For the best experience, open
https://m.kannadavani.news
on your mobile browser.
Advertisement

Sirsi| ಶಿರಸಿ ದೇವಸ್ಥಾನದ ಕಳ್ಳರ ಬಂಧನ | ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶ.

ಶಿರಸಿ(sirsi) ಚೌಡೇಶ್ವರಿ ದೇವಾಲಯದ ಕಳ್ಳತನ ಪ್ರಕರಣ ಬಗೆಹರಿಸಿದ ಪೊಲೀಸರು ಇಬ್ಬರನ್ನು ಬಂಧಿಸಿ ₹2 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಭರಣ, ನಗದು ವಶಪಡಿಸಿಕೊಂಡಿದ್ದಾರೆ.
12:34 PM Oct 18, 2025 IST | ಶುಭಸಾಗರ್
ಶಿರಸಿ(sirsi) ಚೌಡೇಶ್ವರಿ ದೇವಾಲಯದ ಕಳ್ಳತನ ಪ್ರಕರಣ ಬಗೆಹರಿಸಿದ ಪೊಲೀಸರು ಇಬ್ಬರನ್ನು ಬಂಧಿಸಿ ₹2 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಭರಣ, ನಗದು ವಶಪಡಿಸಿಕೊಂಡಿದ್ದಾರೆ.
sirsi  ಶಿರಸಿ ದೇವಸ್ಥಾನದ ಕಳ್ಳರ ಬಂಧನ   ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶ

Sirsi| ಶಿರಸಿ ದೇವಸ್ಥಾನದ ಕಳ್ಳರ ಬಂಧನ | ಲಕ್ಷಾಂತರ ಮೌಲ್ಯದ ಸ್ವತ್ತುಗಳು ವಶ.

10% discount for Deepavali
And for orders more than 2499 rs 15% discount ( for Deepavali),We also take birthday parties and family get together etc also

ಶಿರಸಿ(october 18):- ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನವನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು , ಇಬ್ಬರನ್ನು ಬಂಧಿಸಿ ಎರಡು ಲಕ್ಷಕ್ಕೂ ಹೆಚ್ಚು ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಶಿರಸಿಯ (sirsi)ದೇವಿಕೆರೆ ರಸ್ತೆ, ಪಡ್ತಿಗಲ್ಲಿ, ಭೂತಪ್ಪನ ಕಟ್ಟೆ ಹತ್ತಿರದ ಚೌಡೇಶ್ವರಿ ದೇವಾಸ್ಥಾನದದಲ್ಲಿ 17-10-2025 ರಂದು ಕಳ್ಳತನವಾದ ಕುರಿತು ಪರಶುರಾಮ ಎಂಬುವವರು ಶ್ರೀ ಚೌಡೇಶ್ವರಿ ದೇವಸ್ಥಾನದ ಸ್ಟೀಲಿನ ಬಾಗಿಲನ್ನು ಮುರಿದು, ದೇವರ ಮೂರ್ತಿಯ  ಮೇಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣ ಸೇರಿದಂತೆ ಒಟ್ಟೂ ₹2.31.400 ಮೌಲ್ಯದ ಆಭರಣಗಳನ್ನು ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ನಗದು ಹಣ ₹80,000/-ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು.

Sirsi| ಬಾಯಿ ಚಪಲ,ಕಾಡುಹಂದಿ ,ಆಮೆ ಮಾಂಸ ತಿಂದು ಸಿಕ್ಕಿಬಿದ್ದ ಆರೋಪಿ| ಉಳಿದವರು ಪರಾರಿ

ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ಗುನ್ನಾ ನಂ. 141/2025 ಕಲಂ: 331(4) 305 ಬಿ.ಎನ್.ಎಸ್-2023 ನಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿ.ವೈ.ಎಸ್.ಪಿ ಗೀತಾ ಪಾಟೀಲ್, ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಶಶಿಕಾಂತ ರವರ ಸೂಚನೆಯಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ  ಸಂತೋಷಕುಮಾರ ಎಮ್. ರವರ ನೇತ್ರತ್ವದಲ್ಲಿ  ಕಾರ್ಯಾಚರಣೆ ನಡೆಸಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಆರೋಪಿತರಾದ ಬಾಲಕುಮಾರ, ಮಹಮ್ಮದ್ ಅಲಿ ಇವರನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ
ಮನೆಗೆ ಚಂದದ ಪೀಟೋಪಕರಣಕ್ಕಾಗಿ ಭೇಟಿ ನೀಡಿ.

ಬಂಧಿತ ಆರೋಪಿತರಿಂದ ಸುಮಾರು ₹1,50,000 ಮೌಲ್ಯದ ಬೆಳ್ಳಿಯ ಆಭರಣ ಹಾಗೂ ₹60,000 ನಗದು ಹಣ ಜಪ್ತ ಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಸದ್ರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂಧಿಯವರಿಗೆ ಪೊಲೀಸ್ ಅಧೀಕ್ಷಕರಾದ ದೀಪನ್, ಎಂ.ಎನ್. ಐ.ಪಿ.ಎಸ್ ರವರು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