Uttara kannada:ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿಯ 19 ಸ್ಥಳಗಳು ಅತೀ ಸೂಕ್ಷ್ಮ -ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ.
ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿಯ 19 ಸ್ಥಳಗಳು ಅತೀ ಸೂಕ್ಷ್ಮ -ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ.

ಕಾರವಾರ :- ಉತ್ತರ ಕನ್ನಡ (uttara kannda)ಜಿಲ್ಲೆಯ 19 ಸ್ಥಳಗಳು ಅತೀ ಸೂಕ್ಷ್ಮ ಸ್ಥಳವಾಗಿದ್ದು ಈ ಭಾಗದಲ್ಲಿ ಯಾವಾಗಬೇಕಾದರೂ ಭೂ ಕುಸಿತ ಸಂಭವಿಸಬಹುದು ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ.
ಇಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ 439 ಭೂ ಕುಸಿತ ಪ್ರದೇಶವಿದೆ ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಈ ಹಿಂದೆಯೇ ವರದಿ ನೀಡಿದೆ.

ಶಿರೂರು ಭೂ (shirur) ಕುಸಿತದ ನಂತರ ಕೆಲವು ತಿಂಗಳ ಹಿಂದೆ ತಜ್ಞರರು ಸರ್ವೆ ಕಾರ್ಯ ನಡೆಸಿದ್ದು ಈ ವೇಳೆ ಹೆದ್ದಾರಿಯ 19 ಸ್ಥಳಗಳನ್ನು ಭೂಕುಸಿಯುವ ಸಾಧ್ಯತೆ ಕುರಿತು ವರದಿ ನೀಡಿತ್ತು.
ಇದನ್ನೂ ಓದಿ:-Karwar:ತುಂಬಿದ ಕದ್ರಾ ಜಲಾಶಯ- ಯಾವ ಡ್ಯಾಮ್ ನಲ್ಲಿ ಎಷ್ಟು ನೀರಿದೆ ಗೊತ್ತಾ?
ಈ ವರದಿ ಆಧರಿಸಿ ತುರ್ತು ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದ್ದು 19 ಸ್ಥಳಗಳಲ್ಲಿ ವಾಹನ ಸವಾರರಿಗೆ ವಾಹನ ನಿಲ್ಲಿಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ತಿಳಿಸಿದರು.

ಶಿರೂರೂರಿನಲ್ಲಿ ನಿರ್ಬಂಧ
ಇನ್ನು ಕಳೆದ ವರ್ಷ ಜುಲೈ 16 ರಂದು ಶಿರೂರಿನಲ್ಲಿ ಭೂ ಕುಸಿತವಾಗಿ 11 ಜನ ಮೃತಪಟ್ಟಿದ್ದರು. ಇದೀಗ ಇದೇ ಭಾಗದಲ್ಲಿ ಮಣ್ಣು ಸಡಿಲವಾಗಿದ್ದು ಯಾವ ಸಂದರ್ಭದಲ್ಲಿಯಾದರೂ ಭೂ ಕುಸಿತವಾಗುವ ಸಾಧ್ಯತೆಗಳಿದ್ದು ಈ ಹಿನ್ನಲೆಯಲ್ಲಿ ಆ ಭಾಗದಲ್ಲಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದಿಂದ ತಡೆಗೋಡೆ ನಿರ್ಮಾಣಕ್ಕೆ ಸಿದ್ದತೆ ನಡೆದಿದ್ದು ಒಂದು ತಿಂಗಳಲ್ಲಿ ಕಾಮಗಾರಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದು ಈ ಹಿಂದೆಯೇ ತಕ್ಷಣದಲ್ಲಿ ಕಾಮಗಾರಿ ಮಾಡಲು ಸೂಚಿಸಲಾಗಿತ್ತು .ಆದರೇ ಹೆದ್ದಾರಿ ಪ್ರಾಧಿಕಾರಕ್ಕೆ ಅನುಮತಿ ಸಿಗುವುದು ತಡವಾಗಿದ್ದು ಈ ತಿಂಗಳಲ್ಲಿ ಕಾಮಗಾರಿ ಮಾಡುವುದಾಗಿ ತಿಳಿಸಿದ್ದಾರೆ.