ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Navy :ಹಿಂದು ಮಹಾಸಾಗರ ದಲ್ಲಿ 9 ಮಿತ್ರ ರಾಷ್ಟ್ರದೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಕಾರವಾರ ದಲ್ಲಿ ಚಾಲನೆ

ಕಾರವಾರ :- ಹಿಂದೂ ಮಹಾ ಸಾಗರದಲ್ಲಿ ವೈರಿ ರಾಷ್ಟ್ರ ಚೀನಾವು ತನ್ನ ಪ್ರಾಭಲ್ಯ ಮೆರೆಯಲು ಸಜ್ಜಾಗಿರುವ ಬೆನ್ನಲ್ಲೆ ಭಾರತ ಹೊಸ ಹೆಜ್ಜೆಯನ್ನು ಇಟ್ಟಿದ್ದು 9 ಮಿತ್ರ ರಾಷ್ಟ್ರಗಳನ್ನು ಸೇರಿಸಿಕೊಂಡು ತನ್ನ ನಾಯಕತ್ವದಲ್ಲಿ ಭದ್ರತೆ ಮತ್ತು ಅಭಿವೃದ್ಧಿ ಎಲ್ಲಾ ವಲಯಕ್ಕೆ ಎಂಬ ಧ್ಯೇಯ ವಾಕ್ಯದಲ್ಲಿ ಒಂದು ಸಮುದ್ರ
02:47 PM Apr 05, 2025 IST | ಶುಭಸಾಗರ್

Navy :ಹಿಂದು ಮಹಾಸಾಗರ ದಲ್ಲಿ 9 ಮಿತ್ರ ರಾಷ್ಟ್ರದೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಕಾರವಾರ ದಲ್ಲಿ ಚಾಲನೆ

Advertisement

ಕಾರವಾರ :- ಹಿಂದೂ ಮಹಾ ಸಾಗರದಲ್ಲಿ ವೈರಿ ರಾಷ್ಟ್ರ ಚೀನಾವು ತನ್ನ ಪ್ರಾಭಲ್ಯ ಮೆರೆಯಲು ಸಜ್ಜಾಗಿರುವ ಬೆನ್ನಲ್ಲೆ ಭಾರತ ಹೊಸ ಹೆಜ್ಜೆಯನ್ನು ಇಟ್ಟಿದ್ದು 9 ಮಿತ್ರ ರಾಷ್ಟ್ರಗಳನ್ನು ಸೇರಿಸಿಕೊಂಡು ತನ್ನ ನಾಯಕತ್ವದಲ್ಲಿ ಭದ್ರತೆ ಮತ್ತು ಅಭಿವೃದ್ಧಿ ಎಲ್ಲಾ ವಲಯಕ್ಕೆ ಎಂಬ ಧ್ಯೇಯ ವಾಕ್ಯದಲ್ಲಿ  ಒಂದು ಸಮುದ್ರ ಒಂದು ಮಿಶನ್  ನಡಿಯಲ್ಲಿ  ಹಿಂದೂ ಮಹಾಸಾಗರದಲ್ಲಿ ಇಂದಿನಿಂದ ಕಾರ್ಯಾಚರಣೆಗಿಳಿದಿದೆ.

Rajnath sing

ಮಿತ್ರ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಹಿಂದು ಮಹಾಸಾಗರ ವಲಯ ರಕ್ಷಣಾ ಕಾರ್ಯಾಚರಣೆ ನಡೆಸುವ ಭಾರತದ ಮಹತ್ವದ ಹೊಸ ಹೆಜ್ಜೆಗೆ ರಾಷ್ಟ್ರೀಯ ಸಾಗರ ದಿನವಾದ ಇಂದು ಚಾಲನೆ ದೊರೆತಿದೆ.

ಹಿಂದು ಮಹಾಸಾಗರ ವ್ಯಾಪ್ತಿಯಲ್ಲಿ ಚೀನಾ ತನ್ನ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಬೆನ್ನಲ್ಲೇ ಭಾರತ ತನ್ನ 9 ಮಿತ್ರ ರಾಷ್ಟ್ರಗಳ ಒಡಗೂಡಿ ಹಿಂದು ಮಹಾಸಾಗರದಲ್ಲಿ ಕಾರ್ಯಾಚರಣೆಗೆ ಇಳಿದಿದೆ.

Advertisement

ಇದನ್ನೂ ಓದಿ:-Karnataka Navy day ದೀಪಾಲಂಕಾರ ಗೊಂಡ ನೌಕೆಗಳು ಹೇಗಿತ್ತು ಗೊತ್ತಾ | ವಿಡಿಯೋ ನೋಡಿ

ರಾಷ್ಟ್ರೀಯ ಸಾಗರ ದಿನವಾದ ಇಂದು ಭಾರತೀಯ ನೌಕಾಪಡೆಯ ಈ ಪ್ರಯತ್ನಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಕಾರವಾರದಲ್ಲಿ ಮಧ್ಯಾಹ್ನ ಚಾಲನೆ ನೀಡಿದರು.

