Uttara kannda ಜಿಲ್ಲೆಯ ಲೈಫ್ ಗಾರ್ಡ ಗಳಿಗಿಲ್ಲ ಜೀವಕ್ಕೆ ಬೆಲೆ ! ಆಡಳಿತ ಜಾರಿಕೊಂಡ ಕಥೆ ಏನು ಗೊತ್ತಾ?
ಕಾರವಾರ :- ಉತ್ತರ ಕನ್ನಡ ಜಿಲ್ಲೆ ಪ್ರವಾಸೋಧ್ಯಮ ( tourism) ಕ್ಕೆ ಹೆಸರು ಮಾಡಿದ ಜಿಲ್ಲೆ. ಒಂದು ಕಾಲದಲ್ಲಿ ಪ್ರವಾಸಿಗರನ್ನು ( tourist) ಹೆಚ್ಚು ಸೆಳೆಯುತಿದ್ದ ಈ ಜಿಲ್ಲೆ ಇದೀಗ ಪ್ರವಾಸಿಗರಿಗೇ ನಿರ್ಬಂಧ ಹೇರುವ ಮಟ್ಟಕ್ಕೆ ಕುಸಿದಿದೆ.
ಹೌದು ಪ್ರವಾಸೋಧ್ಯಮವೇ ಮುಖ್ಯವಾಗಿರುವ ಗೋವಾದಂತ (Goa) ರಾಜ್ಯದ ಗಡಿಯನ್ನು ಹಂಚಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ (uttara kannda )ಪ್ರವಾಸೋಧ್ಯಮ ದಲ್ಲಿ ಅಪಾಯಕಾರಿ ಜಿಲ್ಲೆಯ ಸ್ಥಾನ ಪಡೆದುಕೊಂಡಿದೆ. ಪಕ್ಕದ ಗೋವಾ ರಾಜ್ಯ ಹಾಗೂ ನಮ್ಮ ರಾಜ್ಯದ ಉಡುಪಿ ,ಮಂಗಳೂರು ಜಿಲ್ಲೆಗಳಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಹೋಲಿಸಿದರೆ ಸ್ವಚ್ಛತೆ ,ಸುರಕ್ಷತೆ ಹಾಗೂ ಮೂಲಭೂತ ಸೌಕರ್ಯಗಳ ದೊಡ್ಡ ಸಮಸ್ಯೆಗಳಿವೆ.
ಇದನ್ನೂ ಓದಿ:-Murdeshwar ದುರಂತ- ಆರು ಜನ ಶಿಕ್ಷಕರ ಮೇಲೆ ಪ್ರಕರಣ ದಾಖಲು- ತಲಾ5 ಲಕ್ಷ ಪರಿಹಾರ ಘೋಷಣ
ಬೀಚ್ ಗಳಲ್ಲಿ ಇರುವ ಹೈ ಮಾಸ್ಕ ದೀಪ ಬಿಲ್ ಕಟ್ಟಲಾಗದ ಸ್ಥಿತಿಯಲ್ಲಿ ಜಿಲ್ಲಾಡಳಿತವಿದ್ದರೇ ಅಕ್ರಮ ಜಲಸಾಹಸ ಚಟುವಟಿಕೆಯೇ ಹೆಚ್ಚಿದೆ . ಇಲ್ಲಿ ಪ್ರವಾಸಿಗರ ರಕ್ಷಣೆಗೆ ಬೇಕಾದ ಯಾವ ಮುಂಜಾಗೃತ ಕ್ರಮಗಳಿಲ್ಲ. ಹೀಗಾಗಿ ಬೇರೆ ಪ್ರವಾಸೋಧ್ಯಮ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯೂ ಹೆಚ್ಚು.
ಲೈಫ್ ಗಾರ್ಡ ಗಳಿಗಿಲ್ಲ ಜೀವಕ್ಕೆ ರಕ್ಷಣೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 27 ಲೈಪ್ ಗಾರ್ಡ ಸಿಬ್ಬಂದಿಯಿದ್ದಾರೆ. ಪ್ರತಿ ಲೈಪ್ ಗಾರ್ಡ ಸಿಬ್ಬಂದಿಗೆ ಕೈಗೆ 14 ಸಾವಿರ ಪ್ರವಾಸೋಧ್ಯಮ ಸಮಿತಿಯಿಂದ ಸಂಬಳ ನೀಡಲಾಗುತ್ತದೆ. ಈ ಸಂಬಳ ಎರಡು ಅಥವಾ ಮೂರು ತಿಂಗಳಿಗೆ ಒಮ್ಮೆ ತಲುಪುತ್ತದೆ. ಇನ್ನು ಇವರಿಗೆ ಈ ಹಿಂದೆ ತರಬೇತಿ ನೀಡಿ ಲೈಪ್ ಇನ್ಸುರೆನ್ ಸಹ ಮಾಡಿಸಲಾಗಿತ್ತು.
ಆದರೇ ಇದೀಗ ಇವರಿಗೆ ಲೈಪ್ ಇನ್ಸುರೆನ್ಸ್ ಇಲ್ಲ , ರಕ್ಷಣಾ ಸಾಮಗ್ರಿ ಗಳನ್ನೇ ನೀಡದೇ ಎಂಟು ವರ್ಷಗಳಾಗಿವೆ. ವಾಚ್ ಟವರ್ ಸಹ ಹಲವು ಕಡೆ ಮುರಿದುಬೀಳುವ ಹಂತದಲ್ಲಿದೆ.
