತನಗೆ ಅಂಗಾಂಗ ಮುಟ್ಟುವುದನ್ನು ಮಾಡುತ್ತಿದ್ದ ಯಶೋಧರ ನಾಯ್ಕ ವರ್ತನೆಯನ್ನು ವಿರೋಧಿಸಿದಾಗ ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಲ್ಲದೇ, ತನ್ನ ಮೊಬೈಲ್‌ಗೆ ದೂರವಾಣಿ ಕರೆ ಮಾಡಿ ಅಸಂಬದ್ಧ ಮಾತನಾಡಿದಾಗ ಅದನ್ನು ವಿರೋಧಿಸಿದಾಗ ತನ್ನ ಮೇಲೆ
ಹಣದ ಅಪವಾದ ಹಾಕಿ ಕೆಲಸದಿಂದ ತೆಗೆಯುತ್ತೇನೆ ಮತ್ತು ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಸಿದ್ದಾನೆ ಎಂದು ನೋಂದ ಮಹಿಳೆಯು ಶಿರಸಿಯ 1 ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಎಪ್ರಿಲ್ 1 ರಂದು ಖಾಸಗಿ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ:-KGF ನಟಿಯ ಹಾಟ್ ಲುಕ್ ಗೆ ನೆಟ್ಟಿಗರು ಫಿದಾ:ನನ್ನ ಪ್ರಯತ್ನ ವ್ಯರ್ಥ ಮಾಡಬೇಡಿ ಅಂದ್ಲು ನಟಿ!
ವಿಚಾರಣೆ ನಡೆಸಿದ ನ್ಯಾಯಾಲಯವು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶ ನೀಡಿದ ಹಿನ್ನೆಲೆ ಪಿಎಸ್‌ಐ ರತ್ನಾ ಕುರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇನ್ನೂ ದೂರು ನೀಡಿದ ಮಹಿಳೆ ಮೇಲೆ ಸಹ ಈ ಹಿಂದೆ ಸಂಘದ ಹಣ ದುರುಪಯೋಗ ಮಾಡಿಕೊಂಡ ಪ್ರಕರಣ ಸಂಬಂಧ ಶಿರಸಿ ಹಾಗೂ ಕುಮಟಾ ಠಾಣೆಯಲ್ಲಿ ಯಶೋಧರ್ ನಾಯ್ಕ ರವರು ಈ ಹಿಂದೆಯೇ ದೂರು ನೀಡಿದ್ದು ಈಕೆ ಸಂಘದ ಹಣವನ್ನು ದುರುಪಯೋಗ ಪಡಿಸಿಕೊಂಡು ಇದೀಗ ಯಶೋಧರ ನಾಯ್ಕ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗಿದ್ದು ,ತನಿಖೆ ನಂತರ ಸತ್ಯಾಸತ್ಯತೆ ಹೊರಬರಬೇಕಿದೆ.