ಹಿಂದು ಮಹಾಸಾಗರ ವಲಯ(ಐಒಎಸ್‌) ವ್ಯಾಪ್ತಿಗೆ ಐಒಎಸ್‌ ಸಾಗರ ಹೆಸರಿನ ಹಡಗೊಂದನ್ನು ನಿಯೋಜನೆ ಮಾಡಿದ್ದು, ಹಡಗು ಕೊಚ್ಚಿಯಲ್ಲಿ ತನ್ನ ಸಮುದ್ರ ಪರಿಕ್ರಮ ಹಾಗೂ ಬಂದರು ಪರಿಶೀಲನೆ ನಡೆಸಿಕೊಂಡು ಕಾರವಾರಕ್ಕೆ ಆಗಮಿಸಿದೆ.

INS Sunaina

ಕಾರವಾರ ದಿಂದ ಈ  ಹಡಗು ಹಿಂದು ಮಹಾಸಾಗರ ವಲಯದಲ್ಲಿ ಮೇ ಮೊದಲ ವಾರದವರೆಗೂ ನಿಯೋಜನೆಗೊಳ್ಳಲಿದೆ. ನೌಕೆಯು ಭಾರತ ಪಶ್ಚಿಮ ಕರಾವಳಿಯ ಸ್ಪೆಷಲ್‌ ಇಕನಾಮಿಕ್‌ ಜೋನ್‌ ವ್ಯಾಪ್ತಿಯಲ್ಲಿ ಗಸ್ತು ನಡೆಸಲಿದೆ. ಈ ನೌಕೆಯಲ್ಲಿ ಕೇನ್ಯಾ, ಮಡ್ಗಾಸ್ಕರ್‌, ಮಾಲ್ಡೀವ್ಸ್‌, ಮಾರಿಶಸ್‌, ಮೊಝಾಂಬಿಕ್‌, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಕೊಮೊರೋಸ್‌, ಸೇಂಚ್‌ಹೆಲ್ಸ್‌ ಸೇರಿ 9  ದೇಶಗಳ 44 ಸಿಬ್ಬಂದಿ ಇದ್ದು, ಅವರಿಗೆ  ಸಾಗರ, ರಕ್ಷಣೆ, ಗಸ್ತು, ಹಡಗುಗಳ ಪರಿಶೀಲನೆ, ಅಕ್ರಮಗಳ ಜಪ್ತು, ಅಗ್ನಿ ಶಮನ, ಸಾಗರ ಸಂವಹನ, ಸೀಮೆನ್‌ಶಿಪ್‌, ಸಾಗರ ಮಧ್ಯದ ಸವಾಲುಗಳನ್ನು ಪರಿಶೀಲಿಸುವುದು  ಸೇರಿ ವಿವಿಧ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತಿದೆ.

 "ಒನ್‌ ಓಶನ್‌ ಒನ್‌ ಮಿಷನ್‌" ಎಂಬ ಉಪಕ್ರಮದಡಿ ಭಾರತ ಈ ಹೆಜ್ಜೆ ಇಟ್ಟಿದ್ದು, ಹಿಂದು ಮಹಾಸಾಗರ ವ್ಯಾಪ್ತಿಯ ಭಾರತ ಮಿತ್ರ ರಾಷ್ಟ್ರಗಳ ನಡುವೆ ಸಮುದ್ರ ವ್ಯವಹಾರದ ಬಾಂಧವ್ಯ ವೃದ್ಧಿ, ಪರಸ್ಪರ ಸಹಕಾರ ವೃದ್ಧಿ ಮಾಡಿಕೊಳ್ಳುವ ಜತೆಗೆ  ಹಿಂದು ಮಹಾಸಾಗರದ ರಕ್ಷಣೆ ಅದರ ಸುತ್ತಲಿನ ಬಳಕೆದಾರ ರಾಷ್ಟ್ರಗಳಿಗೆ ಸೇರಿದ್ದು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಲು ಭಾರತ  ಹೊರಟಿದೆ.

ಈಗಾಗಲೇ ಐ.ಎನ್.ಎಸ್ ಸುನೈನಾ ಯುದ್ದ ಹಡಗಿನಲ್ಲಿ ಭಾರತ ಸೇರಿದಂತೆ ಒಟ್ಟು ಹತ್ತು ರಾಷ್ಟ್ರದ 44 ಸಿಬ್ಬಂದಿಗಳಿದ್ದು  ಹಿಂದೂ ಮಹಾಸಾಗರದ ಮೂಲಕ ಆಪ್ರಿಕಾ ದೇಶಕ್ಕೆ ಈ ಹಡಗು ತೆರಳಲಿದೆ.

Advertisement
Tags :
DefenseExerciseSeaIOSIndiaIndianOceanIndoPacificInternationalCooperationKarwarMaritimeSecurityMilitaryDrillNavalExercise
Advertisement
Next Article
Advertisement