ಇನ್ನು ಕಳೆದ ನಾಲ್ಕು ವರ್ಷದಿಂದ ಹೊಸದಾಗಿ ಬಂದಂತಹ ಜಿಲ್ಲಾಧಿಕಾರಿಗಳಿಗೆ ಲೈಪ್ ಗಾರ್ಡ ಗಳು ತಮಗೆ ಇನ್ಸುರೆನ್ಸ್ ( insurance) ಮಾಡಿಸಿ ,ಸಂಬಳ ಸಮರ್ಪಕವಾಗಿ ನೀಡಿ ಎಂದು ಮನವಿ ಕೊಡುತ್ತಲೇ ಇದ್ದಾರೆ. ಆದರೇ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಜಿಲ್ಲಾಡಳಿತ ನಿರ್ಲಕ್ಷ ಮಾಡಿದೆ.
ಲೈಫ್ ಗಾರ್ಡ ಗಳು(lifegard)ಜೀವ ರಕ್ಷಕ ಸಾಧನವಿಲ್ಲದೇ ಜೀವ ಪಣಕ್ಕಿಟ್ಟು ಸಮುದ್ರದಲ್ಲಿ ಮುಳುಗುವ ಪ್ರವಾಸಿಗರನ್ನು ರಕ್ಷಣೆ ಮಾಡುತಿದ್ದಾರೆ.ಒಂದುವೇಳೆ ಲೈಪ್ ಗಾರ್ಡ ಗಳೇ ಜೀವ ತೆತ್ತರೇ ಅವರ ಕುಟುಂಬದ ಗತಿಯೇನು? ಇದನ್ನು ಕೇಳಿದರೇ ಕೆಲಸ ಬಿಟ್ಟು ಹೋಗಿ ಅಂತಾರೆ ಹೀಗಾಗಿ ಹಿಂದೆ ಹಲವರು ಕೆಲಸ ಬಿಟ್ಟು ಹೋಗಿದ್ದಾರೆ.
ಬೇರೆಯವರನ್ನು ರಕ್ಷಣೆ ಮಾಡುವ ನಮಗೇ ರಕ್ಷಣೆ ಇಲ್ಲ ಎಂಬುದು ಹೆಸರು ಹೇಳಲು ಬಯಸದ ಲೈಪ್ ಗಾರ್ಡರೊಬ್ಬರು ತಿಳಿಸಿದ್ದಾರೆ.
ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿಯಿಂದ ಲೈಪ್ ಗಾರ್ಡ ಗಳ ನೇಮಕಾತಿಯೇ ನಡೆದಿಲ್ಲ!
ಇನ್ನು ಸ್ಥಳೀಯರೊಬ್ಬರು ಮಾಹಿತಿ ಹಕ್ಕಿನಲ್ಲಿ ಪ್ರವಾಸೋಧ್ಯಮ ಇಲಾಖೆಗೆಯಲ್ಲಿ ಮಾಹಿತಿ ಕೇಳಿದ್ದು ಈ ಮಾಹಿತಿಯಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ 6.11.2024 ರ ವರೆಗೆ ಮುರುಡೇಶ್ವರ ದಲ್ಲಿ ಲೈಪ್ ಗಾರ್ಡ ನೇಮಕ ಮಾಡಿಲ್ಲ ಎಂದು ಉಲ್ಲೇಖಿಸಿದೆ.

ಇನ್ನು ಜಿಲ್ಲಾ ಪ್ರವಾಸೋಧ್ಯಮ ಸಮಿತಿ ಇದ್ದು ಇಲ್ಲದಂತಾಗಿದ್ದು ಇಲ್ಲಿ ನಡೆಯುವ ಸಭೆ ,ಬದಲಾವಣೆಗಳು ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿರುವ ಅಧ್ಯಕ್ಷರಿಗೆ ತಿಳಿಯುವುದೇ ಇಲ್ಲ.
ಸದ್ಯ ಜಿಲ್ಲಾ ಪ್ರವಾಸೋಧ್ಯಮ ಸಮಿತಿ ಇದ್ದರೂ ಇದೀಗ ರಿವರ್ ರ್ಯಾಫಿಂಗ್ ಮತ್ತು ಜಲಸಾಹಸ ಕ್ರೀಡೆ ನಿರ್ವಹಣೆ ಹಾಗೂ ಮೇಲುಸ್ತುವಾರಿ ಸಮಿತಿ ಎಂದು ಹೊಸ ಸಮಿತಿ ರಚನೆ ಮಾಡಲಾಗಿದ್ದು ,ಜಿಲ್ಲೆಯಿಂದ ಸಮಿತಿಗೆ ಬರುವ ಬಾಡಿಗೆ ಮೊತ್ತಗಳು ಸಹ ಈಗಿನ ಹೊಸ ಸಮಿತಿಗೆ ಹೋಗುತ್ತಿದೆ.

ಇದನ್ನೂ ಓದಿ:-Murdeshwara| ಮುರ್ಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಧಿಡೀರ್ ನಿರ್ಬಂಧ!
ಜಿಲ್ಲೆಯ ಪ್ರವಾಸೋಧ್ಯಮ ನಡೆಸಲು ಎರಡು ಸಮಿತಿ ಇದ್ದರೂ ಲೈಪ್ ಗಾರ್ಡ ಗಳಿಗೆ ತಿಂಗಳ ಸಂಬಂಳ ,ಇನ್ಸುರೆನ್ಸ್ ಮಾಡದೇ ಇರುವ ಪ್ರವಾಸೋಧ್ಯಮ ಸಮಿತಿ ಪ್ರವಾಸಿಗರನ್ನು ರಕ್ಷಣೆ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದ್ದು, ಜಿಲ್ಲಾಡಳಿತ ಇನ್ನಾದರೂ ಕಣ್ಣಿಗೆ ಕಟ್ಟಿದ ಬಟ್ಟೆ ತೆಗೆದು ನೀಡಲಿ ಎಂಬುದು ನಮ್ಮ ಹಾರೈಕೆ.